ಭಾರತದ ಚಂದ್ರಯಾನ-3 ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿಲ್ಲ: ಚೀನಾ ವಿಜ್ಞಾನಿ

By
2 Min Read

ಬೀಜಿಂಗ್: ಭಾರತದ ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿಲ್ಲ ಎಂದು ಚೀನಾದ ಉನ್ನತ ವಿಜ್ಞಾನಿಯೊಬ್ಬರು ಪ್ರತಿಪಾದಿಸಿದ್ದಾರೆ.

ಎರಡು ವಾರಗಳ ಹಿಮಭರಿತ ಚಂದ್ರನ ರಾತ್ರಿಯ ನಂತರ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನಿಂದ ಸಿಗ್ನಲ್‌ ಸಿಗುತ್ತಿಲ್ಲ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದರು. ಲ್ಯಾಂಡರ್‌ ಮತ್ತು ರೋವರ್‌ ಸಂವಹನ ಸಂಪರ್ಕ ಸಾಧಿಸಲು ಪ್ರಯತ್ನ ನಡೆಯುತ್ತಿದೆ ಎಂದಿದ್ದರು. ಇದೇ ಹೊತ್ತಿನಲ್ಲಿ ಚೀನಾ ವಿಜ್ಞಾನಿ, ಭಾರತದ ಚಂದ್ರಯಾನ-3 ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡರ್‌, ರೋವರ್‌ನಿಂದ ಸಿಗ್ನಲ್‌ ಸಿಗ್ತಿಲ್ಲ: ಇಸ್ರೋ

ಚೀನಾದ ಮೊದಲ ಚಂದ್ರನ ಕಾರ್ಯಾಚರಣೆಯ ಮುಖ್ಯ ವಿಜ್ಞಾನಿಯಾಗಿದ್ದ ಓಯಾಂಗ್ ಜಿಯುವಾನ್ (Ouyang Ziyuan), ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿಲ್ಲ ಎಂದು ಹೇಳಿದ್ದಾರೆ.

ಚಂದ್ರಯಾನ-3 ರ ಲ್ಯಾಂಡಿಂಗ್ ಸೈಟ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇರಲಿಲ್ಲ. ಚಂದ್ರನ ದಕ್ಷಿಣ ಧ್ರುವ ಪ್ರದೇಶವೂ ಅಲ್ಲ ಎಂದು ಸೈನ್ಸ್‌ ಟೈಮ್ಸ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಚೀನೀ ಅಕಾಡೆಮಿ ಆಫ್ ಸೈನ್ಸಸ್‌ನ ಸದಸ್ಯರೂ ಆಗಿರುವ ಓಯಾಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಪತ್ತೆ ಹಚ್ಚಿದ ಚಂದ್ರಯಾನ-3

ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಧ್ರುವದಿಂದ 619 ಕಿ.ಮೀ ದೂರದಲ್ಲಿ ಇಳಿದಿದೆ. ಹೀಗಾಗಿ ಅದನ್ನು ದಕ್ಷಿಣ ಧ್ರುವ ಎಂದು ಕರೆಯಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.

ಚಂದ್ರನ ದಕ್ಷಿಣ ಭಾಗದ 69 ಡಿಗ್ರಿ ಅಕ್ಷಾಂಶದಲ್ಲಿ ಲ್ಯಾಂಡರ್‌ ಇಳಿದಿದೆ. ಇದು ದಕ್ಷಿಣ ಧ್ರುವದ ಭಾಗವಷ್ಟೆ. ಆದರೆ ದಕ್ಷಿಣ ಧ್ರುವ ಅಲ್ಲ. 88.5ರಿಂದ 90 ಡಿಗ್ರಿ ಅಕ್ಷಾಂಶದಲ್ಲಿ ದಕ್ಷಿಣ ಧ್ರುವ ಇದೆ. ಭೂಮಿ ತಿರುಗುವ ಅಕ್ಷವು ಸೂರ್ಯನೆಡೆಗೆ 23.5 ಡಿಗ್ರಿ ವಾಲಿದೆ. ಆದ್ದರಿಂದ ದಕ್ಷಿಣ ಧ್ರುವವು 66.5 ರಿಂದ 90 ಡಿಗ್ರಿವರೆಗೆ ಇದೆ. ಅಂದರೆ ಚಂದ್ರ ಕೇವಲ 1.5 ಡಿಗ್ರಿಯಷ್ಟೇ ವಾಲಿರುವುದರಿಂದ ದಕ್ಷಿಣ ಧ್ರುವದ ಪ್ರದೇಶ ಕಿರಿದಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ದ್ರವರೂಪದ ಚಿನ್ನ, ಬಾಹ್ಯಾಕಾಶದಲ್ಲಿ ವಾಸ್ತವ್ಯ, ಮಾನವ ಸಾಹಸಗಳಿಗೆ ಹಾದಿ ಮಾಡಿಕೊಡಲಿದೆ ಚಂದ್ರಯಾನ-3ರ ಯಶಸ್ಸು

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್