ಗುರುದತ್ ಗಾಣಿಗ ನಿರ್ದೇಶನದ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಹೀರೋ

Public TV
2 Min Read

ಟ  ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ಹೊಸ ಸಿನಿಮಾದ  (New Movie) ಪೋಸ್ಟರ್ ನವರಾತ್ರಿಯ ಮೊದಲ ದಿನ ಬಿಡುಗಡೆಯಾಗಿದೆ. ಇದು ಪ್ರಜ್ವಲ್ ನಟನೆಯ 40ನೇ ಸಿನಿಮಾ. ಈಗಾಗಲೇ ಪ್ರಜ್ವಲ್ ಬಳಿ ‘ಮಾಫಿಯಾ’ ಸೇರಿದಂತೆ ಇನ್ನೂ ಹೆಸರಿಡದ ಎರಡು ಚಿತ್ರಗಳಿವೆ. ಇದೀಗ 40ನೇ ಸಿನಿಮಾ ಅನೌನ್ಸ್ ಆಗಿದೆ. ಸದ್ಯ ಪೋಸ್ಟರ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಪ್ರಜ್ವಲ್ ಹೊಸ ಸಿನಿಮಾಗೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಸದ್ಯ  ರಿಲೀಸ್ ಆಗಿರುವ ಪೋಸ್ಟರ್ ಭರ್ಜರಿ ಆಗಿದ್ದು ಕುತೂಹಲ ಹೆಚ್ಚಿಸಿದೆ. ಪ್ರಜ್ವಲ್ ಸಿನಿ ಜೀವನದಲ್ಲೇ ಇದೊಂದು ವಿಭಿನ್ನವಾದ ಸಿನಿಮಾವಾಗಲಿದೆ. ಇದುವರೆಗೂ ಕಾಣಿಸಿಕೊಳ್ಳದೆ ಇರುವ ಪಾತ್ರದಲ್ಲಿ ಪ್ರಜ್ವಲ್ ನಟಿಸುತ್ತಿದ್ದಾರೆ.

ಪ್ರಜ್ವಲ್ ದೇವರಾಜ್ ಅವರ 40ನೇ ಸಿನಿಮಾಗೆ ‘ಅಂಬಿ ನಿಂಗೆ ವಯಸಾಯ್ತೋ’ ಖ್ಯಾತಿಯ ನಿರ್ದೇಶಕ  ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಗುರುದತ್ (Gurudutt Ganiga) ನಿರ್ದೇಶನದ ಎರಡನೇ ಸಿನಿಮಾವಾಗಿದೆ. ಮೊದಲ ಸಿನಿಮಾ ‘ಅಂಬಿ ನಿಂಗೆ ವಯಸಾಯ್ತೋ’   2018 ರಲ್ಲಿ ಬಿಡುಗಡೆಯಾಗಿತ್ತು. ಬಳಿಕ ಗುರುದತ್ ಯಾವುದೇ ಸಿನಿಮಾ ಮಾಡಿರಲಿಲ್ಲ. ಮೊದಲ ಸಿನಿಮಾದಲ್ಲೇ ರೆಬಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್, ಸುಹಾಸಿನಿ ಅಂತಹ ದೊಡ್ಡ ದೊಡ್ಡ ಸ್ಟಾರ್ ಕಲಾವಿದರಿಗೆ ನಿರ್ದೇಶನ ಮಾಡಿದ್ದ ಗುರು ಮುಂದಿನ ಸಿನಿಮಾ ಯಾರ ಜೊತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದೀಗ ಆ ಎಲ್ಲಾ ಕುತೂಹಲ ಮತ್ತು ಪ್ರಶ್ನೆಗಳಿಗೆ ತೆರೆಬಿದ್ದಿದೆ.

ಸಿನಿಮಾದ ಪೋಸ್ಟರ್ ನೋಡಿದ್ದರೆ ಇದು ಕಂಬಳದ ಬಗ್ಗೆ ಇರುವ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಈ ಮೂಲಕ  ಕರಾವಳಿ ಭಾಗದ ಮತ್ತೊಂದು ಸಿನಿಮಾ ಚಿತ್ರಮಂದಿರದ ಅಂಗಳಕ್ಕೆ ಬರಲು ಸಜ್ಜಾಗುತ್ತಿದೆ. ಈ ಸಿನಿಮಾ ವಿಕೆ ಫಿಲ್ಮ್ಸ್ ಹಾಗೂ ಗುರುದತ್ ಗಾಣಿಗ ನಿರ್ಮಾಣದಲ್ಲಿ ಮೂಡಿಬರುತ್ತಿದೆ.

 

ಗುರು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಸಿನಿಮಾಗೆ ಸಚಿನ್ ಬಸ್ರೂರು ಸಂಗೀತವಿದೆ. ಅಭಿಮನ್ಯು ಸಧಾನಂದ್ ಅವರ ಕ್ಯಾಮರಾ ವರ್ಕ್ ಸಿನಿಮಾಗಿದೆ. ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಸಿನಿಮಾ ಸದ್ಯದಲ್ಲೇ ಟೈಟಲ್ ಮತ್ತು ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬರಲಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್