‘ಐ ಯ್ಯಾಮ್ ಇನ್ ಲವ್’ ಅಂತಿದ್ದಾರೆ ರಚಿತಾ ರಾಮ್

By
2 Min Read

ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟಿ ರಚಿತಾ ರಾಮ್ (Rachita Ram) ‘ಐ ಯ್ಯಾಮ್ ಇನ್ ಲವ್’ (I am In Love) ಅಂತಿದ್ದಾರೆ. ಅರೇ.. ಇದೇನಿದು ಹೊಸ ಸುದ್ದಿ ಅನಬೇಡಿ. ಅವರು ಹೇಳಿದ್ದು ಹಾಡಿನ ಮೂಲಕ. ಅದು ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಎನ್ನುವುದು ವಿಶೇಷ. ಇಂದು ರಚಿತಾ ರಾಮ್ ಮತ್ತು ಅಭಿಷೇಕ್ ಅಂಬರೀಶ್ ಅವರ ಹುಟ್ಟು ಹಬ್ಬ. ಇವರ ಹುಟ್ಟು ಹಬ್ಬಕ್ಕಾಗಿಯೇ ಬ್ಯಾಡ್ ಮ್ಯಾನರ್ಸ್ ಚಿತ್ರತಂಡ ‘ಐ ಯ್ಯಾಮ್ ಇನ್ ಲವ್’ ಹಾಡನ್ನು ರಿಲೀಸ್ ಮಾಡಿದೆ.

ಮಾಸ್ ಹಾಡು ಬರೆದ ಜಯಂತ್ ಕಾಯ್ಕಿಣಿ

ಭಾವ ತುಂಬಿದ ಹಾಡುಗಳ ಮೂಲಕ ಫೇಮಸ್ ಆಗಿದ್ದ ಜಯಂತ್ ಕಾಯ್ಕಿಣಿ, ಇದೀಗ ಅಭಿಷೇಕ್ ಅಂಬರೀಶ್ (Abhishek Ambarish) ನಟನೆಯ ‘ಬ್ಯಾಡ್ ಮ್ಯಾನರ್ಸ್’ (Bad Manners) ಸಿನಿಮಾಗಾಗಿ ಮಾಸ್ ಗೀತೆಯೊಂದನ್ನು ಬರೆದಿದ್ದಾರೆ. ‘ಓಗ.. ಓಗ..’ ಎಂದು ಶುರುವಾಗುವ ಗೀತೆಯಲ್ಲಿ ಕೇಳದೇ ಇರುವಂಥ ಹಲವು ಪದಗಳನ್ನು ಬಳಸಲಾಗಿದೆ. ಅವೆಲ್ಲವೂ ಗ್ರಿಬಿಶ್ ಪದಗಳಾಗಿವೆಯಂತೆ. ಹೀಗಾಗಿ ಹಾಡು ಹೊಸ ರೀತಿಯಲ್ಲೇ ಕೇಳಿಸುತ್ತದೆ.

ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡಿಗೆ ಜಯಂತ್ ಕಾಯ್ಕಿಣಿ (Jayant Kaykini) ಸಾಹಿತ್ಯ ಬರೆದಿದ್ದರೆ, ಕಪಿಲ್ ಕಪಿಲನ್ ಹಾಡಿದ್ದಾರೆ. ಅಭಿಷೇಕ್ ಅಂಬರೀಶ್ ಸಖತ್ತಾಗಿಯೇ ಗೀತೆಗೆ ಸ್ಟೆಪ್ ಹಾಕಿದ್ದಾರೆ. ಸೂರಿ (Suri) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಇದೇ ಮೊದಲ ಬಾರಿಗೆ ಅಭಿಷೇಕ್ ಮತ್ತು ಸೂರಿ ಈ ಸಿನಿಮಾದ ಮೂಲಕ ಒಂದಾಗಿದ್ದಾರೆ.

ಈ ಹಿಂದೆ ಯುಗಾದಿ ದಿನದಂದು ಪೆಪ್ಪಿ ಸಾಂಗ್‌ಗೆ ರಿಲೀಸ್ ಆಗಿತ್ತು. ಆ ಹಾಡಿಗೆ ಧನಂಜಯ್ ರಾಜನ್ ಬೊಂಬಾಟ್ ಲಿರಿಕ್ಸ್ ಬರೆದಿದ್ದರು. ಬಾಲಿವುಡ್ ಖ್ಯಾತ ಗಾಯಕಿ ಉಷಾ ಉತ್ತುಪ್ ಹಾಗೂ ಆಕಾಶ್ ಜಾಕೋಬ್ ವಾಯ್ಸ್‌ನಲ್ಲಿ ಸಾಂಗ್ ಸಖತ್ ಮಜವಾಗಿತ್ತು. ಚಿತ್ರದಲ್ಲಿ ಅಭಿ ಪಾತ್ರ ಪರಿಚಯಿಸುವ ಸಾಂಗ್ ಇದಾಗಿದೆ.

 

ಅಭಿಷೇಕ್- ರುದ್ರ ಎರಡನ್ನು ಸೇರಿಸಿ ಹಾಡಿನಲ್ಲಿ ರುದ್ರಾಭಿಷೇಕ ನಡೆಸಲಾಗಿದೆ. ಕೊಂಚ ಹಿಂದಿ, ಇಂಗ್ಲೀಷ್ ಪದಗಳನ್ನು ಹೆಚ್ಚೇ ಸೇರಿಸಿ ಸಾಲುಗಳನ್ನು ಪೋಣಿಸಲಾಗಿದೆ. `ಬ್ಯಾಡ್ ಮ್ಯಾನರ್ಸ್’ (Bad Manners) ಟೈಟಲ್ ಸಾಂಗ್‌ಗೆ ಧನಂಜಯ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಅಭಿಷೇಕ್ ಸಿಕ್ಕಾಪಟ್ಟೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಸಾಂಗ್ ಶೂಟ್ ಮಾಡಿದ್ದಾರೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್