ಸಮಂತಾ ಔಟ್‌, ರಶ್ಮಿಕಾ ಮಂದಣ್ಣಗೆ ಸಿಕ್ತು ಬಿಗ್‌ ಚಾನ್ಸ್

By
1 Min Read

ಸೌತ್ ನಟಿ ಸಮಂತಾ, ಅನಾರೋಗ್ಯ ಸಮಸ್ಯೆಯಿಂದ ಶೂಟಿಂಗ್‌ಗೆ ಬ್ರೇಕ್ ಹೇಳಿದ್ದಾರೆ. ಇದೀಗ ಸ್ಯಾಮ್ ನಟಿಸಬೇಕಿದ್ದ ಚಿತ್ರ ರಶ್ಮಿಕಾ ಮಂದಣ್ಣ (Rashmika Mandanna) ಪಾಲಾಗಿದೆ. ಸಮಂತಾ ನಾಯಕಿಯಾಗಿ ಕಾಣಿಸಿಕೊಳ್ಳಬೇಕಿದ್ದ ಸಿನಿಮಾ ಈಗ ಶ್ರೀವಲ್ಲಿ ಕೈಗೆತ್ತಿಕೊಂಡಿದ್ದಾರೆ.

ತೆಲುಗಿನ ನಿರ್ದೇಶಕ ರಾಹುಲ್ ರವಿಚಂದ್ರನ್ ಡೈರೆಕ್ಷನ್ ಚಿತ್ರದಲ್ಲಿ ಸಮಂತಾ ನಟಿಸುತ್ತಾರೆ ಎಂದು ಫೈನಲ್ ಆಗಿತ್ತು. ಈಗ ಕಾರಣಾಂತರಗಳಿಂದ ಸ್ಯಾಮ್ ನಟಿಸುತ್ತಿಲ್ಲ. ಆ ಪಾತ್ರಕ್ಕೆ ರಶ್ಮಿಕಾರನ್ನ ತಂಡ ಸಂಪರ್ಕಿಸಿ ಕಥೆ ಹೇಳಿದ್ದಾರಂತೆ, ನಟಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಯಶಸ್ಸಿಗಾಗಿ ತಮ್ಮ ಹೆಸರನ್ನೇ ಬದಲಾಯಿಸಿಕೊಂಡರಾ ಯಶಸ್ ಸೂರ್ಯ

ಈ ಸಿನಿಮಾ ಕೂಡ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ರಶ್ಮಿಕಾ ವಿಭಿನ್ನ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದೆ ರೈನ್‌ಬೋ ಸಿನಿಮಾದಲ್ಲಿ ಸಮಂತಾ(Samantha) ನಟಿಸಬೇಕಿತ್ತು. ಆದರೆ ಸ್ಯಾಮ್ ಆ ಪ್ರಾಜೆಕ್ಟ್‌ನ ಅನಾರೋಗ್ಯದ ದೃಷ್ಟಿಯಿಂದ ಕೈಬಿಟ್ಟಿದ್ದರು. ‘ರೈನ್‌ಬೋ’ ಸಿನಿಮಾ ಕೂಡ ರಶ್ಮಿಕಾ ಪಾಲಾಯ್ತು. ಪ್ರಸ್ತುತ ಈ ಚಿತ್ರವನ್ನ ನಟಿ ಪೂರ್ಣಗೊಳಿಸಿದ್ದಾರೆ. ಅಂದ್ಹಾಗೆ, 2ನೇ ಬಾರಿ ಸ್ಯಾಮ್ ನಟಿಸಿಬೇಕಿದ್ದ ಪಾತ್ರ ಮತ್ತೆ ರಶ್ಮಿಕಾ ಪಾಲಾಗಿದೆ.

ಪುಷ್ಪ 2, ಅನಿಮಲ್, ರೈನ್‌ಬೋ, ರವಿತೇಜ ಜೊತೆಗಿನ ಸಿನಿಮಾ, ವಿಜಯ್ ದೇವರಕೊಂಡ ಜೊತೆ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್