ಬೃಹತ್ ದಾಳಿಯ ಮುನ್ಸೂಚನೆ ನೀಡಿದ ಇಸ್ರೇಲ್

By
1 Min Read

ಟೆಲ್ ಅವಿವ್: ಇಸ್ರೇಲ್- ಪ್ಯಾಲೇಸ್ಟೈನ್ (Isreal- Palestine) ನಡುವಿನ ಯುದ್ಧ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ಇಸ್ರೇಲ್ ಸೇನೆಯು ಬೃಹತ್ ದಾಳಿಯ ಮುನ್ಸೂಚನೆಯೊಂದನ್ನು ನೀಡಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು, ಇಸ್ರೇಲ್ ಸೇನೆ ಸಿಂಹಗಳಂತೆ ಹೋರಾಡಲಿದೆ. ನಮ್ಮ ಶತ್ರುಗಳು ನಡೆಸಿದ ದೌರ್ಜನ್ಯವನ್ನು ನಾವು ಎಂದಿಗೂ ಮರೆಯುವುದಿಲ್ಲ. ನಾವು ಎಂದಿಗೂ ಹಮಾಸ್ ಕ್ಷಮಿಸುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನಿಮ್ಮ ಜೀವ ಉಳಿಸಿಕೊಳ್ಳಲು ದಕ್ಷಿಣಕ್ಕೆ ತೆರಳಿ- ಗಾಝಾ ನಿವಾಸಿಗಳಿಗೆ ಇಸ್ರೇಲ್ ಮಹತ್ವದ ಸೂಚನೆ

ಅನೇಕ ದಶಕಗಳಲ್ಲಿ ಯಹೂದಿ ಜನರಿಗೆ ಮಾಡಿದ ಈ ದೌರ್ಜನ್ಯಗಳನ್ನು ಜಗತ್ತಿಗೆ ಅಥವಾ ಯಾರಿಗಾದರೂ ಮರೆಯಲು ನಾವು ಎಂದಿಗೂ ಬಿಡುವುದಿಲ್ಲ. ನಾವು ನಮ್ಮ ಶತ್ರುಗಳನ್ನು ಅಭೂತಪೂರ್ವ ಬಲದಿಂದ ಹೊಡೆಯುತ್ತಿದ್ದೇವೆ ಎಂದು ಹೇಳುವ ಮೂಲಕ ದಾಳಿಯ ಇಸ್ರೇಲ್ ಪ್ರಧಾನಿಯವರು ದಾಳಿಯ ಮುನ್ಸೂಚನೆ ನೀಡಿದ್ದಾರೆ.

ಕಳೆದ ಎಂಟು ದಿನಗಳಲ್ಲಿ ಹಮಾಸ್‍ನ (Hamas) 1,300 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಪ್ಯಾಲೇಸ್ಟೈನ್‍ನ ಗಾಝಾ ಮತ್ತು ವೆಸ್ಟ್ ಬ್ಯಾಂಕ್‍ನಲ್ಲಿ 1,900 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಗಾಝಾ ಗಡಿಯಲ್ಲಿ ನೆಲದ ದಾಳಿ ನಡೆಸಲು ಇಸ್ರೇಲ್ ಸಿದ್ಧತೆ ನಡೆಸುತ್ತಿದ್ದು, ಮೂರು ಲಕ್ಷಕ್ಕೂ ಅಧಿಕ ಸೈನಿಕರ ನಿಯೋಜನೆ ಮಾಡಲಾಗಿದೆ.

ಇಸ್ರೇಲ್ ಸೇನೆಯು ಉತ್ತರ ಗಾಜಾದಲ್ಲಿ (North Gaza) ದಾಳಿಗೆ ತಯಾರಿ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಗಾಝಾದಿಂದ ದಕ್ಷಿಣಕ್ಕೆ ತೆರಳಲು ನಿವಾಸಿಗಳಿಗೆ ಸೂಚನೆ ನೀಡಲಾಗಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್