ಸ್ಟಿರಾಯ್ಡ್ ನಿಂದಾಗಿ ದೇಹದ ಚರ್ಮ ಹಾಳು ಮಾಡಿಕೊಂಡ ಸಮಂತಾ

Public TV
1 Min Read

ಕ್ಷಿಣದ ಖ್ಯಾತ ನಟ ಸಮಂತಾ (Samantha) ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ತಮಗಿರುವ ಖಾಯಿಲೆಗಾಗಿ ಸ್ಟಿರಾಯ್ಡ್ (Steroid) ತೆಗೆದುಕೊಂಡಿದ್ದರಿಂದ ತಮ್ಮ ದೇಹದ ಚರ್ಮ ಹಾಳಾಗಿದೆ ಎಂದು ಅವರು ಹೇಳಿದ್ದಾರೆ. ತಾವು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಯಾವುದೇ ಫೋಟೋ ಹಾಕಲಿ, ಅದಕ್ಕೆ ಫಿಲ್ಟರ್ ಹಾಕುವುದಾಗಿ ತಿಳಿಸಿದ್ದಾರೆ.

ವೈದ್ಯರ ಸಲಹೆ ಮೇರೆಗೆ ದೇಹದಲ್ಲಿ ಕಾಣಿಸಿಕೊಳ್ಳುತ್ತಿದ್ದ ನೋವಿಗಾಗಿ ಸ್ಟಿರಾಯ್ಡ್ ತೆಗೆದುಕೊಳ್ಳುತ್ತಿದ್ದೆ. ಅದು ಅತೀಯಾಗಿ ದೇಹ ಸೇರಿಕೊಂಡಿದ್ದರಿಂದ ಚರ್ಮಕ್ಕೆ ತೊಂದರೆ ಮಾಡಿದೆ. ವೈದ್ಯರಾದ ಚಿನ್ಮಯಿ ಶ್ರೀಪಾದ ಅವರು ಚರ್ಮವನ್ನು ಸರಿ ಮಾಡುವುದಾಗಿ ಹೇಳಿದ್ದಾರೆ. ಎಲ್ಲವೂ ಅವರ ಕೈಯಲ್ಲಿದೆ ಎಂದು ಸಮಂತಾ ಹೇಳಿಕೊಂಡಿದ್ದಾರೆ.

ಪ್ರತಿ ದಿನವೂ ಸಮಂತಾ ಲಕಲಕ ಹೊಳೆಯುವಂತಹ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದರು. ಅಭಿಮಾನಿಯೊಬ್ಬ ನೀವು ಇಷ್ಟೊಂದು ಹೊಳೆಯಲು ಮತ್ತು ಸುಂದರವಾಗಿರಲು ಕಾರಣವೇನು? ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದೀರಿ ಮತ್ತು ವೃದ್ಧಿಸಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಮಂತಾ ನಿಜ ಉತ್ತರವನ್ನೇ ಕೊಟ್ಟಿದ್ದಾರೆ. ಎಲ್ಲ ಫೋಟೋಗಳಿಗೆ ಫಿಲ್ಟರ್ ಹಾಕುವೆ ಎಂದು ಹೇಳುವ ಮೂಲಕ ಸ್ಟಿರಾಯ್ಡ್ ಕಥೆಯನ್ನು ಹಂಚಿಕೊಂಡಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್