ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಡವಟ್ಟು- ಕೆಇಎಯಿಂದ ನೂರಾರು ಅಭ್ಯರ್ಥಿಗಳಿಗೆ ಸಂಕಷ್ಟ

Public TV
2 Min Read

ಧಾರವಾಡ: ಕರ್ನಾಟಕ ರಾಜ್ಯದಲ್ಲಿನ ವಿವಿಧ ನಿಗಮಗಳಿಗೆ ಸಂಬಂಧಿಸಿದ 656 ಹುದ್ದೆಗೆ ನೇಮಕಾತಿಗಾಗಿ ಇದೇ ಅಕ್ಟೋಬರ್ 28 ಮತ್ತು 29ರಂದು ನೇಮಕಾತಿ ಪರೀಕ್ಷೆ ನಡೆಯಲಿವೆ. ಅದರಲ್ಲಿ ಆಹಾರ ನಿಗಮ, ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ, ಎಂಎಸ್‍ಐಎಲ್‍ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಯಲಿದೆ. ಆದರೆ ಈ ಪರೀಕ್ಷೆ ಆಯೋಜನೆ ಮಾಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದೊಡ್ಡ ಎಡವಟ್ಟು ಮಾಡಿದೆ.

ಇದರಿಂದ ಧಾರವಾಡದಲ್ಲಿ (Dharwad) ಕೊಚಿಂಗ್ ಪಡೆಯುತ್ತಿರುವ ಸಾವಿರಾರು ಅಭ್ಯರ್ಥಿಗಳು ಈ ಪರೀಕ್ಷೆಗಳಿಗೆ ಅರ್ಜಿ ಹಾಕಿದ್ದಾರೆ. ಆದರೆ ಒಂದೇ ದಿನ ಈ ಅಭ್ಯರ್ಥಿಗಳು ಒಂದು ಪರೀಕ್ಷೆ ಹಾವೇರಿ ಜಿಲ್ಲೆಯಲ್ಲಿ ಬರೆದ್ರೆ, ಅದೇ ದಿನ ಮತ್ತೊಂದು ಪರೀಕ್ಷೆ ಧಾರವಾಡ, ಬೆಂಗಳೂರಲ್ಲಿದೆ. ಒಂದೇ ನೇಮಕಾತಿಯ ಒಂದೇ ವಿಷಯದ ಎರಡೆರಡು ಪರೀಕ್ಷೆಗಳಿಗೆ ಬೇರೆ ಬೇರೆ ಕೇಂದ್ರ ಕೊಟ್ಟು ಕೆಇಎ ಎಡವಟ್ಟು ಮಾಡಿದೆ. ಇದರಿಂದ ನೂರಾರು ಅಭ್ಯರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಎಫ್‍ಡಿಎ, ಎಸ್‍ಡಿಎ, ಸಿನಿಯರ್ ಮತ್ತು ಜ್ಯೂನಿಯರ್ ಅಸಿಸ್ಟಂಟ್ ಆಗಬೇಕು ಎಂದು ಕನಸು ಹೊತ್ತು ಬಂದಿದ್ದ ಎಷ್ಟೋ ಅಭ್ಯರ್ಥಿಗಳು ಈಗ ಅತಂತ್ರ ಸ್ಥಿತಿಗೆ ಬಂದು ನಿಂತಿದ್ದಾರೆ. ಹೀಗಾಗಿ ಸರ್ಕಾರ ಇದನ್ನ ಗಮನಿಸಬೇಕು ಎಂದು ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕನಕಪುರ ಕ್ಷೇತ್ರದ ಶಿಕ್ಷಕರಿಗಿಲ್ಲ ವರ್ಗಾವಣೆ ಭಾಗ್ಯ- ಸಿಎಂ ಹೇಳಿದ್ರೂ ಟ್ರಾನ್ಸ್‌ಫರ್‌ಗೆ ತಡೆ

ಇದೊಂದೇ ಎಡವಟ್ಟು ಆಗಿದ್ರೆ ಬೇರೆ. ಇದೇ ನವೆಂಬರ್ 5 ರಂದು ನಡೆಯಲಿರುವ ಕೆಪಿಎಸ್‍ಸಿ ಮತ್ತು ಕಾನ್ಸ್‍ಸ್ಟೇಬಲ್ ಪರೀಕ್ಷೆಯಲ್ಲಿಯೂ ಗೊಂದಲ ಸೃಷ್ಟಿಯಾಗಿದೆ. ನವೆಂಬರ್ 5 ರಂದು ಒಂದೇ ದಿನ ಎರಡು ಪರೀಕ್ಷೆ ಇಡಲಾಗಿದೆ. ಎರಡೂ ಪರೀಕ್ಷೆಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳು ಒಂದೇ ಪರೀಕ್ಷೆಗೆ ಹಾಜರಾಗಬೇಕು. ಇದನ್ನ ಬೇರೆ ಬೇರೆ ದಿನಾಂಕಕ್ಕೆ ಇಟ್ಟಿದ್ರೆ ಎರಡೂ ಪರೀಕ್ಷೆ ಬರೆಯಲು ಅವಕಾಶ ಸಿಗ್ತಿತ್ತು. ಆದರೆ ಇದೀಗ ಈ ಕೆಇಎ ಎಡವಟ್ಟಿನ ಬೆನ್ನಲ್ಲೇ ಕೆಪಿಎಸ್‍ಸಿ ಹಾಗೂ ಕಾನಸ್ಟೇಬಲ್ ಪರೀಕ್ಷೆ ಕೂಡಾ ಗೊಂದಲಕ್ಕೆ ಎಡೆ ಮಾಡಿವೆ. ಸದ್ಯ ಈ ಎರಡೂ ಪರೀಕ್ಷೆ ಕೂಡಾ ಬೇರೆ ದಿನಾಂಕ ನಿಗದಿ ಮಾಡಿ ನಮಗೆ ಅವಕಾಶ ಮಾಡಿಕೊಡಿ ಎಂದು ಅಭ್ಯರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿವೆ.

ಸರ್ಕಾರ ಪರೀಕ್ಷೆ ನಡೆಸಲು ಪ್ರಾಧಿಕಾರಕ್ಕೆ ಕೊಟ್ಟಿದೆ. ಆದರೆ ದಿನಾಂಕ ಹಾಗೂ ಸ್ಥಳ ನಿಗದಿ ಮಾಡಬೇಕಾದ ಪ್ರಾಧಿಕಾರ ಹಾಗೂ ಕೆಪಿಎಸ್ಸಿಯೇ ಇಂತ ಎಡವಟ್ಟು ಮಾಡಿ, ಪರೀಕ್ಷಾ ಅಭ್ಯರ್ಥಿಗಳ ಜೀವನದ ಜೊತೆ ಆಟ ಆಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಎದ್ದಿದೆ. ಇದನ್ನ ಸರಿ ಮಾಡಿ ಅಭ್ಯರ್ಥಿಗಳಿಗೆ ಎಲ್ಲಾ ಪರೀಕ್ಷೆ ಬರೆಯಲು ಅವಕಾಶ ಮಾಡಿದ್ರೆ ಸಾಕು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್