ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಪತ್ತೆ ಹಚ್ಚಿದ ಚಂದ್ರಯಾನ-3

By
1 Min Read

ನವದೆಹಲಿ: ಚಂದ್ರನ (Moon) ಮೇಲ್ಮೈನಲ್ಲಿ ವೈಜ್ಞಾನಿಕ ಅನ್ವೇಷಣೆ ನಡೆಸುತ್ತಿರುವ ಚಂದ್ರಯಾನ-3 (Chandrayaan-3) ಮಿಷನ್‌, ದಕ್ಷಿಣ ಧ್ರುವದಲ್ಲಿ ಗಂಧಕ (Sulphur) ಇರುವುದನ್ನು ದೃಢಪಡಿಸಿದೆ ಎಂದು ಇಸ್ರೋ (ISRO) ತಿಳಿಸಿದೆ.

ಚಂದ್ರಯಾನ-3 ರ ರೋವರ್ ಪ್ರಗ್ಯಾನ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪಿ (LIBS) ಉಪಕರಣದಿಂದ ಮಾಪನಗಳನ್ನು ಮಾಡಲಾಗಿದೆ. ಅದರಲ್ಲಿ, ಚಂದ್ರನ ಮೇಲ್ಮೈನಲ್ಲಿ ಗಂಧಕ ಇರುವುದು ದೃಢವಾಗಿದೆ.

ಕ್ಯಾಲ್ಸಿಯಂ ಮತ್ತು ಕಬ್ಬಿಣ, ಆಮ್ಲಜನಕ ಇರುವುದು ಸಹ ಪತ್ತೆಯಾಗಿದೆ. ಜಲಜನಕ ಇದೆಯೇ ಎಂಬ ಬಗ್ಗೆ ವೈಜ್ಞಾನಿಕ ಅನ್ವೇಷಣೆ ನಡೆಯುತ್ತಿದೆ. ಚಂದ್ರನ ಮೇಲ್ಮೈನಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಮತ್ತು ಟೈಟಾನಿಯಂ (Ti) ಇರುವಿಕೆಯನ್ನು ದೃಢಪಡಿಸಲಾಗಿದೆ. ಇದನ್ನೂ ಓದಿ: ದ್ರವರೂಪದ ಚಿನ್ನ, ಬಾಹ್ಯಾಕಾಶದಲ್ಲಿ ವಾಸ್ತವ್ಯ, ಮಾನವ ಸಾಹಸಗಳಿಗೆ ಹಾದಿ ಮಾಡಿಕೊಡಲಿದೆ ಚಂದ್ರಯಾನ-3ರ ಯಶಸ್ಸು

ಹೆಚ್ಚಿನ ಮಾಪನಗಳು ಮ್ಯಾಂಗನೀಸ್ (Mn), ಸಿಲಿಕಾನ್ (Si), ಮತ್ತು ಆಮ್ಲಜನಕ (O) ಇರುವಿಕೆಯನ್ನು ಬಹಿರಂಗಪಡಿಸಿವೆ. ಹೈಡ್ರೋಜನ್ ಇರುವಿಕೆಯ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಇಸ್ರೋ ಹೇಳಿಕೆ ತಿಳಿಸಿದೆ.

ಚಂದ್ರನ ಅಂಗಳದಲ್ಲಿ ಅಧ್ಯಯನ ನಡೆಸುತ್ತಿರುವ ಪ್ರಗ್ಯಾನ್‌ ರೋವರ್‌ಗೆ ದೊಡ್ಡದೊಂದು ಕುಳಿ ಎದುರಾಗಿತ್ತು. ಈ ಕುಳಿ ರೋವರ್‌ಗೆ 3 ಮೀಟರ್‌ ದೂರದಲ್ಲಿ ಇತ್ತು. ನಂತರ ಇಸ್ರೋ ರೋವರ್ ಮಾರ್ಗವನ್ನು ಬದಲಾಯಿಸಿತ್ತು. ಇದನ್ನೂ ಓದಿ: ನವೆಂಬರ್ 5 ಕೆ-ಸೆಟ್ ಪರೀಕ್ಷೆ: ಕೆಇಎ

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್