Gajarama: ರಾಜ್‌ವರ್ಧನ್ ಜೊತೆ ಸೊಂಟ ಬಳುಕಿಸಿದ ತುಪ್ಪದ ಬೆಡಗಿ ರಾಗಿಣಿ

Public TV
1 Min Read

ಡಿಂಗ್ರಿ ನಾಗರಾಜ್ ಪುತ್ರ ರಾಜ್‌ವರ್ಧನ್ (Rajavardhan) ಸದ್ಯ ‘ಗಜರಾಮ’ನಾಗಿ (Gajarama) ಮೋಡಿ ಮಾಡಲು ಸಜ್ಜಾಗಿದ್ದಾರೆ. ಹೀಗಿರುವಾಗ ರಾಜ್‌ವರ್ಧನ್‌ಗೆ ರಾಗಿಣಿ (Ragini Dwivedi) ಸಾಥ್ ನೀಡಿದ್ದಾರೆ. ಗಜರಾಮ ಹೀರೋ ಜೊತೆ ತುಪ್ಪದ ಬೆಡಗಿ ಸೊಂಟ ಬಳುಕಿಸಿದ್ದಾರೆ. ಇದನ್ನೂ ಓದಿ:ಮಾಡ್ರನ್ ಡ್ರೆಸ್ ಧರಿಸಿದ್ದರೂ ಮಾಂಗಲ್ಯ ತೆಗೆಯದ ಹರ್ಷಿಕಾಗೆ ಭೇಷ್ ಎಂದ ನೆಟ್ಟಿಗರು

ಪಕ್ಕಾ ಆ್ಯಕ್ಷನ್ ಕಮ್ ಲವ್ ಸ್ಟೋರಿಯಿರುವ ಈ ಚಿತ್ರದಲ್ಲಿ ರಾಜ್‌ವರ್ಧನ್ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ‘ಗಜರಾಮ’ ಚಿತ್ರದ ಶೂಟಿಂಗ್ ಮುಗಿಸಿದ್ದು, ಸಾಂಗ್ ಶೂಟ್ ಬಾಕಿಯಿತ್ತು. ಇಂದು (ಸೆ.30) ಬೆಂಗಳೂರಿನ ಚಿಕ್ಕಗುಬ್ಬಿಯಲ್ಲಿ ರಾಗಿಣಿ- ರಾಜ್‌ವರ್ಧನ್‌ ಕಾಂಬೋದಲ್ಲಿ  ಸ್ಪೆಷಲ್ ಸಾಂಗ್ ಶೂಟಿಂಗ್ ನಡೆದಿದೆ.

ರಗಡ್ ಹೀರೋ ರಾಜ್‌ವರ್ಧನ್ ಜೊತೆ ರಾಗಿಣಿ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಚಿತ್ರೀಕರಣದ ಸುಂದರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಫೋಟೋ ನೋಡಿ ಸಿನಿಮಾದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಅದ್ಯಾವಾಗ ಸಿಗುತ್ತದೆ ಅಂತಾ ಫ್ಯಾನ್ಸ್ ಕೇಳುತ್ತಿದ್ದಾರೆ. ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

ಬಿಚ್ಚುಗತ್ತಿ, ಪ್ರಣಯಂ, ಹಿರಣ್ಯ (Hiranya Film) ಸಿನಿಮಾದ ಬಳಿಕ ‘ಗಜರಾಮ’ ರಾಜ್‌ವರ್ಧನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ತಪಸ್ವಿನಿ ಪೂಣಚ್ಚ ನಟಿಸಿದ್ದಾರೆ. ಹೀರೋಗೆ ಠಕ್ಕರ್ ಕೊಡಲು ಶಿಷ್ಯ ದೀಪಕ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್