ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಬೃಹತ್ ಐಟಿ ದಾಳಿ (IT Raid) ನಡದಿದೆ. ದಾಳಿಯಲ್ಲಿ ಕೋಟ್ಯಂತರ ಮೌಲ್ಯದ ಹಣ, ಚಿನ್ನಾಭರಣ, ನಗದು ಪತ್ತೆಯಾಗಿದೆ.
ಕಾವೇರಿ ಥೇಯೇಟರ್ ಬಳಿಯ ಗಜರಾಜ್ ಜ್ಯುವೆಲ್ಲರಿ ಶಾಪ್, ಸದಾಶಿವನಗರದ ಭೂಮಿಕಾ ಅಪಾರ್ಟ್‍ಮೆಂಟ್, ಶಾಂತಿನಗರ, ವಿಜಯನಗರ, ಹುಳಿಮಾವು ಸೇರಿದಂತೆ ವಿವಿಧ ಕಡೆಗಳಲ್ಲಿ ಚಿನ್ನದ ಅಂಗಡಿ ಮಾಲೀಕರು, ಆಸ್ಪತ್ರೆ ಮಾಲೀಕರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಶಿಕ್ಷಣ ಸಂಸ್ಥೆ ಮಾಲೀಕರ ಮನೆಗಳು ಸೇರಿದಂತೆ ಪೂವಾರ್ಂಕರ ಇನ್ಫಾ ಮತ್ತು ಪೂವಾರ್ಂಕರ ಗ್ರೂಪ್ ಮೇಲೆ ದಾಳಿ ನಡೆಸಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು.
7 ಕೋಟಿ ಹಣ, 2 ಕೋಟಿ ಚಿನ್ನಾಭರಣ ಸೀಜ್: ಐಟಿ ಅಧಿಕಾರಿಗಳು ರೇಡ್ ವೇಳೆ 2,500 ಕೋಟಿ ಮೊತ್ತದ ಅಕ್ರಮ ಬಯಲಿಗೆಳೆದಿದ್ದಾರೆ. ದಾಖಲೆ ಇಲ್ಲದ 7 ಕೋಟಿ ನಗದು ಮತ್ತು 2 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಶೀಘ್ರವೇ ಕೆಲವರನ್ನು ವಿಚಾರಣೆಗೆ ಕರೆಯಲು ಆದಾಯ ತೆರಿಗೆ (Income Tax) ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ: ಸಿ.ಟಿ. ರವಿ ಪ್ರಶ್ನೆ
ಒಟ್ಟಿನಲ್ಲಿ ನಿದ್ದೆ ಮಂಪರಿನಲ್ಲಿದ್ದ ಕೋಟಿ ಕುಳಗಳಿಗೆ ಐಟಿ ಶಾಕ್ ನೀಡಿದೆ. ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದ್ದು, ಉದ್ಯಮಿಗಳಿಗೆ ನಡುಕ ಶುರುವಾಗಿದೆ.
Web Stories