ರಿಲೀಸ್ ದಿನಾಂಕದೊಂದಿಗೆ 10 ಸಿನಿಮಾ ಘೋಷಿಸಿದ ದಿನೇಶ್ ವಿಜಾನ್

Public TV
3 Min Read

ಬಾಲಿವುಡ್ ನ ಖ್ಯಾತ ನಿರ್ಮಾಪಕ ದಿನೇಶ್ ವಿಜಾನ್ (Dinesh Vijan) ಸಿನಿಮಾ ರಂಗವೇ ಬೆಚ್ಚಿ ಬೀಳುವಂತಹ ಸುದ್ದಿಯನ್ನು ಕೊಟ್ಟಿದ್ದಾರೆ. ಇಂಥದ್ದೊಂದು ಸಾಹಸ ಮಾಡುವುದಕ್ಕೆ ಎಂಟು ಗುಂಡಿಗೆ ಬೇಕು ಎನ್ನುವುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ. ಅಷ್ಟಕ್ಕೂ ಅವರು ಮಾಡಿದ ಸಾಹಸ ಕೆಲಸವೆಂದರೆ ಬ್ಯಾಕ್ ಟು ಬ್ಯಾಕ್ ಹತ್ತು ಸಿನಿಮಾಗಳನ್ನು ಘೋಷಿಸಿದ್ದಾರೆ ಮತ್ತು ಆ ಸಿನಿಮಾಗಳು ಯಾವತ್ತು ಬಿಡುಗಡೆ ಆಗಲಿವೆ ಎನ್ನುವುದನ್ನೂ ಈಗಲೇ ಹೇಳಿಕೊಂಡಿದ್ದಾರೆ.

ಬಾಲಿವುಡ್ ನಲ್ಲಿ ಬೇಡಿಯಾ, ಝರಾ ಹಟ್‌ಕೇ ಝರಾ ಬಚ್‌ಕೇ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದವರು ನಿರ್ಮಾಪಕ ದಿನೇಶ್ ವಿಜಾನ್. ಇದೀಗ ತಮ್ಮ ಮುಂಬರುವ ಸಿನಿಮಾಗಳ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿ ತಮ್ಮ ಸಾಲು ಸಾಲು 10 ಚಿತ್ರಗಳನ್ನು ಘೋಷಣೆ ಮಾಡಿದ್ದಾರೆ. ಇದೀಗ ಬಿಟೌನ್ ನಲ್ಲಿ ಈ ಕುರಿತು ಭಾರೀ ಚರ್ಚೆ ಆಗುತ್ತಿದೆ.

ದಿನೇಶ್ ವಿಜಾನ್ ನಿರ್ಮಾಣ ಸಂಸ್ಥೆಯ ಮೂಲಕ ರಿಲೀಸ್ ಆಗುತ್ತಿರೋ ಮೊದಲ ಸಿನಿಮಾ ಹ್ಯಾಪಿ ಟೀರ್ಸ್ ಡೇ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಿಮ್ರತ್ ಕೌರ್ (Nimrat Kaur), ರಾಧಿಕಾ ಮದನ್, ಭೈಗಶ್ರೀ ಮತ್ತು ಸುಬೋದ್ ಭಾವೆ ಇದ್ದಾರೆ. ಮಿಖಿಲ್ ಮುಸಲೆ ನಿರ್ದೇಶನ ಮಾಡಿದ್ದಾರೆ. ಇದೇ ಅಕ್ಟೋಬರ್ 27ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ.

ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಶಾಹಿದ್ ಕಪೂರ್ (Shahid Kapoor)- ಕೃತಿ ಸನೋನ್ ಜೋಡಿಯಾಗಿ ನಟಿಸುತ್ತಿದ್ದು, ಈ ಸಿನಿಮಾ ಫೆ.9 2024ಕ್ಕೆ ರಿಲೀಸ್ ಆಗಲಿದೆ. ಈ ಚಿತ್ರ ಕೂಡ ವಿಭಿನ್ನವಾಗಿ ಮೂಡಿ ಬರಲಿದ್ದು, ಜಿಯೋ ಸ್ಟುಡಿಯೋಸ್ ಜೊತೆ ಜಂಟಿಯಾಗಿ ದಿನೇಶ್ ವಿಜಾನ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ರೊಮ್ಯಾಂಟಿಕ್ ಡ್ರಾಮಾ ಚಿತ್ರಕ್ಕೆ ಅಮಿತ್ ಜೋಶಿ- ಆರಾಧಾನಾ ಸಾಹ್ ಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಚಿತ್ರದಲ್ಲಿ ಡಿಂಪಲ್ ಕಪಡಿಯಾ ಕೂಡ ನಟಿಸಿದ್ದಾರೆ.

ನಂತರ ‘ಮುಂಜ್ಞಾ’ ಚಿತ್ರ ಅನೌನ್ಸ್ ಮಾಡಿದ್ದು, ಈ ಚಿತ್ರದಲ್ಲಿ ಅಭಯ್ ವರ್ಮಾ, ಶರ್ವರಿ ವಾಘ್, ಮೋನಾ ಸಿಂಗ್, ಎಸ್. ಸತ್ಯರಾಜ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಆದಿತ್ಯ ಸರ್ಪೋದಾರ್ ನಿರ್ದೇಶನ ಮಾಡಿದ್ದಾರೆ. ಮಾರ್ಚ್ 29, 2024ರಂದು ರಿಲೀಸ್ ಆಗಲಿದೆ.   ಜಾನ್ ಅಬ್ರಹಾಂ ನಟನೆಯ ಆ್ಯಕ್ಷನ್ ಥ್ರಿಲರ್ ‘ಟೆಹ್ರಾನ್’ ಚಿತ್ರಕ್ಕೆ ಅರುಣ್ ಗೋಪಾಲನ್ ನಿರ್ದೇಶನ ಮಾಡಲಿದ್ದಾರೆ. ಚಿತ್ರದಲ್ಲಿ ಮಾನುಷಿ ಚಿಲ್ಲರ್, ನೀರು ಬಾಜ್ವಾ ಕೂಡ ನಟಿಸಲಿದ್ದಾರೆ. ಏ.26, 2024ರಂದು ಸಿನಿಮಾ ರಿಲೀಸ್ ಆಗಲಿದೆ.

PANKAJ TRIPATHI

‘ಸ್ತ್ರಿ’ ಚಿತ್ರದ ಸಕ್ಸಸ್ ನಂತರ ‘ಸ್ತ್ರಿ2’ ಸಿದ್ಧತೆ ಮಾಡಲಾಗಿದ್ದು, ರಾಜ್ ಕುಮಾರ್ ರಾವ್‌ಗೆ ನಾಯಕಿಯಾಗಿ ಮತ್ತೆ ಶ್ರದ್ಧಾ ಕಪೂರ್ ನಟಿಸಲಿದ್ದಾರೆ. ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ ಮತ್ತು ಅಪರಶಕ್ತಿ ಖುರಾನಾ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಮರ್ ಕೌಶಿಕ್ ಆ್ಯಕ್ಷನ್ ಕಟ್ ಮಾಡುತ್ತಿದ್ದು, ಆಗಸ್ಟ್ 30, 2024ಕ್ಕೆ ರಿಲೀಸ್ ಆಗಲಿದೆ.  ಅಕ್ಷಯ್ ಕುಮಾರ್ ನಟನೆಯ ‘ಸ್ಕೈ ಪೋರ್ಸ್’ ಅಕ್ಟೋಬರ್ 2, 2024ಕ್ಕೆ ರಿಲೀಸ್ ಆಗಲಿದೆ. ಚಿತ್ರದಲ್ಲಿ 1965ರಲ್ಲಿ ನಡೆದ ಇಂಡಿಯಾ- ಪಾಕಿಸ್ತಾನದ ವಾಯುದಾಳಿಯ ಬಗ್ಗೆ ತೋರಿಸಲಿದ್ದಾರೆ.

ಚಾವ ಸಿನಿಮಾದಲ್ಲಿ ವಿಕ್ಕಿ ಕೌಶಲ್- ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಲಕ್ಷ್ಮಣ ಉಟೇಕರ್ ನಿರ್ದೇಶಿಸಲಿದ್ದಾರೆ. ಚಾವ ಚಿತ್ರ ಡಿಸೆಂಬರ್ 6, 2024ಕ್ಕೆ ರಿಲೀಸ್ ಆಗಲಿದೆ. ಎಕ್ಕಿಸ್ ಚಿತ್ರದಲ್ಲಿ ಧಮೇಂದ್ರ, ಅಗಸ್ತ್ಯ ನಂದಾ, ಜೈದೀಪ್ ಅಹ್ಲಾವತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನವರಿ 10, 2025ಕ್ಕೆ ರಿಲೀಸ್ ಆಗಲಿದೆ. ‘ವ್ಯಾಂಪೈರ್ಸ್ ಆಫ್ ವಿಜಯನಗರ’ ಚಿತ್ರ ಫೆ.14, 2025ಕ್ಕೆ ರಿಲೀಸ್ ಆಗಲಿದೆ. ಕುನಾಲ್ ದೇಶಮುಖ್ ನಿರ್ದೇಶನದ ‘ಡೈಲರ್’ ಏಪ್ರಿಲ್ 10, 2025ರಂದು ರಿಲೀಸ್ ಆಗಲಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್