ಯುದ್ಧ ನಾವು ಆರಂಭಿಸಿಲ್ಲ ಆದ್ರೆ ಮುಗಿಸುತ್ತೇವೆ – ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಡುಗು

Public TV
2 Min Read

ನವದೆಹಲಿ: ನಮಗೆ ಈ ಯುದ್ಧ ಬೇಕಾಗಿಲ್ಲ, ನಾವು ಯುದ್ಧ ಆರಂಭಿಸಲಿಲ್ಲ, ಆದ್ರೆ ಹಮಾಸ್ ಆರಂಭಿಸಿರುವ ಯುದ್ಧವನ್ನು (Israel Hamas war) ನಾವು ಅಂತ್ಯಗೊಳಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ (ಅ.10) ಮತ್ತೊಂದು ವೀಡಿಯೋ ಬಿಡುಗಡೆ ಮಾಡಿರುವ ಇಸ್ರೇಲ್‌ ಪ್ರಧಾನಿ ಯುದ್ಧದ ಬಗ್ಗೆ ಮಾತನಾಡಿದ್ದಾರೆ. ನಮಗೆ ಈ ಯುದ್ಧ ಬೇಕಾಗಿಲ್ಲ, ಅತ್ಯಂತ ಕ್ರೂರ ಮತ್ತು ಅನಾಗರಿಕ ರೀತಿಯಲ್ಲಿ ನಮ್ಮ ಮೇಲೆ ಬಲವಂತದಿಂದ ಯುದ್ಧ ಹೇರಲಾಯಿತು. ಇಸ್ರೇಲ್ (Hamas) ಈ ಯುದ್ಧವನ್ನ ಪ್ರಾರಂಭಿಸದಿದ್ದರೂ ಅದನ್ನು ಮುಗಿಸುತ್ತದೆ. ಈ ಯುದ್ಧವನ್ನು ಇಸ್ರೇಲ್ ಗೆಲ್ಲುತ್ತದೆ, ನಾವು ಗೆದ್ದಾಗ, ಇಡೀ ನಾಗರಿಕ ಜಗತ್ತು ಗೆಲ್ಲುತ್ತದೆ ಎಂದು ಅವರು ಗುಡುಗಿದ್ದಾರೆ.

ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ಹಮಾಸ್ ಉಗ್ರರು ತುಂಬಾ ದೊಡ್ಡ ತಪ್ಪು ಮಾಡಿದ್ದಾರೆ ಒತ್ತಿ ಎಂದು ಒತ್ತಿಹೇಳುತ್ತಾ, ಒಮ್ಮೆ, ಯಹೂದಿ ಜನರು ರಾಷ್ಟ್ರಹೀನರಾಗಿದ್ದರು, ಒಮ್ಮೆ ಯಹೂದಿಗಳು ರಕ್ಷಣೆಯಿಲ್ಲದವರಾಗಿದ್ದರು, ಆದ್ರೆ ಇನ್ಮುಂದೆ ನಾವು ಬೆಲೆಯನ್ನು ನಿಗದಿಪಡಿಸುತ್ತೇವೆ. ಇಸ್ರೇಲ್‌ನ ಇತರ ಶತ್ರುಗಳು ಮುಂಬರುವ ದಶಕಗಳವರೆಗೆ ಬೆಲೆ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಗಾಜಾ ಸೀಜ್‌ಗೆ ಇಸ್ರೇಲ್ ಆದೇಶದ ಬೆನ್ನಲ್ಲೇ ಒತ್ತೆಯಾಳುಗಳನ್ನು ಕೊಲ್ಲುವ ಬೆದರಿಕೆ ಹಾಕಿದ ಹಮಾಸ್

ಇಸ್ರೇಲಿ ಕುಟುಂಬಗಳನ್ನು ಅವರ ಮನೆಗಳಲ್ಲಿ ಹತ್ಯೆ ಮಾಡಿದೆ, ಹೊರಾಂಗಣ ಉತ್ಸವದಲ್ಲಿ ನೂರಾರು ಯುವಕರನ್ನು ಕಗ್ಗೊಲೆ ಮಾಡಲಾಗಿದೆ. ಹತ್ಯಾಕಾಂಡದಿಂದ ಬದುಕುಳಿದ ಹಲವಾರು ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನ ಅಪಹರಿಸಲಾಗಿದೆ. ಹಮಾಸ್ ಉಗ್ರರು (Hamas Terrorists) ಮಕ್ಕಳನ್ನೂ ಬಂಧಿಸಿದ್ದಾರೆ, ಕೆಲವರನ್ನ ಸುಟ್ಟುಹಾಕಿದ್ದಾರೆ ಮತ್ತು ಗಲ್ಲಿಗೇರಿಸಿದ್ದಾರೆ ಎಂದು ವಿಷಾದಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ; 60 ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಸಾವು – ಯಾವ ದೇಶದ ಎಷ್ಟು ಮಂದಿ?

ಹಮಾಸ್ ಮತ್ತು ಐಸಿಸ್ (ISIS) ನಡುವೆ ಹೋಲಿಕೆ ಮಾಡಿದ ನೆತನ್ಯಾಹು ಅದರ ಮಿತ್ರರಾಷ್ಟ್ರಗಳ ಬೆಂಬಲಕ್ಕೆ ಕರೆ ನೀಡಿದರು. ಹಮಾಸ್ ಐಸಿಸ್ ಆಗಿದೆ ಮತ್ತು ಐಸಿಸ್ ಅನ್ನು ಸೋಲಿಸಲು ನಾಗರಿಕತೆ ಶಕ್ತಿಗಳು ಒಗ್ಗೂಡಿದಂತೆಯೇ, ಹಮಾಸ್ ಅನ್ನು ಸೋಲಿಸುವಲ್ಲಿ ಇಸ್ರೇಲ್ ಅನ್ನು ನಾಗರಿಕತೆಯ ಶಕ್ತಿಗಳು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಭೀಕರ ಸಂಘರ್ಷ – 1,100 ಸಾವು, ಸಂಗೀತ ಉತ್ಸವದಲ್ಲಿ 260 ಶವ ಪತ್ತೆ

ಇದೇ ವೇಳೆ ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್‌ಗೆ ಬೆಂಬಲ ನೀಡಿದ ದೇಶಗಳಿಗೆ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಮೆರಿಕ ಅಧ್ಯಕ್ಷ ಬಿಡೆನ್ ಅವರ ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇಂದು ಇಸ್ರೇಲ್‌ಗೆ ಬೆಂಬಲವಾಗಿ ನಿಂತಿರುವ ವಿಶ್ವನಾಯಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಜನರಿಗೆ ಮತ್ತು ಕಾಂಗ್ರೆಸ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ನೆತನ್ಯಾಹು ಹೇಳಿದರು. ಇದನ್ನೂ ಓದಿ: ಅಫ್ಘಾನ್ ಪ್ರಬಲ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 2,000ಕ್ಕೆ ಏರಿಕೆ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್