ಪರಿಣಿತಿ ಚೋಪ್ರಾ ಮದುವೆ: ಸ್ವಾಗತಕ್ಕೆ ಸಜ್ಜಾದ ಏರ್ ಪೋರ್ಟ್

Public TV
1 Min Read

ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚೆಡ್ಡಾ ವಿವಾಹ ಸೆಪ್ಟಂಬರ್ 24ರಂದು ಉದಯಪುರದಲ್ಲಿ ನಡೆಯುತ್ತಿದೆ. ನಾಳೆಯಿಂದ  ಮದುವೆ ಮುನ್ನ ಕಾರ್ಯಕ್ರಮಗಳು ಉದಯಪುರದಲ್ಲಿ ನಡೆಯಲಿದ್ದು, ಇಂದು ಪರಿಣಿತಿ ಮತ್ತು ರಾಘವ್ ಉದಯಪುರ ಏರ್ ಪೋರ್ಟಿಗೆ ಬಂದಿಳಿದರು. ನವ ಜೋಡಿಯನ್ನು ಸ್ವಾಗತಿಸುವುದಕ್ಕಾಗಿ ಉದಯಪುರ ಏರ್ ಪೋರ್ಟ್ ಅನ್ನೇ ಸಿಂಗಾರಗೊಳಿಸಲಾಗಿತ್ತು.

ರಾಜಸ್ತಾನದ ಸಂಪ್ರದಾಯದಂತೆ ಪರಿಣಿತಿ ಮತ್ತು ರಾಘವ್ ಜೋಡಿಯನ್ನು ವಿಮಾನ ನಿಲ್ದಾಣದಲ್ಲೇ ಸ್ವಾಗತಿಸಲಾಯಿತು. ಕೆಂಪುಹಾಸು ಸೇರಿದಂತೆ ವಿಶೇಷ ಸಂಗೀತ ಮತ್ತು ಸ್ವಾಗತಕ್ಕಾಗಿ ಸ್ಥಳೀಯ ಕಲಾವಿದರು ಆಗಮಿಸಿದ್ದರು. ದುಬಾರಿ ಕಾರಿನಲ್ಲಿ ನವ ಜೋಡಿ ಪಂಚತಾರಾ ಹೋಟೆಲ್ ಪ್ರಯಾಣಿಸಿತು. ಅಲ್ಲಲ್ಲಿ ಸ್ವಾಗತ ಫಲಕಗಳನ್ನು ಕೂಡ ಅಳವಡಿಸಲಾಗಿತ್ತು.

ಪರಿಣಿತಿ ಚೋಪ್ರಾ (Parineeti Chopra) ಮದುವೆ ಸಿದ್ಧತೆ ಭರ್ಜರಿಯಾಗಿ ನಡೆದಿದೆ. ಈಗಾಗಲೇ ಮುಂಬೈನ ಪರಿಣಿತಿ ಮನೆಯು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜೊತೆಗೆ ಮದುವೆ ಆಗಲಿರುವ ಉದಯಪುರದ ಲೀಲಾ ಪ್ಯಾಲೇಸ್ ಕೂಡ ಸಜ್ಜಾಗಿದೆ. ಸೆ.23 ಮತ್ತು 24 ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ವಿವಾಹ ನಡೆಯಲಿದೆ.

ಪರಿಣಿತಿ ಈಗಾಗಲೇ ಹಲವು ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರೀತಿಸಿದ ಗೆಳೆಯ, ರಾಜಕಾರಣಿ ರಾಘವ್ ಚಡ್ಡಾ (Raghav Chadha) ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದು, ಇಬ್ಬರೂ ಸೇರಿ ಗಣ್ಯರಿಗೆ ಮದುವೆ (Marriage) ಆಮಂತ್ರಣ ಪತ್ರಿಕೆ ಹಂಚುವಲ್ಲಿ ನಿರತರಾಗಿದ್ದಾರೆ. ಒಟ್ಟು ಇನ್ನೂರು ಗಣ್ಯರಿಗೆ ಅಂದು ಆಹ್ವಾನ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ಗಣ್ಯರು ಹೊರ ದೇಶದವರು ಆಗಿದ್ದಾರೆ ಎನ್ನುವುದು ವಿಶೇಷ.

ರಾಘವ್- ಪರಿಣಿತಿ ಸೆ.24ರಂದು ಉದಯಪುರದಲ್ಲಿ (Udaipur) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಪಂಜಾಬ್ ಸಂಪ್ರದಾಯದಂತೆ ಮದುವೆ ನಡೆಯಲಿದೆ. ವಿವಾಹ ಸಮಾರಂಭಗಳು ಸೆ.22ರಿಂದ ಪ್ರಾರಂಭವಾಗಲಿದ್ದು, ಸೆ.24ರವರೆಗೆ ನಡೆಯಲಿದೆ. ಮದುವೆಯ ಕುರಿತು ಸಂಪೂರ್ಣ ವಿವರ ಈ ಕಾರ್ಡ್‍ನಲ್ಲಿದೆ. ಸೆ.30ರಂದು ಚಂಡೀಗಢದ ತಾಜ್ ಹೋಟೆಲ್‍ನಲ್ಲಿ ಆರತಕ್ಷತೆ ನಡೆಯಲಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್