ಇಸ್ರೇಲ್ ನಮ್ಮ ಮೊದಲ ಟಾರ್ಗೆಟ್ ಅಷ್ಟೇ, ಇಡೀ ಜಗತ್ತನ್ನು ನಮ್ಮ ಕಾನೂನಿನ ವ್ಯಾಪ್ತಿಗೆ ತರುತ್ತೇವೆ: ಹಮಾಸ್‌ ಉದ್ಧಟತನ

By
1 Min Read

ಗಾಜಾಪಟ್ಟಿ/ ಟೆಲ್‌ ಅವೀವ್‌: ಇಸ್ರೇಲ್ (Israel) ಒಂದೇ ನಮ್ಮ ಗುರಿಯಲ್ಲ.ಇಡೀ ಜಗತ್ತನ್ನು ತಮ್ಮ ಕಾನೂನಿನ (Law) ವ್ಯಾಪ್ತಿಗೆ ತರುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ಹೇಳುವ ಮೂಲಕ ಹಮಾಸ್ (Hamas) ಉದ್ಧಟತನ ಮೆರೆದಿದೆ.

ಇಸ್ರೇಲ್ ನಮ್ಮ ಮೊದಲ ಟಾರ್ಗೆಟ್ ಅಷ್ಟೇ. ಇಡೀ ಪ್ರಪಂಚದ ಮೇಲೆ ತಮ್ಮ ಪ್ರಭಾವವನ್ನು ವಿಸ್ತರಣೆ ಮಾಡುವ ಗುರಿ ಹೊಂದಿದ್ದೇವೆ. ಇಡೀ ಜಗತ್ತು ಅನ್ಯಾಯರಹಿತವಾಗಿರಬೇಕು. ದಮನ ಮಾಡುವಂತಹ ವ್ಯವಸ್ಥೆ ಇರಬಾರದು ಎಂದು ಹೇಳಿದೆ.   ಇದನ್ನೂ ಓದಿ: ಗಾಜಾ ಮೇಲೆ ಅಣ್ವಸ್ತ್ರ ಪ್ರಯೋಗವಾಗಬೇಕು ಎಂದ ಇಸ್ರೇಲ್‌ ಸಂಸದೆ – ಅಮೆರಿಕಕ್ಕೆ ಟರ್ಕಿ ಎಚ್ಚರಿಕೆ: 3ನೇ ಮಹಾಯುದ್ಧ ನಡೆಯುತ್ತಾ?

ಲೆಬನಾನ್, ಸಿರಿಯಾ, ಇರಾಕ್‌ನಂತಹ ದೇಶಗಳಲ್ಲಿ ಅರಬ್ಬರು, ಪ್ಯಾಲೆಸ್ಟೈನ್‌ (Palestine) ವಿರುದ್ಧ ನಡೆಯುತ್ತಿರುವ ಅಪರಾಧ, ಹತ್ಯೆಗಳು ಇನ್ನೆಲ್ಲಿಯೂ ನಡೆಯಬಾರದು. ಆ ರೀತಿ ಮಾಡ್ತೇವೆ ಎಂದು ಹಮಾಸ್ ಕಮಾಂಡರ್ ಮಹ್ಮದ್ ಅಲ್ ಜಹಾರ್‌ (Mahmoud al-Zahar) ಹೇಳಿಕೆ ನೀಡಿದ್ದಾನೆ.

ಈ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ನೆತನ್ಯಾಹು (Israel PM Netanyahu) ಹಮಾಸ್‌ನ ಗಿಡ್ಡು ಬೆದರಿಕೆಗಳಿಗೆ ಹೆದರಲ್ಲ. ನಮ್ಮ ಹೋರಾಟ ಮುಂದುವರೆಸ್ತೇವೆ. ಹಮಾಸ್ ಸಂಘಟನೆಯನ್ನು ಸರ್ವನಾಶ ಮಾಡುತ್ತೇವೆ ಎಂದು ವಾರ್ನಿಂಗ್ ನೀಡಿದ್ದಾರೆ. ಗಾಜಾ ಗಡಿಯಲ್ಲಿರುವವರು ಮನೆ ತೊರೆದು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು ಎಂದು ನೆತನ್ಯಾಹು ಸರ್ಕಾರ ತಿಳಿಸಿದೆ.


Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್