ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ತಾರೆ ಸುದೀಪ್- ಸೆಲೆಬ್ರೇಶನ್‌ಗೆ ಸ್ಥಳ ಫಿಕ್ಸ್

By
1 Min Read

ನೆಚ್ಚಿನ ನಟ-ನಟಿಯರ ಬರ್ತ್‌ಡೇ ಅಂದರೆ ಅಭಿಮಾನಿಗಳ ಪಾಲಿಗೆ ವಿಶೇಷ. ಇದೀಗ ಅಭಿನಯ ಚಕ್ರವರ್ತಿ ಸುದೀಪ್(Kichcha Sudeep) ಹುಟ್ಟುಹಬ್ಬಕ್ಕೆ (Birthday) ಕೌಂಟ್ ಡೌನ್ ಶುರುವಾಗಿದೆ. ಅದಕ್ಕಾಗಿ ತೆರೆಮರೆಯಲ್ಲಿ ಸಿದ್ಧತೆ ಕೂಡ ಶುರುವಾಗಿದೆ. ಇದನ್ನೂ ಓದಿ:ಕಟುಮಸ್ತಾದ ದೇಹ ಪ್ರದರ್ಶಿಸಿದ ಸುದೀಪ್-‌ K 46 ಬಗ್ಗೆ ಕಿಚ್ಚ ಅಪ್‌ಡೇಟ್

ಕಿಚ್ಚ ಸುದೀಪ್ ಅವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಲು ನಿರ್ಧರಿಸಿದ್ದಾರೆ. ಸೆಪ್ಟಂಬರ್ 1ರಂದು ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ರಾತ್ರಿ 10ರಿಂದ 12ರ ತನಕ ಅದ್ಧೂರಿ ಆಚರಣೆ ಪ್ಲ್ಯಾನ್ ಮಾಡಿದ್ದು, ರಾತ್ರಿ 12 ಗಂಟೆಗೆ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಲಿದ್ದಾರೆ. ಈ ದಿನ ಅಭಿಮಾನಿಗಳಿಗೆ ಹಲವು ಸರ್ಪ್ರೈಸ್‌ಗಳು ಕೂಡ ಇವೆ.

ಹುಟ್ಟುಹಬ್ಬದ ದಿನ ಸೆ.2ರಂದು ಜೆಪಿ ನಗರ ಮನೆಯಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ತನಕ ಅಭಿಮಾನಿಗಳನ್ನ ಮೀಟ್ ಮಾಡಲಿದ್ದಾರೆ. ಸುದೀಪ್ ಮನೆ ಬಳಿಯೂ ಅಭಿಮಾನಿಗಳು ಜಮಾಯಿಸಲಿದ್ದಾರೆ.

ಕಿಚ್ಚನ ಬರ್ತ್‌ಡೇ ದಿನ (ಸೆ.2) ಮುಂದಿನ ಸಿನಿಮಾದ ಲುಕ್ ಜೊತೆ ಚಿತ್ರದ ಟೈಟಲ್ ಕೂಡ ರಿವೀಲ್ ಆಗಲಿದೆ. ಈ ಮೂಲಕ ಫ್ಯಾನ್ಸ್‌ಗೆ ಸುದೀಪ್ ಗುಡ್ ನ್ಯೂಸ್ ಕೊಡುತ್ತಿದ್ದಾರೆ.

Share This Article
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್ ಬೋಲ್ಡ್ ಅವತಾರ ತಾಳಿದ ಪ್ರಣೀತಾ ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್