World Cup 2023: ಡಚ್ಚರಿಗೆ ಡಿಚ್ಚಿ ಕೊಟ್ಟು ಗೆಲುವಿನ ಖಾತೆ ತೆರೆದ ಸಿಂಹಳಿಯರು – ಲಂಕಾಗೆ 5 ವಿಕೆಟ್‌ಗಳ ಜಯ

Public TV
2 Min Read

ಲಕ್ನೋ: ಐಸಿಸಿ ವಿಶ್ವಕಪ್ 2023ರ (World Cup 2023) ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿದ್ದ ಶ್ರೀಲಂಕಾ (Sri Lanka) ತಂಡ ಕೊನೆಗೂ ಗೆಲುವಿನ ಖಾತೆ ತೆರೆದಿದೆ.

ಶನಿವಾರ ಇಲ್ಲಿನ ಲಕ್ನೋದ (Lucknow) ಏಕನಾ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್‌ (Netherlands) ವಿರುದ್ಧ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಸಾಧಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ನೆದರ್ಲೆಂಡ್ಸ್‌ 48.2 ಓವರ್‌ಗಳಲ್ಲಿ 262 ರನ್‌ ಗಳಿಸಿತ್ತು. 264 ರನ್‌ಗಳ ಗುರಿ ಬೆನ್ನತ್ತಿದ್ದ ಲಂಕಾ ಪಡೆ 48.2 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 263 ರನ್‌ ಗಳಿಸಿ ಗೆಲುವು ಸಾಧಿಸಿತು.

ನೆದರ್ಲೆಂಡ್ಸ್‌ ಪರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಕಾಲಿನ್ ಅಕರ್ಮನ್ (Colin Ackermann) 29, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 70 ರನ್‌ (82 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಲೋಗನ್ ವ್ಯಾನ್ ಬೀಕ್ 59 ರನ್‌ (75 ಎಸೆತ, 1 ಬೌಂಡರಿ, 1 ಸಿಕ್ಸರ್‌) ಬಾರಿಸುವ ಮೂಲಕ ತಂಡ 250 ಗಡಿ ದಾಟಲು ನೆರವಾದರು.

ಲಂಕಾ ಪರ ಬೌಲಿಂಗ್‌ನಲ್ಲಿ ದಿಲ್ಶಾನ್ ಮದುಶಂಕ (Dilshan Madushanka) ಮತ್ತು ಕಸೂನ್ ರಜಿತಾ (Kasun Rajitha)  ತಲಾ 4 ವಿಕೆಟ್ ಪಡೆದರೆ, ಮಹೀಶ್‌ ತೀಕ್ಷಣ 1 ವಿಕೆಟ್‌ ಪಡೆದು ಮಿಂಚಿದರು.

ಇನ್ನೂ ಚೇಸಿಂಗ್‌ ಆರಂಭಿಸಿದ ಲಂಕಾ ಪಡೆ ವಿಕೆಟ್‌ ಉಳಿಸಿಕೊಂಡರೂ ನಿಧಾನಗತಿಯ ಬ್ಯಾಟಿಂಗ್‌ ಮಾಡಿದರೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಲಂಕಾ ಪರ ಪತುಮ್ ನಿಸಂಕಾ 54 ರನ್‌ (52 ಎಸೆತ, 9 ಬೌಂಡರಿ), ಸದೀರ ಸಮರವಿಕ್ರಮ (Sadeera Samarawickrama) ಅಜೇಯ 91 (7 ಬೌಂಡರಿ, 107 ಎಸೆತ) ರನ್‌ ಬಾರಿಸಿದ್ರೆ, ಚರಿತ್‌ ಅಸಲಂಕಾ 44 ರನ್‌ ಮತ್ತು ಧನಂಜಯ್ ಡಿಸಿಲ್ವಾ 30 ರನ್ ಬಾರಿಸಿ ಗೆಲುವಿನ ನಗೆ ಬೀರಿದರು.

ನೆದರ್ಲೆಂಡ್ಸ್‌ ಪರ ಆರ್ಯನ್ ದತ್ 3 ವಿಕೆಟ್ ಕಿತ್ತರೆ, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್ಮನ್ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್