ನಾಗಾರ್ಜುನ ಅಕ್ಕಿನೇನಿ ಜೊತೆ ತೆರೆಹಂಚಿಕೊಳ್ತಿದ್ದಾರೆ ರಶ್ಮಿಕಾ ಮಂದಣ್ಣ

Public TV
1 Min Read

‘ಪುಷ್ಪ’ ಬ್ಯೂಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಮತ್ತೊಂದು ಬಂಪರ್ ಚಾನ್ಸ್ ಸಿಕ್ಕಿದೆ. ತೆಲುಗಿನ ಹೀರೋ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಜೊತೆ ರಶ್ಮಿಕಾ ಮಂದಣ್ಣ ತೆರೆಹಂಚಿಕೊಳ್ತಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

ಇತ್ತೀಚಿಗಷ್ಟೇ ಧನುಷ್ 51ನೇ (D 51) ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ ಎಂದು ಅನೌನ್ಸ್ ಮಾಡಲಾಗಿತ್ತು. ಈಗ ನಾಗಾರ್ಜುನ ಜೊತೆ ನಟಿಸುವ ಅವಕಾಶವನ್ನ ನಟಿ ಬಾಚಿಕೊಂಡಿದ್ದಾರೆ. ಅದೇ ಬೇರೆ ಯಾವುದೋ ಪ್ರಾಜೆಕ್ಟ್ ಅಲ್ಲ, ಬದಲಾಗಿ ಧನುಷ್ (Dhanush) ಚಿತ್ರದಲ್ಲಿ ನಾಗಾರ್ಜುನ ಕೂಡ ಪ್ರಮುಖ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡದಿಂದ ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ:ಇಂದ್ರಜಿತ್ ಲಂಕೇಶ್ ಪುತ್ರನ ಚಿತ್ರಕ್ಕೆ ‘ಗೌರಿ’ ಟೈಟಲ್ ಫೈನಲ್-‌ ಆ.31ಕ್ಕೆ ಮುಹೂರ್ತ ಫಿಕ್ಸ್

ಧನುಷ್, ನಾಗಾರ್ಜುನ ಕಾಂಬೋದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಮೊದಲ ಬಾರಿಗೆ ಈ ಇಬ್ಬರು ಸ್ಟಾರ್‌ಗಳ ಜೊತೆಗೆ ತೆರೆಹಂಚಿಕೊಳ್ತಿದ್ದಾರೆ. ಈ ಚಿತ್ರಕ್ಕೆ ಲವ್‌ ಸ್ಟೋರಿ ಖ್ಯಾತಿಯ ಶೇಖರ್‌ ಕಮ್ಮುಲ ಡೈರೆಕ್ಷನ್‌ ಮಾಡ್ತಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ಸಾಕಷ್ಟು ಕೌತುಕ ಮನೆ ಮಾಡಿದೆ. ಮೂವರ ಕಾಂಬೋ ತೆರೆಯ ಮೇಲೆ ನೋಡಲು ಅಭಿಮಾನಿಗಳು ಎದುರುನೋಡ್ತಿದ್ದಾರೆ.

ಪುಷ್ಪ 2, ಅನಿಮಲ್ (Animal) ಸಿನಿಮಾದ ನಂತರ ಟೈಗರ್ ಶ್ರಾಫ್ ಜೊತೆಗಿನ ಪ್ರಾಜೆಕ್ಟ್, ವಿಕ್ರಮ್- ವಿಜಯ್ ಸೇತುಪತಿ ಜೊತೆ ಹೊಸ ಸಿನಿಮಾ, ಇದೀಗ ಧನುಷ್ ಜೊತೆಗಿನ ಚಿತ್ರ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಖಾತೆಯಲ್ಲಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್