ಖಾಕಿ ತೊಟ್ಟವರಿಗೆ ಕಚ್ಚುವ ತರಬೇತಿ- ಡ್ರಗ್ಸ್ ದಾಳಿ ವೇಳೆ ಪೊಲೀಸ್‌ ಟೀಂಗೆ ನಾಯಿಗಳ ಕಾಟ

Public TV
2 Min Read

ತಿರುವನಂತಪುರಂ: ವ್ಯಕ್ತಿಯೊಬ್ಬ ಡ್ರಗ್ಸ್ ಮಾರಾಟ ಮಾಡುತ್ತಿದ್ದಾನೆ ಎಂಬುದನ್ನು ಅರಿತ ಪೊಲೀಸರು ಆತನ ಮನೆ ಮೇಲೆ ದಾಳಿ ಮಾಡಲು ಹೋದಾಗ ನಾಯಿಗಳ ಕಾಟ ಎದುರಿಸಿದ ಪ್ರಸಂಗವೊಂದು ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

ಖಾಕಿ ತೊಟ್ಟು ಯಾರೇ ಬಂದರೂ ಕಚ್ಚುವಂತೆ ನಾಯಿಗಳಿಗೆ ತರಬೇತಿ (Trained To Bite Anyone In Khaki) ನೀಡಲಾಗಿತ್ತು. ಅಂತೆಯೇ ಇತ್ತ ದಾಳಿಗೆ ಬಂದ ಪೊಲೀಸರಿಗೆ ಅವುಗಳು ಅಡ್ಡಿ ಉಂಟುಮಾಡಿದವು.

ಏನಿದು ಘಟನೆ..?: ಭಾನುವಾರ ಪೊಲೀಸರು ಶಂಕಿತನ ಮನೆಗೆ ಪರಿಶೀಲನೆಗೆ ತೆರಳಿದ್ದಾರೆ. ಈ ವೇಳೆ ಒಂದಷ್ಟು ನಾಯಿಗಳು ಕಚ್ಚಲು ಬಂದವು. ಆಗ ಪೊಲೀಸರು ನಾಯಿಗಳಿಂದ ಪಾರಾಗಲು ಯತ್ನಿಸಿದರೆ, ಇತ್ತ ಆರೋಪಿಗಳು ತಪ್ಪಿಸಿಕೊಂಡು ಹೋಗಲು ಸಾಧ್ಯವಾಯಿತು. ಈ ನಡುವೆಯೂ ನಾಯಿಗಳನ್ನು ಎದುರಿಸಿ ವ್ಯಕ್ತಿಯ ಮನೆಯಿಂದ 17 ಕಿ.ಗ್ರಾಂಗಳಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಕೊಟ್ಟಾಯಂ ಎಸ್‍ಪಿ ಕೆ ಕಾರ್ತಿಕ್ ಐಪಿಎಸ್, ಗಾಂಧಿನಗರ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಒಳಗೊಂಡ ಶೋಧ ತಂಡವು ಸ್ಥಳಕ್ಕೆ ಆಗಮಿಸಿದಾಗ ಮಧ್ಯರಾತ್ರಿಯಾಗಿತ್ತು. ವ್ಯಕ್ತಿ ಮನೆಯಲ್ಲಿ ಇಷ್ಟೊಂದು ನಾಯಿಗಳು ಇರುತ್ತವೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಆದ್ದರಿಂದ ಆರಂಭದಲ್ಲಿ ಸರಿಯಾದ ಹುಡುಕಾಟ ನಡೆಸುವಲ್ಲಿ ವಿಫಲರಾದೆವು. ಅದೃಷ್ಟವಶಾತ್, ನಾಯಿಗಳಿಂದ ಯಾವುದೇ ಅಧಿಕಾರಿಗಳಿಗೆ ಗಾಯಗಳಾಗಿಲ್ಲ ಎಂದರು.

ಆರೋಪಿಯು ಖಾಕಿಯನ್ನು ನೋಡಿ ನಾಯಿಗಳಿಗೆ ಕಚ್ಚುವ ತರಬೇತಿಯನ್ನು ನೀಡಿದ್ದನು. ಬಿಎಸ್‍ಎಫ್‍ನಿಂದ ನಿವೃತ್ತನಾದ ವ್ಯಕ್ತಿಯಿಂದ ನಾಯಿ ನಿರ್ವಹಣೆಯ ಕುರಿತು ತರಬೇತಿ ಪಡೆದಿದ್ದನು. ಆದರೆ ಖಾಕಿ ಧರಿಸಿದವರನ್ನೇ ನಾಯಿಗಳು ಕಚ್ಚುವಂತೆ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಅವನು ಉತ್ತರಿಸಿಲ್ಲ. ಶ್ವಾನ ತರಬೇತುದಾರನ ಸೋಗಿನಲ್ಲಿ ಆರೋಪಿಗಳು ಮಾದಕ ವಸ್ತು ಮಾರಾಟ ಮಾಡುತ್ತಿದ್ದು, ಸ್ಥಳದಿಂದ 17 ಕೆಜಿಗೂ ಅಧಿಕ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಬಾಡಿಗೆ ಕೊಟ್ಟು ಆ ಮನೆಯಲ್ಲಿ ವಾಸಿಸುತ್ತಿದ್ದನು. ಅಲ್ಲದೆ ತಾನು ನೆಲೆಸಿದ್ದ ಪ್ರದೇಶದಲ್ಲಿ ಎಲ್ಲರಿಗೂ ನಾಯಿ ತರಬೇತುದಾರ ಎಂದೇ ಪರಿಚಿತನಾಗಿದ್ದನು. ಆದ್ದರಿಂದ ಜನರು ದಿನಕ್ಕೆ 1,000 ರೂ. ದರದಲ್ಲಿ ತಮ್ಮ ನಾಯಿಗಳನ್ನು ಅವನೊಂದಿಗೆ ಬಿಡುತ್ತಿದ್ದರು. ಸದ್ಯ ಸುಮಾರು 13 ನಾಯಿಗಳು ಅಲ್ಲಿದ್ದು, ಅವುಗಳ ಮಾಲೀಕರನ್ನು ಗುರುತಿಸಿದ ಬಳಿಕ ಹಸ್ತಾಂತರಿಸಲಾಗುವುದು. ಅಲ್ಲದೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದರು.

ನಾವು ಮೊದಲು ಆರೋಪಿಗಳನ್ನು ಹಿಡಿಯಬೇಕು ಮತ್ತು ನಂತರ ಯಾರಾದರೂ ದಂಧೆಯಲ್ಲಿ ಭಾಗಿಯಾಗಿದ್ದಾರೆಯೇ ಎಂದು ಕಂಡುಹಿಡಿಯಬೇಕು ಎಂದು ಅಧಿಕಾರಿ ಹೇಳಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್