ನಟಿ ಆಲಿಯಾ ಭಟ್ ಗಾಗಿ ಮೆಟ್ರೋ ರೈಲು ಹೈಜಾಕ್ ಮಾಡಿದ ನಟ

Public TV
1 Min Read

ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಗಾಗಿ ಮೆಟ್ರೋ ರೈಲು ಹೈಜಾಕ್ ಮಾಡಿದ ಘಟನೆ ‘ಜವಾನ್’ (Jawaan) ಸಿನಿಮಾದಲ್ಲಿ ನಡೆದಿದೆ. ಆಲಿಯಾ ಭಟ್ ಗಾಗಿ ಮೆಟ್ರೋ ರೈಲು ಹೈಜಾಕ್ (Hijack) ಮಾಡುವ ಆ ನಟ, ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ವಾಪಸ್ಸು ಆ ನಟನನ್ನು ಸಂಪರ್ಕಿಸಿ ‘ನಿನಗೇನು ಬೇಕು?’ ಎಂದು ಕೇಳುತ್ತಾರೆ. ‘ನನಗೆ ಆಲಿಯಾ ಭಟ್’ ಬೇಕು ಎಂದು ಕೇಳಿ ಬೆಚ್ಚಿಬೀಳಿಸುತ್ತಾನೆ.

ಇದು ನಿಜವಾಗಿಯೂ ನಡೆದ ಘಟನೆಯಲ್ಲ. ಶಾರುಖ್ ಖಾನ್ (Shahrukh Khan) ನಟನೆಯ ಜವಾನ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಈ ಟ್ರೈಲರ್  (Trailer) ನಲ್ಲಿ ಇಂಥದ್ದೊಂದು ಸಂಭಾಷಣೆ ಇದೆ. ಆಲಿಯಾ ಭಟ್ ಗಾಗಿ ಶಾರುಖ್ ರೈಲು ಹೈಜಾಕ್ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿಸುತ್ತದೆ. ಈ ಸಿನಿಮಾದಲ್ಲಿ ಆಲಿಯಾ ಇರದೇ ಇದ್ದರೂ, ಅವರ ಹೆಸರನ್ನು ಯಾಕೆ ತೆಗೆದುಕೊಂಡರು ಎನ್ನುವುದನ್ನು ಸಿನಿಮಾ ರಿಲೀಸ್ ಆದ ನಂತರವೇ ಗೊತ್ತಾಗಲಿದೆ. ಇದನ್ನೂ ಓದಿ:ಮದುವೆ ಬಳಿಕ ಅಮೆರಿಕಾಗೆ ಹಾರಿದ ಹರ್ಷಿಕಾ ದಂಪತಿ

ಈ ಕುರಿತು ಆಲಿಯಾ ಭಟ್ ಪ್ರತಿಕ್ರಿಯೆ ನೀಡಿದ್ದು, ‘ಇಡೀ ಜಗತ್ತೇ ಶಾರುಖ್ ಖಾನ್ ಅವರಿಗಾಗಿ ಕಾಯುತ್ತಿದೆ’ ಎಂದಷ್ಟೇ ಹೇಳಿದ್ದಾರೆ. ಈ ಮೂಲಕ ಸಿನಿಮಾಗಾಗಿ ಇಡೀ ಜಗತ್ತೇ ಕಾಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ‘ಆಲಿಯಾ ಭಟ್ ಬೇಕು’ ಎಂದು ಹೇಳುವ ಡೈಲಾಗ್ ಸಖತ್ ವೈರಲ್ ಕೂಡ ಆಗಿದೆ.

 

ನಟ ಶಾರುಖ್ ಜವಾನ್ ಸಿನಿಮಾದ ಪ್ರಚಾರವನ್ನು ದುಬೈನಲ್ಲೂ ಪ್ರಾರಂಭಿಸಿದ್ದಾರೆ. ಪ್ರಚಾರದ ಮೊದಲ ಭಾಗವಾಗಿ ಜಗತ್ತಿನ ಅತೀ ಎತ್ತರದ ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾದಲ್ಲಿ ಜವಾನ್ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ, ಅಭಿಮಾನಿಗಳಿಗೆ ತೋರಿಸಿದ್ದಾರೆ. ನಿನ್ನೆ ರಾತ್ರಿ ಬುರ್ಜ್ ಖಲೀಫಾದ ಮೇಲೆ ಜವಾನ್ ಟ್ರೈಲರ್ ಪ್ರದರ್ಶನವಾಗಿ ಸಾವಿರಾರು ಅಭಿಮಾನಿಗಳನ್ನು ರಂಜಿಸಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್