ಅಶ್ಲೀಲ ವಿಡಿಯೋ ಹೇಳಿಕೆ: ನೊಂದುಕೊಂಡ ನಟಿ ರೋಜಾ

Public TV
1 Min Read

ಮಾಜಿ ಸಚಿವರೊಬ್ಬರು ತಮ್ಮ ಬಳಿ ರೋಜಾ ಅವರ ಅಶ್ಲೀಲ ವಿಡಿಯೋ ಇರುವುದಾಗಿ ಹೇಳಿಕೊಂಡಿದ್ದರು. ನಿರಂತರವಾಗಿ ಅವರ ಮೇಲೆ ವಾಗ್ದಾಳಿ ಮಾಡುತ್ತಲೇ ಬಂದಿದ್ದರು. ಈ ವಿಚಾರವಾಗಿ ರೋಜಾ ನೊಂದುಕೊಂಡಿದ್ದಾರೆ. ಈಗ ರೋಜಾ ಕೇವಲ ನಟಿಯಲ್ಲ, ಜನಪ್ರತಿ ನಿಧಿ ಕೂಡ ಸಚಿವರಾಗಿಯೂ ಜಗನ್ ಸಂಪುಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ.

ಮಾಜಿ ಸಚಿವ ಅರೆಸ್ಟ್

ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ , ಹೆಸರಾಂತ ನಟಿ ಹಾಗೂ ಆಂಧ್ರ ಪ್ರದೇಶದ ಸಚಿವೆಯೂ ಆಗಿರುವ ರೋಜಾ (Roja) ಅವರ ಅಶ್ಲೀಲ ವಿಡಿಯೋ (Porn video) ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಡಿಪಿಯ ಮಾಜಿ ಸಚಿವ ಬಂಡಾರು ಸತ್ಯನಾರಾಯಣ ಅವರನ್ನು ನಿನ್ನೆ ಬಂಧಿಸಲಾಗಿದೆ.

ಹಲವು ದಿನಗಳಿಂದ ರೋಜಾ ಮತ್ತು ಬಂಡಾರು ಸತ್ಯನಾರಾಯಣ (Bandaru Satyanarayan) ಅವರಿಗೆ ಜಟಾಪಟಿ ನಡೆಯುತ್ತಿದೆ. ರಾಜಕೀಯವಾಗಿ ವಿರೋಧಿಗಳು ಆಗಿರುವ  ಇವರು, ಹಾದಿ ರಂಪ ಬೀದಿ ರಂಪ ಮಾಡುತ್ತಿದ್ದಾರೆ. ಹಾಗಾಗಿ ರೋಜಾ ಅವರ ಅಶ್ಲೀಲ ವಿಡಿಯೋಗಳು ನನ್ನ ಬಳಿ ಇವೆ. ಅವುಗಳನ್ನು ಸೂಕ್ತ ಸಮಯದಲ್ಲಿ ರಿಲೀಸ್ ಮಾಡುತ್ತೇನೆ ಎಂದು ಬಂಡಾರು ಹೇಳಿದ್ದರು.

ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಆಪ್ತರಾಗಿರುವ ಬಂಡಾರು ಅವರು, ನಾಯ್ಡು ಅವರ ಬಗ್ಗೆ ಅವಹೇಳನಕಾರಿಯಾಗಿ ರೋಜಾ ಮಾತನಾಡುವುದನ್ನು ನಿಲ್ಲಿಸದಿದ್ದರೆ ರೋಜಾ ಅವರ ಅಶ್ಲೀಲ ವಿಡಿಯೋವನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.

 

ಈ ಕುರಿತಂತೆ ರೋಜಾ ಅವರು ಗುಂಟೂರಿನ ನಗರಂಪಲೆಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಕ್ಟೋಬರ್ 2 ರಂದು ಸೋಮವಾರ ಬೆಳಗ್ಗೆಯೇ ವಿಶಾಖಪಟ್ಟಣಂ ಜಿಲ್ಲೆಯ ಪರವಾಡದ ವೆನ್ನಿಲಪಾಲೆಂನಲ್ಲೇ ಬಂಡಾರು ಅವರನ್ನು ಬಂಧಿಸಲಾಗಿದೆ (arrested). ಈ ಸಮಯದಲ್ಲಿ ಮನೆಯ ಮುಂದೆ ಹೈ ಡ್ರಾಮಾ ಕೂಡ ನಡೆದಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್