Gowri: ಇಂದ್ರಜಿತ್ ಲಂಕೇಶ್ ಸಿನಿಮಾದಲ್ಲಿ‌ ಚಂದು ಗೌಡ ವಿಲನ್

Public TV
2 Min Read

ನ್ನಡ- ತೆಲುಗು ಕಿರುತೆರೆಯ ಜನಪ್ರಿಯ ನಟ ಚಂದುಗೌಡ ಈಗ ‘ಗೌರಿ’ (Gowri Film) ಸಿನಿಮಾದಲ್ಲಿ ವಿಲನ್ ಆಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇಂದ್ರಜಿತ್ ಲಂಕೇಶ್ (Indrajit Lankesh) ನಿರ್ದೇಶನದ ಸಿನಿಮಾದಲ್ಲಿ ನಟ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಚಂದು ಗೌಡ, ಪಬ್ಲಿಕ್ ಟಿವಿ ಡಿಜಿಟಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಗೌರಿ’ (Gowri Film) ಚಿತ್ರತಂಡದಿಂದ ಚಂದು ಗೌಡಗೆ ಅಪ್ರೋಚ್ ಮಾಡಿದ್ದು, ಕಥೆ ಮತ್ತು ಪಾತ್ರ ಕೇಳಿ ಒಪ್ಪಿಕೊಂಡೆ. ಇಂದ್ರಜಿತ್ ಅವರ ನಿರ್ದೇಶನದಲ್ಲಿ ನಟಿಸುವುದು ಖುಷಿಯ ವಿಚಾರ. ಸಾಕಷ್ಟು ನವಪ್ರತಿಭೆಗಳನ್ನ ಇಂದ್ರಜಿತ್ ಲಾಂಚ್ ಮಾಡಿದ್ದಾರೆ. ಅವರ ನಿರ್ದೇಶನದಲ್ಲಿ ನಾನು ನಟಿಸಬೇಕು ಎಂದು ನನ್ನ ಬಹುಕಾಲದ ಕನಸಾಗಿತ್ತು. ಈಗ ನನಸಾಗಿದೆ ಎಂದು ಖುಷಿಯಿಂದ ಮಾತನಾಡಿದ್ದಾರೆ.

ಈ ಚಿತ್ರದಲ್ಲಿ ಉದ್ಯಮಿಯಾಗಿ ನೆಗೆಟಿವ್ ಶೇಡ್‌ನಲ್ಲಿ ನಟಿಸುತ್ತಿದ್ದೇನೆ. ನಾಯಕ ಸಮರ್ಜಿತ್ ಮತ್ತು ನನ್ನ ನಡುವಿನ ಕಾಂಬಿನೇಷನ್ ಚೆನ್ನಾಗಿ ಮೂಡಿ ಬರುತ್ತಿದೆ. ಚಿತ್ರೀಕರಣ ಕಳೆದ ಎರಡು ದಿನಗಳಿಂದ ಭರದಿಂದ ಸಾಗುತ್ತಿದೆ ಎಂದು ಚಂದು ತಿಳಿಸಿದ್ದಾರೆ.‌ ಇದನ್ನೂ ಓದಿ:ಡಿಸೆಂಬರ್ ನಲ್ಲಿ ‘ಯಶ್ 19’ ಸಿನಿಮಾ ಶೂಟಿಂಗ್: ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್

‘ಗೌರಿ’ ಚಿತ್ರದಲ್ಲಿ ನನ್ನ ಪಾತ್ರ ಸ್ಟೈಲೀಶ್ ಆಗಿದೆ. ನಟನೆಗೆ ತುಂಬಾ ಸ್ಕೋಪ್ ಇರುವಂತಹ ಪಾತ್ರ, ತೆರೆಯ ಮೇಲೆ ಅಬ್ಬರದ ಡೈಲಾಗ್ ಹೊರಹಾಕಲು ಅವಕಾಶ ನೀಡಿದ್ದಾರೆ. ರಾಬರ್ಟ್ (Robert) ಚಿತ್ರದ ನಂತರ ಒಂದೊಳ್ಳೆ ಕಥೆ ನನಗೆ ಸಿಕ್ಕಿದೆ. ಈ ಸಿನಿಮಾದ ಭಾಗವಾಗಿರೋದಕ್ಕೆ ಖುಷಿಯಿದೆ ಎಂದಿದ್ದಾರೆ.

ಇನ್ನೂ ಗೌರಿ (Gowri Film) ಸಿನಿಮಾದಲ್ಲಿ ಸಮರ್ಜಿತ್- ಸಾನ್ಯ ಅಯ್ಯರ್ (Saanya Iyer) ಜೋಡಿಯಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

ಕಿರುತೆರೆಯಲ್ಲಿ ‘ಕಥೆಯೊಂದು ಶುರುವಾಗಿದೆ’ ಮತ್ತು ತೆಲುಗಿನಲ್ಲಿ ‘ತ್ರಿನಯನಿ’ ಎಂಬ ಸೀರಿಯಲ್‌ನಲ್ಲಿ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಕನ್ನಡ ಸಿನಿಮಾ ಜೊತೆ ತೆಲುಗಿನಲ್ಲೂ ಒಳ್ಳೆಯ ಪ್ರಾಜೆಕ್ಟ್ ಸಿಗುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಪ್‌ಡೇಟ್ ಹಂಚಿಕೊಳ್ಳಲಿದ್ದಾರೆ.

ಶೃತಿ ನಾಗೇಶ್‌, ಪಬ್ಲಿಕ್‌ ಟಿವಿ ಡಿಜಿಟಲ್

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್