ರಿಷಬ್ ಶೆಟ್ಟಿ ದಂಪತಿ ಜೊತೆಗಿನ ಫೋಟೋ ಹಂಚಿಕೊಂಡ ‘ರಣಧೀರ’ ನಟಿ ಖುಷ್ಬೂ

Public TV
1 Min Read

ನ್ನಡದ ನಟಿ ಖುಷ್ಬೂ ಅವರು ‘ಕಾಂತಾರ’ (Kantara) ಹೀರೋ ರಿಷಬ್ ಶೆಟ್ಟಿ (Rishab Shetty) ದಂಪತಿ ಜೊತೆ ಫೋಟೋ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅವರನ್ನ ರಣಧೀರ ನಟಿ ಖುಷ್ಬೂ (Kushboo Sundar) ಕೊಂಡಾಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ:ಶಾರುಖ್‌ಗೆ ಡಬಲ್ ಧಮಾಕಾ- ಗೆಲುವಿನ ಟ್ರ್ಯಾಕ್‌ಗೆ ಮರಳಿದ ಬಾದ್‌ಶಾ

‘ಕಾಂತಾರ’ (Kantara Film) ಸಿನಿಮಾದ ಮೂಲಕ ಡಿವೈನ್ ಸ್ಟಾರ್ ಆಗಿ ಮಿಂಚ್ತಿರುವ ರಿಷಬ್ ಶೆಟ್ಟಿ (Rishab Shetty)  ಜೊತೆ ಬಹುಭಾಷಾ ನಟಿ ಖುಷ್ಬೂ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸೈಮಾ ಅವಾರ್ಡ್‌ಗಾಗಿ (Siima Awards) ದುಬೈಗೆ ಭೇಟಿ ನೀಡಿದ್ದು, ದಕ್ಷಿಣದ ಪ್ರತಿಭಾವಂತ ನಟರನ್ನು ಭೇಟಿಯಾಗಲು ಖುಷಿಯಾಗುತ್ತಿದೆ ಎಂದು ಖುಷ್ಬೂ ಸಂತಸ ವ್ಯಕ್ತಪಡಿಸಿದ್ದಾರೆ.

ಸೈಮಾ ಅವಾರ್ಡ್ ಸಮಾರಂಭದಲ್ಲಿ ನಟ ರಿಷಬ್ ಶೆಟ್ಟಿ ಅವರು ಬೆಸ್ಟ್ ಡೈರೆಕ್ಟರ್, ಬೆಸ್ಟ್ ಆಕ್ಟರ್ ಅವಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ. ಬೆಸ್ಟ್ ನಟಿ ಅವಾರ್ಡ್ ಕಾಂತಾರ ನಟಿ ಸಪ್ತಮಿ (Saptami Gowda) ಬಾಚಿಕೊಂಡಿದ್ದಾರೆ. ಸೈಮಾ ಅವಾರ್ಡ್‌ನಲ್ಲಿ ‘ಕಾಂತಾರ’ ಟೀಮ್ 7ಕ್ಕೂ ಅಧಿಕ ಪ್ರಶಸ್ತಿ, ಹಲವು ವಿಭಾಗಗಳಲ್ಲಿ ಬಾಚಿಕೊಂಡಿದ್ದಾರೆ.

ಖುಷ್ಬೂ ಸುಂದರ್ (Kushboo Sundar) ಅವರು ಕನ್ನಡದ ರಣಧೀರ (Ranadheera), ಮ್ಯಾಜಿಕ್ ಅಜ್ಜಿ, ಕಲಿಯುಗ ಭೀಮ, ಹೃದಯ ಗೀತೆ, ಪ್ರೇಮಾಗ್ನಿ, ಶಾಂತಿ ಕ್ರಾಂತಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್