ತೆಲುಗಿನತ್ತ ‘ಬಿಗ್‌ ಬಾಸ್‌’ ಖ್ಯಾತಿಯ ಅಮೂಲ್ಯ ಗೌಡ

By
1 Min Read

ಮಲಿ, ಬಿಗ್ ಬಾಸ್ (Bigg Boss Kannada) ಖ್ಯಾತಿಯ ಅಮೂಲ್ಯ ಗೌಡ (Amulya) ಇದೀಗ ತೆಲುಗಿನ (Telagu) ಕಿರುತೆರೆಯತ್ತ ಮುಖ ಮಾಡಿದ್ದಾರೆ. ಬಿಗ್ ಬಾಸ್ ಶೋ ಆದ್ಮೇಲೆ ಮೊದಲ ಬಾರಿಗೆ ಟಿವಿಪರದೆಯಲ್ಲಿ ಅಮೂಲ್ಯ ದರ್ಶನ ಕೊಡ್ತಿದ್ದಾರೆ.

‘ಗುಂಡೇನಿಂದ ಗುಡಿ ಗಂಟಲು’ ಎಂಬ ತೆಲುಗಿನ ಸೀರಿಯಲ್ ಮೂಲಕ ಅಮೂಲ್ಯ ಕಾಣಿಸಿಕೊಳ್ತಿದ್ದಾರೆ. ಗೃಹಿಣಿಯಾಗಿ ಅಮೂಲ್ಯ ಸೀರಿಯಲ್‌ನಲ್ಲಿ ಜೀವತುಂಬಿದ್ದಾರೆ. ಕುಡುಕ ಗಂಡನನ್ನು ಸರಿ ದಾರಿಗೆ ತರುವ ಪಾತ್ರದಲ್ಲಿ ನಟಿಸಿದ್ದಾರೆ.

ಕಮಲಿಯಾಗಿ (Kamali) ಕನ್ನಡ ಸಿನಿಪ್ರೇಕ್ಷಕರ ಮನಗೆದ್ದ ನಟಿ ಅಮೂಲ್ಯ ಬಳಿಕ ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು. ಫಿನಾಲೆ ತಲುಪುವ ಒಂದು ವಾರದ ಮುನ್ನ ದೊಡ್ಮನೆಯಿಂದ ಔಟ್ ಆದರು. ಇದನ್ನೂ ಓದಿ:ಸಮಂತಾ ಔಟ್‌, ರಶ್ಮಿಕಾ ಮಂದಣ್ಣಗೆ ಸಿಕ್ತು ಬಿಗ್‌ ಚಾನ್ಸ್

‘ಬಿಗ್ ಬಾಸ್’ ಶೋ ಬಳಿಕ ತೆಲುಗಿನ ಧಾರಾವಾಹಿ ಒಪ್ಪಿಕೊಳ್ಳುವ ಮೂಲಕ ನಟನೆಗೆ ಮರಳಿದ್ದಾರೆ. ಕನ್ನಡ ಚಿತ್ರಗಳಲ್ಲಿ ನಟಿಸಲು ಕಥೆ ಕೇಳ್ತಿದ್ದಾರೆ ಎನ್ನಲಾಗುತ್ತಿದೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್