ನಾನು ಚಹಾ ಕೊಡಲ್ಲ, ಮತ ಹಾಕುವವರು ಹಾಕ್ತಾರೆ: ಗಡ್ಕರಿ

Public TV
2 Min Read

ನಾಗ್ಪುರ: ಮುಂಬರುವ ಚುನಾವಣೆಯಲ್ಲಿ ನಾನು ಬ್ಯಾನರ್ ಹಾಕುವುದಿಲ್ಲ. ಪೋಸ್ಟರ್ ಹಂಚುವುದಿಲ್ಲ. ಲೋಕಸಭಾ ಕ್ಷೇತ್ರವಾದ ನಾಗ್ಪುರದಲ್ಲಿ (Nagpur) ಪ್ರಚಾರದ ಸಮಯದಲ್ಲಿ ಜನರಿಗೆ ಚಹಾವನ್ನು ನೀಡಲಾಗುವುದಿಲ್ಲ. ನನಗೆ ಮತ ಹಾಕುವ ಇಚ್ಛೆ ಇರುವ ಜನರು ಮತ ಹಾಕೇ ಹಾಕುತ್ತಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.

ಮಹಾರಾಷ್ಟ್ರದ (Maharashtra) ವಾಶಿಮ್‌ನಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ವೇಳೆ ಮಾತನಾಡಿದ ಅವರು, ಲಂಚವನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಅದನ್ನು ಪಡೆಯಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಮತದಾರರು (Voters) ತುಂಬಾ ಬುದ್ಧಿವಂತರು. ಅವರು ಪ್ರತಿಯೊಬ್ಬ ಅಭ್ಯರ್ಥಿಯಿಂದ ಚುನಾವಣಾ ಹಣವನ್ನು ಪಡೆಯುತ್ತಾರೆ. ಕೊನೆಗೆ ತಮಗೆ ಸರಿ ಎನಿಸುವ ಅಭ್ಯರ್ಥಿಗೆ ಮತ ಹಾಕುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: 2000 ರೂ. ನೋಟುಗಳ ವಿನಿಮಯ ಅವಧಿ ಇಂದಿಗೆ ಅಂತ್ಯವಾದರೂ ಬದಲಾಯಿಸಬಹುದು

ಈ ಬಾರಿಯ ಲೋಕಸಭಾ ಚುನಾವಣೆಗೆ (Lok Sabha Election) ಬ್ಯಾನರ್, ಪೋಸ್ಟರ್ ಹಾಕುವುದಿಲ್ಲ. ಜನರಿಗೆ ಚಹಾ ನೀಡುವುದಿಲ್ಲ. ಮತ ಹಾಕಬೇಕಾದವರು ಮತ ಹಾಕುತ್ತಾರೆ. ಇಲ್ಲದವರು ಮತ ಹಾಕುವುದಿಲ್ಲ. ಲಂಚವನ್ನೂ ತೆಗೆದುಕೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದೇನೆ. ಹೀಗಿದ್ದರೇ ಮಾತ್ರ ನಾನು ಪ್ರಾಮಾಣಿಕವಾಗಿ ನಿಮ್ಮೆಲ್ಲರಿಗೂ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ನಂಬುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭ – ಪ್ರಧಾನಿ ಮೋದಿ ಭಾಗಿ

ಪೋಸ್ಟರ್ ಅಂಟಿಸಿ, ಎಲೆಕ್ಷನ್‌ಗೆ ದುಡ್ಡು ಕೊಟ್ಟು ಗೆಲ್ಲುತ್ತಾರೆ. ಆದರೆ ಇಂತಹ ತಂತ್ರಗಳಲ್ಲಿ ನನಗೆ ನಂಬಿಕೆ ಇಲ್ಲ. ಒಮ್ಮೆ ಇಂತಹ ಪ್ರಯೋಗ ಮಾಡಿದ್ದೆ. ಒಂದು ಕಿಲೋ ಗ್ರಾಂ ಸಾವೋಜಿ ಮಾಂಸವನ್ನು ಮತದಾರರಿಗೆ ನೀಡಿದ್ದೆ. ಆದರೆ ಅಂದು ಚುನಾವಣೆಯಲ್ಲಿ ಸೋತಿದ್ದೇವೆ. ಹೀಗೆ ಕುರಿ ಮಾಂಸ ಹಂಚಿದ್ದ ಮತ್ತೊಬ್ಬ ವ್ಯಕ್ತಿಯೂ ಸೋತಿದ್ದ ಎಂದರು. ಇದನ್ನೂ ಓದಿ: ವಿಶ್ವಕಪ್‌ ಕ್ರಿಕೆಟ್‌ ಅಲ್ಲ, ವಿಶ್ವ ಟೆರರ್‌ ಕಪ್‌ ಮಾಡ್ತೀವಿ – ಖಲಿಸ್ತಾನ್‌ ಉಗ್ರನಿಂದ ಬೆದರಿಕೆ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್