5,966 ಕೋಟಿ ರೂ.ಗೆ BCCI ಮಾಧ್ಯಮ ಹಕ್ಕು ಪಡೆದ Viacom18

Public TV
2 Min Read

ಮುಂಬೈ: ಈಗಾಗಲೇ ಐಪಿಎಲ್ (IPL) ಡಿಜಿಟಲ್ ಮತ್ತು ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಟಿವಿ ಹಾಗೂ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಗೆದ್ದುಕೊಂಡಿರುವ ವಯಾಕಾಮ್‌-18 (Viacom18) ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ತನ್ನ ಪ್ರಾಬಲ್ಯ ಮುಂದುವರಿಸಿದೆ.

5,966.4 ಕೋಟಿ ರೂ.ಗಳಿಗೆ 5 ವರ್ಷಗಳಿಗೆ ಅನ್ವಯವಾಗುವಂತೆ ಬಿಸಿಸಿಐ ಮಾಧ್ಯಮ ಹಕ್ಕನ್ನ (BCCI Media Rights) ವಯಾಕಾಮ್-18 ಪಡೆದುಕೊಂಡಿದೆ. ಜಿಯೋ ಸಿನಿಮಾ ಮೊಬೈಲ್‌ ಆ್ಯಪ್ ಮತ್ತು ಸ್ಫೋರ್ಟ್ಸ್‌-18 ಟಿವಿ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವ ವಯೋಕಾಮ್‌-18, ಬಿಸಿಸಿಐನ ಡಿಜಿಟಲ್ ಮತ್ತು ಟಿವಿ ಹಕ್ಕುಗಳನ್ನ ಗೆದ್ದುಕೊಂಡಿದೆ. ಈ ಮೂಲಕ 2018ರಲ್ಲಿ 6,138 ಕೋಟಿ ರೂ.ಗೆ ಮಾಧ್ಯಮ ಹಕ್ಕುಗಳನ್ನ ಉಳಿಸಿಕೊಂಡಿದ್ದ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌, ಬಿಸಿಸಿಐ ಜೊತೆಗಿನ ಒಪ್ಪಂದವನ್ನ ಕೊನೆಗೊಳಿಸಿದೆ. ಇದನ್ನೂ ಓದಿ: AsiaCup 2023: ಬಾಬರ್‌, ಇಫ್ತಿಕಾರ್‌ ಶತಕದ ಅಬ್ಬರ – 238 ರನ್‌ಗಳ ಭರ್ಜರಿ ಜಯ, ಪಾಕ್‌ ಶುಭಾರಂಭ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಈ ಕುರಿತಾಗಿ ಗುರುವಾರ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮುಂದಿನ 5 ವರ್ಷಗಳವರೆಗಿನ ಮಾಧ್ಯಮ ಹಕ್ಕುಗಳನ್ನ ಗೆದ್ದಿದ್ದಕ್ಕಾಗಿ ವಯಾಕಾಮ್-18 ಸಂಸ್ಥೆಗೆ ಅಭಿನಂದನೆಗಳು. ಐಪಿಎಲ್ ಮತ್ತು ಡಬ್ಲ್ಯೂಪಿಎಲ್‌ ನಂತರ ಭಾರತ ಕ್ರಿಕೆಟ್ ತಂಡದ ಬೆಳವಣಿಗೆ ಮುಂದುವರಿಯುತ್ತದೆ. ಬಿಸಿಸಿಐ ಮಾಧ್ಯಮ ಹಕ್ಕುಗಳ ಪಾಲುದಾರಿಕೆಯನ್ನು ವಿಸ್ತರಿಸುತ್ತೇವೆ. ನಾವು ಜೊತೆಗೂಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಲ್ಪನೆಯನ್ನು ಸೆರೆಹಿಡಿದಿಟ್ಟುಕೊಳ್ಳುವುದನ್ನು ಮುಂದುವರಿಸುತ್ತೇವೆ ಎಂದು ಶ್ಲಾಘಿಸಿದ್ದಾರೆ.

ಪ್ರತಿ ಪಂದ್ಯಕ್ಕೆ ಬರೋಬ್ಬರಿ 67.8 ಕೋಟಿ ರೂ.
ಸದ್ಯದ ಒಪ್ಪಂದದ ಪ್ರಕಾರ, ವಯಾಕಾಮ್-18 ಸಂಸ್ಥೆಯು ಪ್ರತಿ ಪಂದ್ಯಕ್ಕೆ ಬರೋಬ್ಬರಿ 67.8 ಕೋಟಿ ರೂ.ಗಳನ್ನ ಬಿಸಿಸಿಐಗೆ ನೀಡಬೇಕಾಗುತ್ತದೆ. ಈ ಒಪ್ಪಂದವು 2028ರ ಮಾರ್ಚ್ ತಿಂಗಳವರೆಗೆ ಇರಲಿದೆ. ಒಟ್ಟು 88 ಕ್ರಿಕೆಟ್ ಪಂದ್ಯಗಳನ್ನು ವಯಾಕಾಮ್-18 ಪ್ರಸಾರ ಮಾಡುತ್ತದೆ. ಈ ವರ್ಷದ ಸೆಪ್ಟೆಂಬರ್ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ ವಿರುದ್ಧದ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಈ ಒಪ್ಪಂದವು ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತೀಯರು ಎಲ್ಲಿ ಬೇಕಾದ್ರೂ ಜಯಿಸ್ತಾರೆ ಅನ್ನೋದಕ್ಕೆ ನೀವು ಮಾದರಿ – ಪ್ರಜ್ಞಾನಂದ ಕುಟುಂಬ ಭೇಟಿ ಮಾಡಿದ ಮೋದಿ

ಈ ವರ್ಷಾರಂಭದಲ್ಲಿ 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್ ಪ್ರಸಾರ ಹಕ್ಕನ್ನು ಪಡೆದುಕೊಂಡಿದ್ದ ವಯಾಕಾಮ್‌ ಇದೀಗ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಪಂದ್ಯಗಳ ಪ್ರಸಾರ ಹಕ್ಕುಗಳನ್ನು ತೆಕ್ಕೆಗೆ ತೆಗೆದುಕೊಂಡಿದ್ದು, ಪ್ರಬಲ ಹೆಜ್ಜೆಯನ್ನಿಟ್ಟಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್