ಬೆಂಗಳೂರು ಬಿಜೆಪಿ ಶಾಸಕರ ಅನುದಾನಕ್ಕೆ ಕತ್ತರಿ ಹಾಕಿದ ಕಾಂಗ್ರೆಸ್ – ಯಾರ ಕ್ಷೇತ್ರಕ್ಕೆ ಎಷ್ಟು ಹಂಚಿಕೆ?

Public TV
2 Min Read

ಬೆಂಗಳೂರು: ಬೆಂಗಳೂರು ಬಿಜೆಪಿ (BJP) ಶಾಸಕರಿಗೆ ಕಾಂಗ್ರೆಸ್ (Congress) ಸರ್ಕಾರ ಬಿಗ್ ಶಾಕ್ ನೀಡಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಬಿಜೆಪಿ ಶಾಸಕರಿಗೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಬಿಡುಗಡೆ ಮಾಡಿದ್ದ 485 ಕೋಟಿ ರೂ. ಅನುದಾನವನ್ನು (Grant) ವಾಪಸ್ ಪಡೆದಿದೆ. ಬಿಜೆಪಿ ಶಾಸಕರ ಅನುದಾನ ವಾಪಸ್ ಪಡೆದು ಬೆಂಗಳೂರಿನ (Bengaluru) ಕಾಂಗ್ರೆಸ್ ಶಾಸಕರಿಗೆ ಮರು ಹಂಚಿಕೆ ಮಾಡಿದೆ. ಕಾಂಗ್ರೆಸ್‌ನ 11 ಶಾಸಕರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ.

ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್‌ಗೂ (ST Somashekar) ಅನುದಾನ ಹಂಚಿಕೆ ಮಾಡಿದ್ದು, ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಸುದ್ದಿ ಹಿನ್ನಲೆ ಅನುದಾನ ಬಿಡುಗಡೆ ಮಾಡಿರುವ ಸಾಧ್ಯತೆ ಎನ್ನಲಾಗುತ್ತಿದೆ. ಬಿಜೆಪಿ ಶಾಸಕರ ಅನುದಾನದ ಪೈಕಿ ಆರ್‌ಆರ್ ನಗರ (RR Nagara) ಕ್ಷೇತ್ರದ ಅನುದಾನಕ್ಕೆ ಹೆಚ್ಚು ಕೊಕ್ಕೆ ಬಿದ್ದಿದೆ. ಆರ್‌ಆರ್ ನಗರ ಕ್ಷೇತ್ರದ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅನುದಾನ ವಾಪಸ್ ಪಾಲಿಟಿಕ್ಸ್ ಶುರು ಮಾಡಿದ್ದಾರಾ ಎನ್ನುವ ಅನುಮಾನ ಶುರುವಾಗಿದೆ. ಇದನ್ನೂ ಓದಿ: ಮಾಜಿ ಸಿಎಂಗಳಿಗೆ ಮತ್ತೆ Z ಭದ್ರತೆ ನೀಡಲು ಸರ್ಕಾರ ನಿರ್ಧಾರ

 

ರಾಜರಾಜೇಶ್ವರಿ ನಗರದ ಅನುದಾನಕ್ಕೆ ಬ್ರೇಕ್ ಹಾಕಿದ್ದು, ಆರ್‌ಆರ್ ನಗರ ಕ್ಷೇತ್ರದ ಅನುದಾನ ಬೇರೆ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ. ಆರ್‌ಆರ್ ನಗರ ಬಿಲ್‌ಗೆ ಇತ್ತೀಚೆಗಷ್ಟೇ ಡಿಕೆ ಶಿವಕುಮಾರ್ ಬ್ರೇಕ್ ಹಾಕಿದ್ದರು. ಈಗ ವಿವಿಧ ಕಾಮಗಾರಿಗೆ ಬಿಡುಗಡೆ ಆಗಿದ್ದ ಅನುದಾನಕ್ಕೂ ಕತ್ತರಿ ಹಾಕಿದೆ. ಬಸವರಾಜ ಬೊಮ್ಮಾಯಿ ಸರ್ಕಾರ ಆರ್‌ಆರ್ ನಗರಕ್ಕೆ ನೀಡಿದ್ದ 126 ಕೋಟಿ ರೂ. ವಾಪಸ್ ಪಡೆದು ಆದೇಶ ಹೊರಡಿಸಿದೆ. ಮಳೆಗಾಲುವೆಯ 15 ಕೋಟಿ ರೂ. ಕಾಮಗಾರಿ ಟೆಂಡರ್ ಆಗಿದ್ದರೂ ಅನುದಾನ ವಾಪಸ್ ಪಡೆಯಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪಟಾಕಿ ಬ್ಯಾನ್: ಸಿದ್ದರಾಮಯ್ಯ

ಚುನಾವಣೆ ಘೋಷಣೆಗೆ ಕೆಲವು ದಿನಗಳಿರುವಾಗ ಮಂಜೂರಾಗಿದ್ದ 41 ಕೋಟಿ ರೂ. ವಾಪಸ್ ಪಡೆಯಲಾಗಿದೆ. ಬಿಇಎಲ್ ಸರ್ಕಲ್ – ಗಂಗಮ್ಮ ಸರ್ಕಲ್‌ವರೆಗಿನ ರಸ್ತೆ ಅಗಲೀಕರಣಕ್ಕೂ ಬ್ರೇಕ್ ಹಾಕಿದ್ದು, ರಸ್ತೆ ಅಗಲೀಕರಣಕ್ಕೆ ಮಂಜೂರಾಗಿದ್ದ 70 ಕೋಟಿ ರೂ. ವಾಪಸ್ ಪಡೆಯಲಾಗಿದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿರುವ ಕರಾವಳಿಗರ ರಕ್ಷಣೆಗೆ ವಿದೇಶಾಂಗ ಸಚಿವರಿಗೆ ಪತ್ರ: ನಳಿನ್ ಕುಮಾರ್ ಕಟೀಲ್

ಯಾರ ಕ್ಷೇತ್ರಕ್ಕೆ ಎಷ್ಟು ಹಂಚಿಕೆ? ಎಷ್ಟು ಕಾಮಗಾರಿ?
ಹೆಬ್ಬಾಳ – 40 ಕೋಟಿ ರೂ. (39 ಕಾಮಗಾರಿಗಳು)
ಪುಲಕೇಶಿನಗರ – 40 ಕೋಟಿ ರೂ. (39 ಕಾಮಗಾರಿ)
ಸರ್ವಜ್ಞ ನಗರ – 40 ಕೋಟಿ ರೂ. (27 ಕಾಮಗಾರಿ)
ಶಿವಾಜಿನಗರ – 40 ಕೋಟಿ ರೂ. (7 ಕಾಮಗಾರಿ)
ಚಾಮರಾಜಪೇಟೆ – 40 ಕೋಟಿ ರೂ. (24 ಕಾಮಗಾರಿ)
ಗಾಂಧಿ ನಗರ – 40 ಕೋಟಿ ರೂ. (10 ಕಾಮಗಾರಿ)
ಗೋವಿಂದರಾಜ ನಗರ – 40 ಕೋಟಿ ರೂ. (20 ಕಾಮಗಾರಿ)
ಬಿಟಿಎಮ್ ಲೇಔಟ್ – 40 ಕೋಟಿ ರೂ. (40 ಕಾಮಗಾರಿ)
ವಿಜಯನಗರ – 40 ಕೋಟಿ ರೂ. (20+ ಕಾಮಗಾರಿ)
ಬ್ಯಾಟರಾಯನಪುರ – 40 ಕೋಟಿ ರೂ. (22 ಕಾಮಗಾರಿ)
ಯಶವಂತಪುರ- 40 ಕೋಟಿ ರೂ. (18 ಕಾಮಗಾರಿ)

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್