ಕೋವಿಡ್‌ ವೇಳೆ ಸ್ವಂತ ಹಣದಿಂದ ಬಡವರಿಗೆ ರೇಷನ್‌ ಹಂಚಿದ್ದ ಸಿಎಆರ್‌ ಪೊಲೀಸ್‌ ಹೃದಯಾಘಾತದಿಂದ ಸಾವು

Public TV
1 Min Read

– ವರ್ಷಕ್ಕೆ 2 ಬಾರಿ ರಕ್ತದಾನ ಮಾಡುತ್ತಿದ್ದ ಪೊಲೀಸ್‌ ಸೋಮನಗೌಡ

ಮಂಗಳೂರು: ಸರ್ಕಾರಿ ಸೇವೆ ಜೊತೆಗೆ ಸಮಾಜ ಸೇವೆಯಲ್ಲೂ ಗಮನ ಸೆಳೆದಿದ್ದ ಸಿಎಆರ್‌ ಪೊಲೀಸ್‌ ಸಿಬ್ಬಂದಿಯೊಬ್ಬರು ಸಾವಿಗೀಡಾಗಿರುವ ಘಟನೆ ಮಂಗಳೂರಿನಲ್ಲಿ (Mangaluru) ನಡೆದಿದೆ.

ಸೋಮನಗೌಡ ಚೌಧರಿ (31) ಮೃತ ದುರ್ದೈವಿ. ಮಂಗಳೂರು ಸಿಎಆರ್ ತುಕಡಿಯ ಹೆಡ್ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳೂರಿನಲ್ಲೇ ಸೋಮನಗೌಡ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಮಹಿಷಾ ದಸರಾ ದಿನವೇ ಚಾಮುಂಡಿ ಬೆಟ್ಟಕ್ಕೆ ಬಿಜೆಪಿಯಿಂದ ಜಾಥಾ – 5 ಸಾವಿರ ಮಂದಿ ಭಾಗಿ

ಸೋಮನಗೌಡ ಅವರು ಕೋವಿಡ್ ಸಂದರ್ಭದಲ್ಲಿ ಸ್ವಂತ ಹಣದಿಂದ ಬಡವರಿಗೆ ರೇಷನ್ ಹಂಚಿ ನೆರವಾಗಿದ್ದರು. ವರ್ಷಕ್ಕೆ ಎರಡು ಬಾರಿ ರಕ್ತದಾನ ಮಾಡುತ್ತಿದ್ದರು. ಸರ್ಕಾರಿ ಸೇವೆಯ ಜೊತೆಗೆ ಸಮಾಜ ಸೇವೆಗಳಲ್ಲೂ ತೊಡಗಿಸಿಕೊಂಡಿದ್ದರು.

ಇನ್‌ಪೆಕ್ಟರ್ ಒಬ್ಬರಿಗೆ ಡ್ರೈವರ್ ಆಗಿದ್ದರು. ತನ್ನ ಮೇಲಾಧಿಕಾರಿಗೆ ಜ್ವರ ಎಂದು ಅವರನ್ನು ಆಸ್ಪತ್ರೆಗೆ ಬಿಟ್ಟು ಜೀಪ್ ಬಳಿ ಬಂದಾಗ ಹೃದಯಾಘಾತ ಸಂಭವಿಸಿದೆ. ತಕ್ಷಣ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿ ಮಧ್ಯೆ ಸೋಮನಗೌಡ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಮಸೀದಿ ಮುಂದೆ ಪೂಜೆ – ಉದ್ವಿಗ್ನ ಪರಿಸ್ಥಿತಿ ನಿರ್ಮಾಣ

ಸೋಮನಗೌಡ ಅವರು ವಿಜಯಪುರ ಮೂಲದವರು. ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 2016 ರ ಬ್ಯಾಚ್‌ನವರಾದ ಸೋಮನಗೌಡ, ಮಂಗಳೂರಿನ ಸಿಎಆರ್‌ಗೆ ಕಾನ್‌ಸ್ಟೇಬಲ್‌ ಆಗಿ ಸೇರ್ಪಡೆಯಾಗಿದ್ದರು. ಬಳಿಕ ಹೆಡ್‌ಕಾನ್‌ಸ್ಟೇಬಲ್‌ ಆಗಿ ಪದೋನ್ನತಿ ಪಡೆದು ಇನ್‌ಸ್ಪೆಕ್ಟರ್‌ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮನಗೌಡ ಅವರಿಗೆ 3 ವರ್ಷದ ಹಿಂದೆ ಮದುವೆಯಾಗಿತ್ತು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್