ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ದೇವೇಗೌಡ್ರು, ಕುಮಾರಸ್ವಾಮಿ ಅತಿ ಶೀಘ್ರದಲ್ಲೇ ತೆರೆ ಎಳೆಯುತ್ತಾರೆ: ನಿಖಿಲ್

Public TV
1 Min Read

ಬೀದರ್: ಲೋಕ ಸಮರದಲ್ಲಿ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಮೈತ್ರಿ (Alliance) ವಿಚಾರವಾಗಿ ದೇವೇಗೌಡರು (HD Deve Gowda) ಹಾಗೂ ಕುಮಾರಸ್ವಾಮಿ (HD Kumaraswamy) ಅತಿ ಶೀಘ್ರದಲ್ಲೇ ತೆರೆ ಎಳೆಯುತ್ತಾರೆ ಎಂದು ಮಾಜಿ ಸಿಎಂ ಹೆಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿಕೆ ನೀಡಿದ್ದಾರೆ.

ಬೀದರ್‌ನಲ್ಲಿ (Bidar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾನು ಸಿನಿಮಾ (Cinema) ಶೂಟ್ ಪ್ರಾರಂಭ ಮಾಡಿದ್ದು, ರಾಜಕೀಯದಿಂದ (Politics) ದೂರ ಉಳಿಯಬೇಕು ಎಂದು ತೀರ್ಮಾನ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಮೂವರು DCM ಸೃಷ್ಠಿ- ರಾಜಣ್ಣ ಹೇಳಿಕೆಯಲ್ಲಿ ತಪ್ಪಿಲ್ಲ ಅಂದ್ರು ಶರಣಪ್ಪ

ಒಂದು ಪ್ರಾದೇಶಿಕ ಪಕ್ಷ ಕಟ್ಟೋದು ಬಹಳ ಕಷ್ಟ. ಆದರೆ ದೇವೇಗೌಡರ ಹೋರಾಟದ ಶ್ರಮ ಹಾಗೂ ಉತ್ಸಾಹಿ ಕಾರ್ಯಕರ್ತರಿಂದ ಪಕ್ಷ ಕಟ್ಟಲಾಗಿದೆ. ಕುಮಾರಸ್ವಾಮಿ ಅವರು ಬಹಳ ಯಶಸ್ವಿಯಾಗಿ ಕಳೆದ 25 ವರ್ಷಗಳಿಂದ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದು, ಬಹಳಷ್ಟು ಹಿರಿಯ ನಾಯಕರ ಕೊಡುಗೆ ಈ ಪಕ್ಷಕ್ಕೆ ಇದೆ ಎಂದು ಹೇಳಿದರು. ಇದನ್ನೂ ಓದಿ: ಹರಿಪ್ರಸಾದ್ ಹೇಳಿಕೆಯಿಂದ ಪಕ್ಷಕ್ಕೆ ಇರಿಸು ಮುರಿಸು: ಟಿ.ಬಿ ಜಯಚಂದ್ರ

ನಾವು ಲೋಕಸಭಾ ಚುನಾವಣೆಗೆ ಎಲ್ಲೆಲ್ಲಿ ಸ್ಪರ್ಧೆ ಮಾಡಬೇಕು ನೋಡೋಣ. ಆದರೆ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತನಾಗಿಯೇ ಓಡಾಡುತ್ತೇನೆ ಎನ್ನುವ ಮೂಲಕ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎನ್ನುವ ಊಹಾಪೋಹಗಳಿಗೆ ತೆರೆ ಎಳೆದರು. ಇದನ್ನೂ ಓದಿ:  DCM ಹುದ್ದೆಗೆ ಹೆಚ್ಚು ಮಹತ್ವ ಕೊಡಬಾರದು, ಅದು ಸಾಂವಿಧಾನಿಕ ಹುದ್ದೆಯಲ್ಲ: ಟಿ.ಬಿ ಜಯಚಂದ್ರ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್