ಪಾಕಿಸ್ತಾನದ ಪತ್ರಿಕೆ, ವೆಬ್‌ಸೈಟ್‌, ಟಿವಿ ಸ್ಕ್ರೀನ್‌ಗಳಲ್ಲಿ ರಾರಾಜಿಸಿದ ಚಂದ್ರಯಾನ-3 ಸಕ್ಸಸ್‌ ಸುದ್ದಿ

Public TV
2 Min Read

ಇಸ್ಲಾಮಾಬಾದ್: ಚಂದ್ರಯಾನ-3 (Chandrayaan-3) ಯಶಸ್ಸಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯನ್ನು ಇಡೀ ವಿಶ್ವವೇ ಅಭಿನಂದಿಸಿದೆ. ಭಾರತದ ಚಂದ್ರಯಾನ-3 ಮಿಷನ್ ಸಕ್ಸಸ್‌ ಸುದ್ದಿಯನ್ನು‌ ಪಾಕಿಸ್ತಾನದ (Pakistan) ಪತ್ರಿಕೆಗಳು, ವೆಬ್‌ಸೈಟ್‌ ಹಾಗೂ ಟಿವಿ ಸ್ಕ್ರೀನ್‌ಗಳಲ್ಲಿ ಭಿತ್ತರಿಸಿ ಪಾಕಿಸ್ತಾನ ಗಮನ ಸೆಳೆದಿದೆ.

ಸಾಂಪ್ರದಾಯಿಕ ಎದುರಾಳಿಗಳೇ ಆಗಿರುವ ಭಾರತ-ಪಾಕಿಸ್ತಾನ (India-Pakistan) ರಾಷ್ಟ್ರಗಳ ನಡುವೆ ಈಗಲೂ ಬಾಂಧವ್ಯ ಹದಗೆಟ್ಟಿದೆ. ಇದರ ನಡುವೆಯೂ ಪಾಕಿಸ್ತಾನದ ಮಾಧ್ಯಮಗಳು, ಭಾರತದ ಐತಿಹಾಸಿಕ ಚಂದ್ರನ ಮೇಲ್ಮೈನಲ್ಲಿ ಚಂದ್ರಯಾನ-3 ಲ್ಯಾಂಡಿಂಗ್‌ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿವೆ. ಇಸ್ರೋದ ಐತಿಹಾಸಿಕ ಸಾಧನೆಗೆ ಮಾಜಿ ಸಚಿವ ಫವಾದ್‌ ಚೌಧರಿ ಅಭಿನಂದನೆ ವ್ಯಕ್ತಪಡಿಸಿದ್ದರು. ಅಲ್ಲದೇ, ಇದು ಮನುಕುಲದ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದರು. ಇದರ ಬೆನ್ನಲ್ಲೇ ಪಾಕಿಸ್ತಾನ ಮಾಧ್ಯಮಗಳು, ಟಿವಿಗಳಲ್ಲಿ ಚಂದ್ರಯಾನ-3 ಲ್ಯಾಂಡಿಂಗ್‌ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ. ಇದನ್ನೂ ಓದಿ: ಸೋಲಾರ್ ಮಿಷನ್ ‘ಆದಿತ್ಯ’ ಸೆಪ್ಟೆಂಬರ್‌ನಲ್ಲಿ ಲಾಂಚ್‍ಗೆ ಸಿದ್ಧ: ಇಸ್ರೋ ಅಧ್ಯಕ್ಷ

ಪಾಕಿಸ್ತಾನದ ಹೆಚ್ಚಿನ ಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳಲ್ಲಿ ‘ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ್ರ’ ಎಂಬ ಶೀರ್ಷಿಕೆ ಕೊಟ್ಟು ಅಭಿನಂದಿಸಿವೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪ್ರಾರಂಭವಾದ 40 ದಿನಗಳ ಪ್ರಯಾಣದ ನಂತರ ಭಾರತದ ಚಂದ್ರಯಾನ -3 ಅಂತಿಮವಾಗಿ ಚಂದ್ರನ ಮೇಲೆ ಇಳಿಯಿತು ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ತನ್ನ ವೆಬ್ ಡೆಸ್ಕ್ ಮೂಲಕ ಲ್ಯಾಂಡಿಂಗ್ ಕುರಿತು ಸುದ್ದಿಯನ್ನು ಪ್ರಕಟಿಸಿದೆ.

ನ್ಯೂಸ್ ಇಂಟರ್‌ನ್ಯಾಶನಲ್, ಡಾನ್ ಪತ್ರಿಕೆ, ಬಿಸಿನೆಸ್ ರೆಕಾರ್ಡರ್, ದುನ್ಯಾ ನ್ಯೂಸ್ ಮತ್ತು ಇತರರು ವಿವಿಧ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳಿಂದ ಚಂದ್ರಯಾನ-3 ಸಂಬಂಧಿತ ಸುದ್ದಿಗಳು ಪ್ರಕಟಗೊಂಡಿವೆ. ಇದನ್ನೂ ಓದಿ: ಚಂದ್ರನ ಮೇಲೆ ನಡೆದಾಡಿದ ಪ್ರಗ್ಯಾನ್‌ ರೋವರ್‌ – ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬರಲು ತಡವಾಗಿದ್ಯಾಕೆ?

ಭಾರತದಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ 2019 ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಭಾರತದ ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆಸಿದವು. ಅಲ್ಲಿಂದೀಚೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಹದಗೆಟ್ಟಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್