ಮಾಸ್ ಹೀರೋ ಆಗಿ ನಿಲ್ಲುವ ಭರವಸೆ ಮೂಡಿಸಿದ ‘ಇನಾಮ್ದಾರ್’ ಹೀರೋ

Public TV
2 Min Read

ನಾಮ್ದಾರ್… (Inamdar)  ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಖತ್ ಸುದ್ದಿ ಮಾಡುತ್ತಿರುವ ಸಿನಿಮಾ. ಕರಾವಳಿ ಭಾಗದ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಡೈರೆಕ್ಟ್ ಮಾಡಿರುವ ಈ ಚಿತ್ರ, ಕಥಾವಸ್ತು ಹಾಗೂ ಪಾತ್ರವರ್ಗದಿಂದ ಕುತೂಹಲ ಹುಟ್ಟಿಸಿದೆ. ವಿಶೇಷ ಅಂದರೆ ಈ ಸಿನಿಮಾದಿಂದ ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆಗೊಳ್ಳುತ್ತಿರುವ ರಂಜನ್ ಛತ್ರಪತಿ (Ranjan Chhatrapati), ಮೊದಲ ನೋಟದಲ್ಲೇ ಮಾಸ್ ಹೀರೋ ಆಗಿ ನಿಲ್ಲುವ ಭರವಸೆ ಮೂಡಿಸಿದ್ದಾರೆ.ಸ್ಯಾಂಡಲ್ ವುಡ್ ನ ಆ್ಯಕ್ಟರ್ ಕಂ ಆ್ಯಕ್ಷನ್ ಕಂಪೋಸರ್ ಥ್ರಿಲ್ಲರ್ ಮಂಜು ರಂಜನ್ ಪ್ರತಿಭೆನಾ ಗುರ್ತಿಸಿ ಹೊಸ ಹುರುಪು ತುಂಬುವ ಕೆಲಸ ಮಾಡಿದ್ದಾರೆ.

ರಂಜನ್ ಛತ್ರಪತಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಸಿನಿಮಾ ಕುಟುಂಬದ ಹಿನ್ನಲೆಯೇನು ಇಲ್ಲ. ಆದರೆ, ಕಲಾವಿದನೆನಿಸಿಕೊಳ್ಳಬೇಕು ಎನ್ನುವ ಹುಚ್ಚು ಮಾತ್ರ ಮೊದಲಿನಿಂದಲೂ ಇತ್ತು. ಹಲವು ವರ್ಷಗಳ ಹಿಂದೆ ಗಾಂಧಿನಗರಕ್ಕೆ ಬಂದು ಅಲೆದಿದ್ದು ಉಂಟಂತೆ. ಆದರೆ, ಅವಕಾಶ ಅಷ್ಟು ಸುಲಭವಾಗಿ ದಕ್ಕದ ಅಸಲಿಯತ್ತು ಅರಿವಾಗಿ ಹುಟ್ಟೂರಿಗೆ ವಾಪಾಸ್ ಆದ್ರಂತೆ. ಜೀವನೋಪಾಯಕ್ಕಾಗಿ ಹೋಟೆಲ್ ಮಾಡಿಕೊಂಡು ಇರುವ ಹೊತ್ತಲ್ಲೇ ರಂಜನ್ ಛತ್ರಪತಿಗೆ ನಿರ್ದೇಶಕ ಸಂದೇಶ್ ಶೆಟ್ಟಿಯವರ ಪರಿಚಯವಾಗಿದೆ. ಅಲ್ಲಿಂದ ಶುರುವಾದ ಇವರಿಬ್ಬರ ಒಡನಾಟ ಈಗ ‘ ಇನಾಮ್ದಾರ್’ ಚಿತ್ರದವರೆಗೆ ಬಂದು ನಿಂತಿದೆ.

ಸಂದೇಶ್ ಶೆಟ್ಟಿಯ (Sandesh Shetty) ನಿರ್ದೇಶನದ ಇನಾಮ್ದಾರ್ ಚಿತ್ರದಲ್ಲಿ ರಂಜನ್ ಛತ್ರಪತಿ ನಾಯಕನಟನಾಗಿ ಬಣ್ಣ ಹಚ್ಚಿದ್ದಾರೆ. ಇನಾಮ್ದಾರ್ ವಂಶದ ಮಗನ ಪಾತ್ರವನ್ನು ನಿಭಾಯಿಸಿದ್ದಾರೆ. ಯಾವುದೇ ಅಭಿನಯ ತರಬೇತಿಯನ್ನ ಪಡೆದಿಲ್ಲವಾದರೂ ಕೂಡ ನಿರ್ದೇಶಕರ ಅಣತಿಯನ್ನ ಚಾಚೂ ತಪ್ಪದೇ ಪಾಲಿಸಿ ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಕೆಲಸ ಮಾಡಿದ್ದಾರಂತೆ. ಈ ಬಗ್ಗೆ ಖುಷಿಯಿಂದಲೇ ನಮ್ಮೊಟ್ಟಿಗೆ ಮಾತುಕತೆಗಿಳಿದ ನಾಯಕ ರಂಜನ್, ನಂಗೊಂದು ಇಂಟ್ರುಡಕ್ಷನ್ ಫೈಟ್ ಇದೆ. ಅದನ್ನು ಥ್ರಿಲ್ಲರ್ ಮಂಜು ಸರ್ ಅದ್ಭುತವಾಗಿ ಕಂಪೋಸ್ ಮಾಡಿದ್ದಾರೆ. ಬಾಡಿ ಡಬಲ್ ಮಾಡಿಸದೇ, ಡ್ಯೂಪ್ ಹಾಕಿಸದೇ ನನ್ನಿಂದ ಹೈವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್ ಮಾಡಿಸಿದ್ದಾರೆ. ಆ ಸಾಹಸ ಸನ್ನಿವೇಶ ಸಿನಿಮಾ ಪ್ರೇಮಿಗಳ ಮೈ ರೋಮಾಂಚನಗೊಳಿಸುತ್ತವೆ. ಖುಷಿಯ ವಿಚಾರ ಅಂದರೆ ನಾನು ಅಗ್ರೇಸೀವ್ ಆಗಿ ಫೈಟ್ ಮಾಡಿದ್ದನ್ನು ನೋಡಿ ಥ್ರಿಲ್ಲರ್ ಮಂಜು ಸರ್ ಹೊಗಳಿದರು. ಮಾಸ್ ಸಿನಿಮಾಗಳಿಗೆ ಪಕ್ಕಾ ಸ್ಯೂಟ್ ಆಗ್ತೀಯಾ ಟ್ರೈ ಮಾಡು ಅಂತೇಳಿದ್ದಾರೆ ಎಂದು ರಂಜನ್ ಹೇಳಿಕೊಳ್ತಾರೆ.

ಇನ್ನೂ ಇಂಟ್ರುಡಕ್ಷನ್ ಫೈಟ್ಸ್ ಜೊತೆಗೆ ಮೂರು ಹಾಡುಗಳಲ್ಲಿ ರಂಜನ್ ಛತ್ರಪತಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿಲ್ಕು ಮಿಲ್ಕು ಹಾಡಿನಲ್ಲಿ ಎಸ್ತರ್ ನರೋನ್ಹಾ ಜೊತೆಗೆ ಪಡ್ಡೆಹೈಕ್ಳ ಬೆವರಿಳಿಸಿದ್ದಾರೆ. ಚೆಂದಾನೇ ಚೆಂದಾನೇ ಹಾಡಿನ ಮೂಲಕ ಚಿತ್ರಪ್ರೇಮಿಗಳ ಗಮನ ಸೆಳೆದಿದ್ದಾರೆ. ಇನ್ನೊಂದು ಹಾಡು ಬೆಳ್ಳಿತೆರೆ ಮೇಲೆ ಮೂಡಲಿದೆ.

 

ಇನ್ನೇನು ಸಿನಿಮಾ ರಿಲೀಸ್ ಗೆ ಸಜ್ಜಾಗಿದೆ. ಇದೇ ಅಕ್ಟೋಬರ್ 27 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಾಣಿಸೋಕೆ ತಯಾರಿ ನಡೆಸಿದೆ. ಗೆಳೆಯ ರಂಜನ್ ಛತ್ರಪತಿನಾ ಕೈ ಹಿಡಿದು ನಿರ್ದೇಶಕ ಸಂದೇಶ್ ಹೀರೋ ಚಾನ್ಸ್ ಕೊಟ್ಟಂತೆ, ಅರ್ಧಕ್ಕೆ ನಿಂತು ಹೋದ ಇನಾಮ್ದಾರ್ ಚಿತ್ರವನ್ನು ಟೇಕಾಫ್ ಮಾಡುವ ಮೂಲಕ ಸ್ನೇಹಿತ ಸಂದೇಶ್ ಶೆಟ್ಟಿನಾ ನಿರಂಜನ್ ಶೆಟ್ಟಿ ಕೈಹಿಡಿದಿದ್ದಾರೆ. ಸೋ, ದೋಸ್ತಿಗಳು ಜೊತೆಯಾಗಿ ತಯಾರಿಸಿರೋ ಇನಾಮ್ದಾರ್ ಕಥೆ ಗಟ್ಟಿತನದಿಂದ ಕೂಡಿದ್ದರೆ ಗಲ್ಲಾಪೆಟ್ಟಿಗೆ ಗ್ಯಾರಂಟಿ ಉಡೀಸ್.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್