ಬಾಂಗ್ಲಾ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ- ಹ್ಯಾಟ್ರಿಕ್‌ ಗೆಲುವು, ಮೊದಲ ಸ್ಥಾನಕ್ಕೆ ಜಿಗಿದ ನ್ಯೂಜಿಲೆಂಡ್‌

Public TV
2 Min Read

ಚೆನ್ನೈ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Criket) ಬಾಂಗ್ಲಾದೇಶದ (Bangladesh) ವಿರುದ್ಧ ನ್ಯೂಜಿಲೆಂಡ್‌ (New Zealand) 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಸತತ ಮೂರು ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 6 ಅಂಕ ಸಂಪಾದಿಸುವ ಮೂಲಕ ಮೊದಲ ಸ್ಥಾನಕ್ಕೆ ಏರಿದೆ.

ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಬಾಂಗ್ಲಾದೇಶ 9 ವಿಕೆಟ್‌ ನಷ್ಟಕ್ಕೆ 245 ರನ್‌ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ ಇನ್ನೂ 43 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್‌ ನಷ್ಟಕ್ಕೆ 248 ರನ್‌ ಚಚ್ಚಿ ಗೆಲುವಿನ ನಗೆ ಬೀರಿತು. ಇದನ್ನೂ ಓದಿ: 7-0 ದಾಖಲೆ ಬಗ್ಗೆ ಚಿಂತೆಯಿಲ್ಲ, ಈ ಬಾರಿ ಮುರಿಯುತ್ತೇವೆ: ಅಜಂ ವಿಶ್ವಾಸ

ನ್ಯೂಜಿಲೆಂಡ್‌ ಪರವಾಗಿ ಕಾನ್ವೆ 45 ರನ್‌ (59 ಎಸೆತ, 3 ಬೌಂಡರಿ) ಹೊಡೆದು ಔಟಾದರೆ ನಾಯಕ ಕೇನ್‌ ವಿಲಿಯಮ್ಸನ್‌ 78 ರನ್(107‌ ಎಸೆತ, 8 ಬೌಂಡರಿ, 1 ಸಿಕ್ಸರ್‌) ಹೊಡೆದು ಗಾಯಾಳಾಗಿ ನಿವೃತ್ತರಾದರು.

ಡ್ಯಾರೆಲ್‌ ಮಿಷೆಲ್‌ ಔಟಾಗದೇ 89 ರನ್‌ (67 ಎಸೆತ, 6 ಬೌಂಡರಿ, 4 ಸಿಕ್ಸರ್‌) ಹೊಡೆದರೆ ಗ್ಲೇನ್‌ ಫಿಲಿಪ್ಸ್‌ ಔಟಾಗದೇ 16 ರನ್‌ ಹೊಡೆದು ಜಯವನ್ನು ತಂದುಕೊಟ್ಟರು.

 

ಬಾಂಗ್ಲಾ 56 ರನ್‌ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ಈ ಹಂತದಲ್ಲಿ ಶಕೀಬ್‌ ಉಲ್‌ ಹಸನ್‌ ಮತ್ತು ಮುಷ್ಫಿಕರ್‌ ರಹೀಂ ಐದನೇ ವಿಕೆಟಿಗೆ 108 ಎಸೆತಗಳಲ್ಲಿ 96 ರನ್‌ ಜೊತೆಯಾಟವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

ನಾಯಕ ಶಕಿಬುಲ್‌ ಹಸನ್‌ 40 ರನ್‌ (51 ಎಸೆತ, 3 ಬೌಂಡರಿ, 2 ಸಿಕ್ಸರ್)‌, ಮುಷ್ಫಿಕರ್‌ ರಹೀಂ 66 ರನ್‌ (75 ಎಸೆತ, 6 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು.

ಲೂಕಿ ಫರ್ಗ್ಯೂಸನ್‌ 3 ವಿಕೆಟ್‌ ಪಡೆದರೆ ಟ್ರೆಂಟ್‌ ಬೌಲ್ಟ್‌ , ಮ್ಯಾಟ್‌ ಹೆನ್ರಿ ತಲಾ 2 ವಿಕೆಟ್‌ ಪಡೆದರು.

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್