ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲು ಬಿಡಬೇಡಿ: ಕಾಶ್ಮೀರಿ ಮುಸ್ಲಿಮರಿಗೆ ಖಲಿಸ್ತಾನಿ ಪ್ರತ್ಯೇಕತಾವಾದಿ ಕರೆ

Public TV
1 Min Read

ನವದೆಹಲಿ: ಈ ಬಾರಿ ದೆಹಲಿಯಲ್ಲಿ (New Delhi) ಜಿ20 ಶೃಂಗಸಭೆ (G20 Summit) ನಡೆಯುವುದಕ್ಕೆ ಬಿಡಬೇಡಿ ಎಂದು ಕಾಶ್ಮೀರಿ ಮುಸ್ಲಿಮರಿಗೆ ಖಲಿಸ್ತಾನಿ ಪ್ರತ್ಯೇಕತಾವಾದಿ (Khalistani Separatist) ಮತ್ತು ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಸಂಸ್ಥಾಪಕ ಗುರುಪತ್‌ವಂತ್ ಸಿಂಗ್ ಪನ್ನುನ್ ಕರೆ ನೀಡಿದ್ದಾರೆ.

ಎರಡು ದಿನಗಳ ಶೃಂಗಸಭೆಯು ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿದೆ. ಕಣಿವೆಯಲ್ಲಿ ನೆಲೆಸಿರುವ ಕಾಶ್ಮೀರಿ ಮುಸ್ಲಿಮರು ದೆಹಲಿಗೆ ಹೋಗಿ ಜಿ20 ಶೃಂಗಸಭೆಗೆ ಅಡ್ಡಿಪಡಿಸಿ ಎಂದು ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ವಿರುದ್ಧ ಆಕ್ರೋಶ; ಆನ್‌ಲೈನ್ ಮೂಲಕ ದೂರು ದಾಖಲಿಸಲು ಮುಂದಾದ ಹಿಂದೂ ಸಂಘಟನೆಗಳು

ಶುಕ್ರವಾರದ ಪ್ರಾರ್ಥನೆಯ ನಂತರ ಶೃಂಗಸಭೆ ನಡೆಯುವ ಪ್ರಗತಿ ಮೈದಾನಕ್ಕೆ ಮೆರವಣಿಗೆ ನಡೆಸುವಂತೆ ಪನ್ನುನ್ ಜನರಿಗೆ ಕರೆ ನೀಡಿದ್ದಾರೆ. ಅಲ್ಲದೆ ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿ ಧ್ವಜ ಹಾರಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ದೆಹಲಿಯಾದ್ಯಂತ ಹಲವಾರು ಮೆಟ್ರೋ ನಿಲ್ದಾಣಗಳನ್ನು ಖಲಿಸ್ತಾನ್ ಪರ ಗೀಚುಬರಹದಿಂದ ವಿರೂಪಗೊಳಿಸಿದ ಕೆಲವೇ ದಿನಗಳಲ್ಲಿ ಈ ಎಚ್ಚರಿಕೆ ಬಂದಿದೆ. ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಕ್ಕೆ ಎಸ್‌ಎಫ್‌ಜೆಗೆ ಸಂಬಂಧಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗುರುಪತ್ವಂತ್ ಸಿಂಗ್ ಪನ್ನುನ್‌ ಆದೇಶದ ಮೇರೆಗೆ ಈ ಘೋಷಣೆಗಳನ್ನು ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3ರ ಕೌಂಟ್‌ಡೌನ್‌ಗೆ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ವಲರ್ಮತಿ ಹೃದಯಾಘಾತದಿಂದ ನಿಧನ

ದೆಹಲಿಯಲ್ಲಿ ಪಂಜಾಬಿ ಬಾಗ್, ಶಿವಾಜಿ ಪಾರ್ಕ್, ಮಾದಿಪುರ್, ಪಶ್ಚಿಮ ವಿಹಾರ್, ಉದ್ಯೋಗ್ ನಗರ್, ಮಹಾರಾಜ ಸೂರಜ್ಮಲ್ ಸ್ಟೇಡಿಯಂ ಮತ್ತು ನಂಗ್ಲೋಯ್ ಸೇರಿದಂತೆ ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ‘ದೆಹಲಿ ಬನೇಗಾ ಖಲಿಸ್ತಾನ್’ ಮತ್ತು ‘ಖಾಲಿಸ್ತಾನ್ ರೆಫರೆಂಡಮ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಬರೆಯಲಾಗಿತ್ತು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್