ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ: ಸಿ.ಟಿ. ರವಿ ಪ್ರಶ್ನೆ

Public TV
3 Min Read

– ಟಿಪ್ಪುವಿಗಿಂತ ಕ್ರೂರಿ, ಮತಾಂಧ ಔರಂಗಜೇಬ್ ಎಂದ ಮಾಜಿ ಸಚಿವ

ಬೆಂಗಳೂರು: ಬಾಲ ಬಿಚ್ಚಿದ್ರೆ ಬಾಲ ಕಟ್ ಮಾಡ್ತೀವಿ ಅಂತ ಮರಿ ಖರ್ಗೆ (ಪ್ರಿಯಾಂಕ್ ಖರ್ಗೆ) ಹೇಳಿದ್ರು. ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ ಎಂದು ಮಾಜಿ ಸಚಿವ ಸಿ.ಟಿ. ರವಿ (C.T.Ravi) ಪ್ರಶ್ನಿಸಿದರು.

ಬಿಜೆಪಿ (BJP) ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಮತಾಂಧರ ಕಟೌಟ್ ಹಾಕಿದ ಉದ್ದೇಶ ಏನು? ವಿಭಜನೆಯಿಂದ ಇನ್ನೂ ನೀವು ಸಮಾಧಾನ ಆಗಿಲ್ಲ ಅಂತ ಅರ್ಥಾನಾ? ಭಾರತದಲ್ಲಿ ಮತ್ತೊಂದು ವಿಭಜನೆಗೆ ಸರ್ಕಾರ ಪ್ರೋತ್ಸಾಹ ಕೊಡ್ತಿದೆಯಾ? ಬಾಲ ಬಿಚ್ಚಿದ್ರೆ ಬಾಲ ಕಟ್ ಮಾಡ್ತೀವಿ ಅಂತ ಮರಿ ಖರ್ಗೆ ಹೇಳಿದ್ರು. ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ? ಈಗ ಎಲ್ಲಿ ಬಚ್ಚಿಟ್ಕೊಂಡಿದ್ದೀರಿ ಮರಿ ಖರ್ಗೆ? ಹೊರಗೆ ಬಂದು ಮಾತಾಡಿ ಎಂದು ಹೇಳಿದರು. ಇದನ್ನೂ ಓದಿ: ಶಿವಮೊಗ್ಗ ಈದ್‌ ಮಿಲಾದ್‌ ಹಬ್ಬಕ್ಕೆ 5 ಕೋಟಿ ಸಂಗ್ರಹ – ಫಂಡಿಂಗ್‌ ಮಾಡಿದವರ ಹಿಂದೆ ಬಿದ್ದ ಖಾಕಿ

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದರು. ಕುವೆಂಪು. ಅವರು ಜನಿಸಿದ ಜಿಲ್ಲೆಯಲ್ಲೇ ಮತಾಂಧರ ಅಟ್ಟಹಾಸಕ್ಕೆ ಸರ್ಕಾರ ಅವಕಾಶ ಕೊಟ್ಟಿದೆ. ಟಿಪ್ಪು ಜಯಂತಿಗೆ ಅವಕಾಶ ಕೊಟ್ಟಿದ್ರು. ಶಾಂತಿಯ ನಾಡು ಹಾಳು ಮಾಡಲು ಒಬ್ಬ ಟಿಪ್ಪು ಸಾಲಲ್ಲ ಅಂತ ಈಗ ಔರಂಗಜೇಬ್ ಮೆರೆಸುವ ಕೆಲಸ ಆಗ್ತಿದೆ. ಮತಾಂಧರನ್ನು ಮೆರೆಸುವ ಕೆಲಸಕ್ಕೆ ಸರ್ಕಾರ ಕುಮ್ಮಕ್ಕು ಕೊಡ್ತಿದೆ ಎಂದು ಕಿಡಿಕಾರಿದರು.

ಟಿಪ್ಪುವಿಗಿಂತ ಕ್ರೂರಿ, ಮತಾಂಧ ಔರಂಗಜೇಬ್. ಇಂಥವನನ್ನ ಮೆರೆಸೋದು ಸರಿಯಾ? ಪೈಗಂಬರ್ ಶಾಂತಿಯ ಸಂದೇಶ ಕೊಟ್ರು ಅಂತೀರ. ಇದೇನಾ ಶಾಂತಿಯ ಸಂದೇಶ? ಮುಂದಿನ ದಿನಗಳಲ್ಲಿ ಅಫಜಲ್ ಗುರು, ಜಿನ್ನಾ, ಬಿನ್ ಲಾಡೆನ್‌ರನ್ನೂ ಮೆರೆಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಂಭೀರ ಪ್ರಕರಣದಲ್ಲಿ ಅವರು ಶಾಸಕನ ಮನೆಗೆ ಬೆಂಕಿ ಹಾಕ್ತಾರೆ. ಪೊಲೀಸ್ ಸ್ಟೇಷನ್‌ಗೆ ಬೆಂಕಿ ಹಾಕ್ತಾರೆ. ಅಂಥ ಗಂಭೀರ ಪ್ರಕರಣದಲ್ಲಿ ಭಾಗವಹಿಸಿದ ಆರೋಪಿಗಳ ಬಿಡುಗಡೆಗೆ ತನ್ವೀರ್ ಸೇಠ್ ಪತ್ರ ಬರೀತಾರೆ. ಆ ಸಾಲಿಗೆ ಸೇರುವ ಹುಬ್ಬಳ್ಳಿ ಗಲಭೆ ಆರೋಪಿಗಳ ಬಿಡುಗಡೆಗೆ ಖುದ್ದು ಡಿಸಿಎಂ ಪತ್ರ ಬರೀತಾರೆ. ಮತಾಂಧ ಶಕ್ತಿಗಳಿಗೆ ಸರ್ಕಾರವೇ ಕುಮ್ಮಕ್ಕು ಕೊಡ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ನಾವು ಸಾಬ್ರು ಗೊತ್ತಲ್ಲ; ಒಂದಾ ನಾವು, ಇಲ್ಲಾ ಅವ್ರು ಸಾಯ್ಬೇಕು- ಪೊಲೀಸ್ರ ಮುಂದೆ ಅವಾಜ್ ಹಾಕಿದ್ದವ ಅರೆಸ್ಟ್

ಸಿದ್ದರಾಮಯ್ಯ ಋಣ ತೀರಿಸುವ ಮಾತಾಡ್ತಾರೆ. ರಾಜ್ಯದ ಋಣದ ಬಗ್ಗೆ ಅವರು ಮಾತಾಡಲಿಲ್ಲ. ಮುಸ್ಲಿಮರ ಋಣ ತೀರಿಸುವ ಬಗ್ಗೆ ಸಿದ್ದರಾಮಯ್ಯ ಮಾತಾಡ್ತಾರೆ. ಹತ್ತು ಸಾವಿರ ಕೋಟಿ ಮೀಸಲಿಡೋದಾಗಿ ಹೇಳ್ತಾರೆ. ಮುಸ್ಲಿಮರು ಮಾತ್ರ ಅವರಿಗೆ ಮತ ಹಾಕಿದ್ದಾರಾ? ನಮಗೆ ಕೋಮುವಾದಿ ಅಂತೀರಲ್ಲ, ಮುಸ್ಲಿಮರ ಓಲೈಕೆ ಕೋಮುವಾದಿ ಅಲ್ವಾ ಎಂದು ಖಾರವಾಗಿ ಪ್ರಶ್ನಿಸಿದರು.

ಟಿಪ್ಪು ಸುಲ್ತಾನ್ ಖಡ್ಗದ ಮೇಲೆ ಕಾಫೀರರ ವಿರುದ್ಧ ನನ್ನ ಯುದ್ಧ ಅಂತ ಬರೆಯಲಾಗಿದೆ. ಕಾಫೀರರು ಅಂದ್ರೆ ಯಾರು? ಅವರ ಪ್ರಕಾರ ಮುಸ್ಲಿಮರಲ್ಲದವರು ಕಾಫೀರರು ಎಂದು ಹೇಳಿದರು.

ನಿನ್ನೆ 135 ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆಗಿದೆ. ಈ ಮೂಲಕ ನಾನೂ ಇದೀನಿ ಅಂತ ತೋರಿಸಿಕೊಳ್ತಿದ್ದಾರಾ ಗೃಹ ಸಚಿವರು? ಕರ್ನಾಟಕಕ್ಕೆ ಮುಂದೆ ಬಹಳ ದೊಡ್ಡ ಅಪಾಯ ಕಾದಿದೆ. ಶಿವಮೊಗ್ಗ, ಕೋಲಾರದಲ್ಲಿ ಇದರ ಟ್ರೈಲರ್ ಮಾತ್ರ ಈಗ ತೋರಿಸಿದ್ದಾರೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಶಿವಮೊಗ್ಗ ಗಲಭೆಗೆ ಟ್ವಿಸ್ಟ್ – ರಾಗಿಗುಡ್ಡದ ಗಲಾಟೆ ಪೂರ್ವನಿಯೋಜಿತ?

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಅರವಿಂದ ಬೆಲ್ಲದ್, ಮಾಜಿ ಶಾಸಕ ಕುಡಚಿ ರಾಜೀವ್, ಪರಿಷತ್ ಸದಸ್ಯ ದೇವೇಗೌಡ ಉಪಸ್ಥಿತರಿದ್ದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್