ಮುಂದಿನ ವಾರ ಬರಗಾಲ ಘೋಷಣೆ ಮಾಡ್ತೀವಿ – ಕೇಂದ್ರದ ಸಹಾಯ ಕೇಳ್ತೀವಿ: ಸಿದ್ದರಾಮಯ್ಯ

Public TV
2 Min Read

ಧಾರವಾಡ: ಕೇಂದ್ರ ಸರ್ಕಾರದ ನಿಯಮದಂತೆ ನಾವು ಬರಗಾಲ (Drought) ಘೋಷಣೆ ಮಾಡಬೇಕು. ಮುಂದಿನ ವಾರ ಬರಗಾಲ ಘೋಷಣೆ ಮಾಡುತ್ತೇವೆ. ಕೇಂದ್ರದ ಸಹಾಯ ಕೇಳಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.

ಧಾರವಾಡ (Dharwad) ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, ರೈತರಿಗೆ ಕೃಷಿ ಉತ್ಪಾದನೆ ಆಗಬೇಕು. ರೈತರು, ಸೈನಿಕರು, ಶಿಕ್ಷಕರು ಬಹಳ ಮುಖ್ಯ. ಬಹಳ ಸಂತೋಷದಿಂದ ಧಾರವಾಡ ಕೃಷಿ ವಿವಿಯಲ್ಲಿ ಕೃಷಿ ಮೇಳವನ್ನು ನಾನು ನನ್ನ ಮಿತ್ರರು ಉದ್ಘಾಟನೆ ಮಾಡಿದ್ದೇವೆ. ಕೃಷಿ ವಿವಿ ರೈತರಿಗೆ ಅನುಕೂಲ ಮಾಡುವ ಇಲಾಖೆ. 60% ಗೂ ಹೆಚ್ಚು ಜನಸಂಖ್ಯೆ ಕೃಷಿ ಮೇಲೆ ಅವಲಂಬನೆ ಆಗಿದೆ. ಕೃಷಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ. ರೈತರ ಆದಾಯ ಕೂಡಾ ಹೆಚ್ಚು ಆಗಲಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಎರಡು ಸರ್ಕಾರ ಕೂಡಾ ಕೃಷಿ ಅಭಿವೃದ್ಧಿ ಮಾಡಲು ಪ್ರಯತ್ನ ಮಾಡಬೇಕು. ನಮ್ಮದು ಕೃಷಿ ಪ್ರಧಾನ ದೇಶ ಎಂದು ಕರೆಯುತ್ತೇವೆ. ಕೆಲವರು ಕೃಷಿ ಬಿಡುತ್ತಿದ್ದಾರೆ. ಕೃಷಿ ಲಾಭದಾಯಕ ಅಲ್ಲ ಎಂದು ವಿಮುಖರಾಗುತ್ತಿದ್ದಾರೆ. ನಮ್ಮ ದೇಶದಲ್ಲಿ ಮಳೆಯಾಶ್ರಿತ ಬೇಸಾಯ ಹೆಚ್ಚು. ರಾಜಸ್ಥಾನ ಬಿಟ್ಟರೆ ನಾವೇ ಹೆಚ್ಚು. ಇದರಲ್ಲಿ ಕೃಷಿ ವಿವಿಗಳ ಪಾತ್ರ ಮುಖ್ಯ. ಒಣ ಬೇಸಾಯದ ಕಡೆ ಹೆಚ್ಚು ಗಮನ ಕೊಡಬೇಕಿರುವುದು ವಿವಿಗಳ ಕರ್ತವ್ಯ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ: ಡಿಕೆಶಿ ಟಾಂಗ್

ನಾವು ಜಿಡಿಪಿ ಬೆಳವಣಿಗೆಗೆ ಕೃಷಿ, ಸೇವಾ ಹಾಗೂ ಕೈಗಾರಿಕಾ ವಲಯ ಆರಿಸುತ್ತೇವೆ. ಕೃಷಿ ವಲಯ ಬೆಳೆದರೆ ಜಿಡಿಪಿ ಬೆಳೆಯುತ್ತದೆ. ಕೃಷಿ ಬೆಳೆಯದೇ ಇದ್ದರೆ ತಲಾ ಆದಾಯ ಕಡಿಮೆಯಾಗಲಿದೆ. ಆಗ ಜನ ಕೊಂಡುಕೊಳ್ಳುವುದಿಲ್ಲ. ಕೃಷಿ ಜನರಿಗೆ ಆಸಕ್ತಿ ಬರಬೇಕು. ಯುವಕರಿಗೆ ಹೆಚ್ಚು ಆಸಕ್ತಿ ಇರಬೇಕು. ಟೀಚರ್ ಆಗಿ ನಿವೃತ್ತ ಆದರೂ ಒಬ್ಬರು ಕೃಷಿ ಮಾಡುತ್ತಿದ್ದಾರೆ. ಬೋರ್‌ವೆಲ್ ಹಾಕಿ ಕೃಷಿ ಮಾಡಿ ಯಶಸ್ಸು ಆಗಿದ್ದಾರೆ. ಎಲ್ಲ ರೈತರು ಆ ಪ್ರಯತ್ನ ಮಾಡಬೇಕು. ಅದಕ್ಕೆ ಪೂರಕ ಕೆಲಸ ವಿವಿ ಮಾಡಬೇಕು ಎಂದರು. ಇದನ್ನೂ ಓದಿ: ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ-ಜೆಡಿಎಸ್ ಮೈತ್ರಿ: ಡಿ.ಕೆ.ಸುರೇಶ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್