ನನ್ನ ಹೆಂಡತಿಯನ್ನೇ ಸಂಭಾಳಿಸಲಿಕ್ಕೆ ಆಗುತ್ತಿಲ್ಲ- ಫ್ಯಾನ್ಸ್‌ ಎದುರು ಅಳಲು ತೋಡಿಕೊಂಡ ಶಾರುಖ್

Public TV
2 Min Read

ಬಾಲಿವುಡ್ (Bollywood) ಪಠಾಣ್ ಸ್ಟಾರ್ ಶಾರುಖ್ ಖಾನ್ (Sharukh Khan) ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳ ಜೊತೆ ಆಗಾಗ ಪ್ರಶ್ನಾವಳಿ ನಡೆಸುತ್ತಿರುತ್ತಾರೆ. ಇದೀಗ ನನಗೆ ನನ್ನ ಹೆಂಡತಿಯನ್ನೇ ಸಂಭಾಳಿಸಲಿಕ್ಕೆ ಆಗುತ್ತಿಲ್ಲ ಎಂದು ಫ್ಯಾನ್ಸ್ ಎದುರು ಶಾರುಖ್ ವೇದನೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಕಟುಮಸ್ತಾದ ದೇಹ ಪ್ರದರ್ಶಿಸಿದ ಸುದೀಪ್-‌ K 46 ಬಗ್ಗೆ ಕಿಚ್ಚ ಅಪ್‌ಡೇಟ್

ಪಠಾಣ್ (Pathaan) ಸಕ್ಸಸ್ ನಂತರ ಜವಾನ್ (Jawan) ಆಗಿ ದರ್ಶನ ಕೊಡುತ್ತಿರುವ ಶಾರುಖ್‌ಗೆ ತಮ್ಮ ಹೆಂಡತಿಯಿಂದ ಆದ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಹೆಂಡತಿಯ ಕಾರಣದಿಂದ ಸರಿಯಾದ ಸಮಯಕ್ಕೆ ಚಿತ್ರಮಂದಿರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಶಾರುಖ್ ಖಾನ್ ಬಳಿ ಸಮಸ್ಯೆ ಹೇಳಿಕೊಂಡಿದ್ದಾರೆ. ಹೆಂಡತಿ ಜೊತೆ ಜವಾನ್ ಸಿನಿಮಾ ನೋಡಬೇಕು ಅಂತ ಪ್ಲ್ಯಾನ್ ಮಾಡಿದ್ದೇನೆ ಸರ್. ಆದರೆ ಪ್ರತಿ ಬಾರಿ ನನ್ನ ಪತ್ನಿ ಲೇಟ್ ಮಾಡುತ್ತಾಳೆ. ಪಠಾಣ್ ನೋಡಲು ಹೋದಾಗಲೂ ಹೀಗೆಯೇ ಆಗಿತ್ತು. ಬೇಗ ಚಿತ್ರಮಂದಿರವನ್ನು ತಲುಪಲು ಏನಾದರೂ ಟಿಪ್ಸ್ ಕೊಡಿ ಎಂದು ಅಭಿಮಾನಿ ಮನವಿ ಮಾಡಿದ್ದಾರೆ.

ಅಭಿಮಾನಿ ಕೇಳಿದ ಪ್ರಶ್ನೆಗೆ ಶಾರುಖ್ ತಮಾಷೆಯಾಗಿ ಉತ್ತರ ನೀಡಿದ್ದಾರೆ. ದಯವಿಟ್ಟು ಹೆಂಡತಿಗೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸುವಂತಹ ಪ್ರಶ್ನೆಗಳನ್ನು ಇನ್ಮುಂದೆ ಕೇಳಬೇಡಿ. ನನಗೆ ನನ್ನ ಹೆಂಡತಿಯನ್ನೇ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನೀವು ನಿಮ್ಮ ಸಮಸ್ಯೆಯನ್ನೂ ನನ್ನ ಮೇಲೆ ಹಾಕುತ್ತಿದ್ದೀರಿ. ಎಲ್ಲ ಹೆಂಡತಿಯರೇ ಯಾವುದೇ ಚಿಂತೆ ಇಲ್ಲದೇ ಜವಾನ್ ಸಿನಿಮಾ ನೋಡಲು ಹೋಗಿ ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ. ತಮಾಷೆಯಾಗಿ ಅಭಿಮಾನಿಗೆ ಶಾರುಖ್ ಉತ್ತರ ನೀಡಿದ್ದಾರೆ. ಈ ಟ್ವೀಟ್ ಈಗ ಸಖತ್ ವೈರಲ್ ಆಗುತ್ತಿದೆ.

‘ಜವಾನ್'(Jawan) ಸಿನಿಮಾ ಇದೇ ಸೆಪ್ಟೆಂಬರ್ 7ರಂದು ತೆರೆಗೆ ಬರುತ್ತಿದೆ. ಗೌರಿ ಖಾನ್‌ ನಿರ್ಮಾಣದ ಈ ಚಿತ್ರದಲ್ಲಿ ಶಾರುಖ್‌ಗೆ ನಾಯಕಿಯಾಗಿ ನಯನತಾರಾ(Nayanatara) ನಟಿಸಿದ್ದಾರೆ. ಸಿನಿಮಾದಲ್ಲಿ ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ(Deepika Padukone), ಸಾನ್ಯಾ ಮಲ್ಹೋತ್ರಾ ಸೇರಿದಂತೆ ಹಲವರು ನಟಿಸಿದ್ದಾರೆ. ಪಠಾಣ್ ರೀತಿಯೇ ಜವಾನ್ ಸಿನಿಮಾ ಕೂಡ ಗಲ್ಲಾಪೆಟ್ಟಿಗೆ ಶೇಕ್ ಮಾಡುತ್ತಾ ಕಾದುನೋಡಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್