‘ರಾಜಯೋಗ’ದ ಸಾಂಗ್ ಮೆಚ್ಚಿಕೊಂಡ ಯಂಗ್ ರೆಬಲ್ ಸ್ಟಾರ್

Public TV
2 Min Read

ಸ್ಯಾಂಡಲ್‌ವುಡ್‌ನ ಕಾಮಿಡಿ ಸ್ಟಾರ್ ಧರ್ಮಣ್ಣ ಕಡೂರು (Dharmanna Kaduru) ಅವರಿಗೀಗ ‘ರಾಜಯೋಗ’ (Rajayoga) ಶುರುವಾಗಿದೆ. ರಾಜಯೋಗ ಅರಂಭವಾದ ಮೇಲೆ ಕಾಮಿಡಿ ಸ್ಟಾರ್ ಆಗಿದ್ದ ಧರ್ಮಣ್ಣ ಇದೀಗ ಹೀರೋ ಆಗಿದ್ದಾರೆ. ಇದೆಲ್ಲ ನಿಜಕ್ಕೂ ರಾಜಯೋಗದ ಮಹಿಮೆನಾ ಅಂತ ಕೇಳಿದ್ರೆ ಹಂಡ್ರೆಡ್ ಪರ್ಸೆಂಟ್ ಹೌದು ಅಂತಾರೆ ಧರ್ಮಣ್ಣ. ಯಾಕೆಂದರೆ ಧರ್ಮಣ್ಣ ರಾಜಯೋಗ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜಯೋಗ ಪಕ್ಕಾ ಫ್ಯಾಮಿಲಿ ಎಂಟಟೈನರ್ ಸಿನಿಮಾ. ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ರಾಜಯೋಗ ಚಿತ್ರದಿಂದ ಇದೀಗ ಮೊದಲ ಹಾಡು  (Song) ಬಿಡುಗಡೆಯಾಗಿದೆ. ರೊಮ್ಯಾಂಟಿಕ್ ಹಾಡು ಇದಾಗಿದ್ದು ‘ಬಿ ಎ ಗಂಡು….’ ಎನ್ನುವ ಸಾಲಿನಿಂದ ಪ್ರಾರಂಭವಾಗುತ್ತದೆ.

ಧರ್ಮಣ್ಣ ಅಭಿನಯದ ಈ ಸಿನಿಮಾದ ಮೊದಲ ಹಾಡನ್ನು ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ (Abhishek Ambarish) ರಿಲೀಸ್ ಮಾಡಿದ್ದಾರೆ. ಹಾಡನ್ನು ನೋಡಿ ಇಷ್ಟಪಟ್ಟಿರುವ ಅಭಿಷೇಕ್ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಇನ್ನೂ ನವ ಜೋಡಿಗಳು ಈ ಹಾಡನ್ನ ನೋಡಲೆ ಬೇಕು ಎಂದು ಹೇಳಿದ್ದಾರೆ.

ರಾಜಯೋಗ ಚಿತ್ರಕ್ಕೆ ಲಿಂಗರಾಜ ಉಚ್ಚಂಗಿ ದುರ್ಗ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಅಕ್ಷಯ್ ಎಸ್ ರಿಷಬ್  ಸಂಗೀತ ನೀಡಿದ್ದಾರೆ. ಸದ್ಯ ರಿಲೀಸ್ ಆಗಿರುವ ‘ಬಿ ಎಂ ಗಂಡು…’ ಹಾಡಿಗೆ ಲಿಂಗರಾಜು ಅವರೇ ಸಾಹಿತ್ಯ ರಚಿಸಿದ್ದು ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮತ್ತು ಗಾಯಕಿ ಅನನ್ಯಾ ಭಟ್ ಧ್ವನಿ ನೀಡಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಗಮನ ಸೆಳೆದಿರುವ ರಾಜಯೋಗ ಇದೀಗ ಹಾಡಿನ ಮೂಲಕವು ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ.

ಅಂದಹಾಗೆ ನಿರ್ದೇಶಕ ಲಿಂಗರಾಜು ಅವರಿಗೆ ಇದು ಮೊದಲ ಸಿನಿಮಾ. ಈ ಮೊದಲು ಕಿರುತೆರೆಯಲ್ಲಿ ಕೆಲಸ ಮಾಡಿದ್ದ ಲಿಂಗರಾಜು ಅವರು ರಾಜಯೋಗ ಸಿನಿಮಾ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಸ್ಯಾಂಡ‌ವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಧರ್ಮಣ್ಣ ಬಿಟ್ಟರೆ ಉಳಿದವರೆಲ್ಲ ಹೊಸಬರು. ಧರ್ಮಣ್ಣ ಅವರಿಗೆ ನಾಯಕಿಯಾಗಿ ನಿರೀಕ್ಷಾ ರಾವ್ ಕಾಣಿಸಿಕೊಂಡಿದ್ದಾರೆ.  ನಿರೀಕ್ಷಾ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದು ಧರ್ಮಣ್ಣ ಪತ್ನಿಯಾಗಿ ಮಿಂಚಿದ್ದಾರೆ.

ಈ ಸಿನಿಮಾ ಶ್ರೀರಾಮ ರಕ್ಷಾ ಪ್ರೊಡಕ್ಷನ್‌ ಮೂಲಕ  ಕುಮಾರ ಕಂಠೀರವ ಅವರು ಬಂಡವಾಳ ಹೂಡಿದ್ದಾರೆ. ವಿಶೇಷ ಎಂದರೆ ಧರ್ಮಣ್ಣ ನಟನೆ ಜೊತೆಗೆ ಸಹ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಇನ್ನೂ ಉಳಿದಂತೆ ದೀಕ್ಷಿತ್ ಕೃಷ್ಣ, ಪ್ರಭು, ಲಿಂಗರಾಜು, ನೀರಜ್ ಗೌಡ ಕೂಡ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಸದ್ಯ ಟ್ರೈಲರ್ ಮತ್ತು ಹಾಡಿನ ಮೂಲಕ ಸದ್ದು ಮಾಡುತ್ತಿರುವ ರಾಜಯೋಗ ಸಿನಿಮಾ ಮುಂದಿನ ತಿಂಗಳು ಮೊದಲ ವಾರದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಧರ್ಮಣ್ಣ ಅವರ ರಾಜಯೋಗ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್