ಇಂದು ಶ್ರಾವಣ ಸೂಪರ್ ಮೂನ್ – ಒಂದೇ ತಿಂಗಳಲ್ಲಿ ಎರಡನೇ ಹುಣ್ಣಿಮೆ

Public TV
2 Min Read

ಉಡುಪಿ: ವಿಶೇಷಗಳಲ್ಲಿ ಬಹು ವಿಶೇಷ ಇಂದಿನ ರಾತ್ರಿ. ಕಾರಣ ಬಾನಂಗಳದಲ್ಲಿ ಚಂದ ಮಾಮ ಇನ್ನೂ ಚಂದವಾಗಿ ಕಾಣಿಸ್ತಾನೆ. ಇವತ್ತು ರಾತ್ರಿ ಸೂಪರ್ ಮೂನ್ (Super Moon). ಈ ವರ್ಷದ 4 ಸೂಪರ್‌ ಮೂನ್‌ಗಳಲ್ಲಿ ಆಗಸ್ಟ್ 31 ರ ಸೂಪರ್‌ ಮೂನ್ ಅತ್ಯಂತ ಹೆಚ್ಚಿನ ಮಹತ್ವದ್ದು. ಈ ವರ್ಷದ ನಾಲ್ಕು ಸೂಪರ್‌ ಮೂನ್‌ಗಳು, ಜುಲೈ 3, ಆಗಸ್ಟ್ 1, ಆಗಸ್ಟ್ 31 ಹಾಗೂ ಸೆಪ್ಟೆಂಬರ್‌ 29 ರಂದು ಗೋಚರವಾಗಲಿದೆ. ಜುಲೈ 3 ರಂದು ಚಂದ್ರ ಭೂಮಿಯಿಂದ 3,61,800 ಕಿಮೀ, ಆಗಸ್ಟ್ 1 ರಂದು 3,57,530 ಕಿಮೀ ಹತ್ತಿರ ಬಂದಿದ್ದ.

ಇಂದು (ಆಗಸ್ಟ್ 31) 3,57,344 ಕಿಮೀ ಹಾಗೂ ಸೆಪ್ಟೆಂಬರ್‌ 29 ರಂದು 3,61,552 ಕಿಮೀನಷ್ಟು ದೂರಕ್ಕೆ ಬಂದಿದ್ದಾನೆ. ಶ್ರಾವಣದ ಈ ಹುಣ್ಣಿಮೆಯ ಚಂದ್ರ ‘ಸೂಪರ್‌ ಮೂನ್’ ಆಗಿ ಹೆಚ್ಚಿನ ಪ್ರಭೆಯಿಂದ ಕಂಗೊಳಿಸಲಿದ್ದಾನೆ ಎಂದು ಹಿರಿಯ ಖಗೋಳ ತಜ್ಞ ಉಡುಪಿಯ ಎ.ಪಿ. ಭಟ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Super Blue Moon: ನೀಲಿ ಚಂದಿರನನ್ನು ಕಣ್ತುಂಬಿಕೊಂಡ ಜನ

ಈ ನಾಲ್ಕರಲ್ಲಿ ಇಂದು ಭೂಮಿಗಿ ಹೆಚ್ಚು ಸಮೀಪ ಬರಲಿದೆ. ಈ ಹುಣ್ಣಿಮೆ ಚಂದಿರ ಸುಮಾರು 14 ಅಂಶ ದೊಡ್ಡದಾಗಿ ಕಾಣುತ್ತದೆ. ಅಂತೆಯೇ 25 ಅಂಶ ಮಾಮೂಲಿ ಹುಣ್ಣಿಮೆಗಿಂತ ಹೆಚ್ಚು ಪ್ರಭೆ ಹೊರ ಸೂಸಲಿದ್ದಾನೆ. ಈ ಸಂದರ್ಭದಲ್ಲಿ ಭಾರತದ ಚಂದ್ರಯಾನ-3 ಸಂಪೂರ್ಣ ಯಶಸ್ಸಿನಲ್ಲಿ ಮುಂದುವರಿಯುತ್ತಿದೆ. ರೋವರ್ ಚಂದ್ರನಲ್ಲಿಗೆ ಕಳುಹಿಸಿ, ವಿಕ್ರಮ್ ಲ್ಯಾಂಡರ್ ಇಳಿಸಿ, ಪ್ರಜ್ಞಾನನ ಪುಟ್ಟ ಪುಟ್ಟ ಹೆಜ್ಜೆಗಳ ತಿರುಗಾಟ ಪ್ರಯೋಗಗಳ ಯಶಸ್ಸು ಕಾಣುತ್ತಿದೆ.

ಈ ಸಂತೋಷದ ಸಮಯದಲ್ಲಿ ಹುಣ್ಣಿಮೆ ಹೋಳಿಗೆ ಊಟದೊಂದಿಗೆ ಭಾರತೀಯರಿಗೆ ಸಂಭ್ರಮ ಪಡಲೋಸುಗ ಈ ಸೂಪರ್‌ ಮೂನ್ ಬಂದಿದೆಯೋ ಎನ್ನುವಂತಿದೆ. ಆಗಸ್ಟ್ 31 ರ ಸೂಪರ್‌ ಮೂನ್ ಇನ್ನೂ ಒಂದು ವಿಶೇಷ ತಿಂಗಳೊಂದರಲ್ಲಿ ಎರಡು ಹುಣ್ಣಿಮೆಗಳು. ಅದರಲ್ಲೂ ಇವೆರಡೂ ಸೂಪರ್‌ ಮೂನ್. ಇವೆಲ್ಲವೂ ಭಾರತೀಯರು ಖುಷಿಪಡಲು ಪೂರಕವಾಗಿದೆ ಎಂದು ಎ.ಪಿ‌ ಭಟ್‌ ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Chandrayaan-3: ‘ಸ್ಮೈಲ್ ಪ್ಲೀಸ್’ – ವಿಕ್ರಂನ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್