ಚಂದ್ರನ ಮೇಲೆ ನಡೆದಾಡಿದ ಪ್ರಗ್ಯಾನ್‌ ರೋವರ್‌ – ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬರಲು ತಡವಾಗಿದ್ಯಾಕೆ?

Public TV
2 Min Read

ನವದೆಹಲಿ: ಚಂದ್ರನ (Moon) ಅಂಗಳದಲ್ಲಿ ಇಸ್ರೋದ ಚಂದ್ರಯಾನ-3 (Chandrayaan-3) ಯಶಸ್ವಿ ಲ್ಯಾಂಡಿಂಗ್‌ ಬಳಿಕ ಹಲವು ಗಂಟೆಗಳ ನಂತರ ವಿಕ್ರಮ್‌ ಲ್ಯಾಂಡರ್‌ನಿಂದ (Vikram Lander) ರೋವರ್‌ (Pragyan Rover) ಹೊರಬಂದಿದ್ದು, ಚಂದ್ರನ ಮೇಲೆ ವೈಜ್ಞಾನಿಕ ಅಧ್ಯಯನ ಆರಂಭಿಸಿದೆ.

ಈ ಕುರಿತು ಸುಮಾರು 8:26ರ ಹೊತ್ತಿಗೆ ಇಸ್ರೋ (ISRO) ಟ್ವಿಟ್ಟರ್‌ ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಚಂದ್ರಯಾನ-3 ರೋವರ್‌: ಭಾರತದಲ್ಲಿ ತಯಾರಿಸಲಾಗಿದೆ, ಚಂದ್ರನಿಗಾಗಿ ಮಾಡಲ್ಪಟ್ಟಿದೆ. ಚಂದ್ರಯಾನ-3 ರೋವರ್ ಲ್ಯಾಂಡರ್‌ನಿಂದ ಕೆಳಗೆ ಇಳಿಯಿತು. ಚಂದ್ರನ ಮೇಲೆ ಭಾರತ ನಡೆದಾಡಿತು. ಶೀಘ್ರವೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಇಸ್ರೋ ತಿಳಿಸಿದೆ. ಇದನ್ನೂ ಓದಿ: ಈಗ ಕರ್ನಾಟಕಕ್ಕೂ ಚಂದ್ರನಿಗೂ ನೇರ ಸಂಪರ್ಕ

ಯಶಸ್ವಿ ಲ್ಯಾಂಡಿಂಗ್‌ ಬಳಿಕ ಮುಂದಿನ ಹಂತ ಪ್ರಗ್ಯಾನ್‌ ರೋವರ್‌ ಚಂದ್ರನ ಮೇಲ್ಮೈನಲ್ಲಿ ಅಧ್ಯಯನ ನಡೆಸಲಿದೆ. ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿದು ಧೂಳೆಬ್ಬಿಸಿದೆ. ಇದೇ ಕಾರಣಕ್ಕೆ ಪ್ರಗ್ಯಾನ್‌ ರೋವರ್‌ ಕೆಲ ಗಂಟೆಗಳು ಕಾದು ಹೊರಬಂದಿದೆ ಎನ್ನಲಾಗಿದೆ.

ಪ್ರಗ್ಯಾನ್‌ ರೋವರ್‌ ತಡವಾಗಿ ಹೊರಬರಲು ಕಾರಣವೇನು?
ಸುಮಾರು 1,749.8 ಕೆಜಿ ತೂಕದ ಲ್ಯಾಂಡರ್‌ ಬಂದು ಚಂದ್ರನ ಮೇಲೆ ಹೆಜ್ಜೆ ಇಟ್ಟಾಗ ಅದರ ಸುತ್ತಲೂ ಧೂಳು ಆವರಿಸಿತು. ಅಲ್ಲಿನ ದುರ್ಬಲ ಗುರುತ್ವಾಕರ್ಷಣೆ ಶಕ್ತಿಯ ಕಾರಣದಿಂದ ಆ ದಟ್ಟವಾಗಿರುವ ಧೂಳು ತಕ್ಷಣಕ್ಕೆ ಕಡಿಮೆ ಆಗುವುದು ಕಷ್ಟ. ಈ ವೇಳೆ ರೋವರ್‌ ಹೊರ ಬಂದರೆ, ಆ ಧೂಳಿನ ಕಣಗಳು ರೋವರ್‌ನಲ್ಲಿರುವ ಸೆನ್ಸರ್‌ಗಳು, ಕ್ಯಾಮೆರಾಗಳ ಮೇಲೆ ಕುಳಿತುಕೊಳ್ಳುತ್ತದೆ. ಹೀಗಾಗಿ ಸ್ವಲ್ಪ ಸಮಯ ಕಾದು ನಂತರ ರೋವರ್‌ ಹೊರಬಂದಿದೆ. ಇದನ್ನೂ ಓದಿ: ಚಂದ್ರನ ಮೇಲೆ ಭಾರತದ ಮುದ್ರೆ – ಚಂದ್ರಯಾನ 3 ಸಕ್ಸಸ್ ಮುಂದೇನು?

ವಿಕ್ರಮ್‌ ಲ್ಯಾಂಡರ್‌ ಹೊಟ್ಟೆಯಿಂದ ಹೊರಬಂದ ಪ್ರಗ್ಯಾನ್‌ ರೋವರ್‌ ರ‍್ಯಾಂಪ್‌ ಮೂಲಕ ನಿಧಾನವಾಗಿ ಕೆಳಗಿಳಿದು ಚಂದ್ರನನ್ನು ಸ್ಪರ್ಶಿಸಿದೆ. ಪ್ರಗ್ಯಾನ್‌ ತನ್ನ ಸೋಲಾರ್‌ ಪ್ಯಾನೆಲ್‌ ತೆರೆದುಕೊಂಡು ಚಂದ್ರನ ಮೇಲ್ಮೈನಲ್ಲಿ ತನ್ನ ವೈಜ್ಞಾನಿಕ ಅಧ್ಯಯನ ಆರಂಭಿಸಿದೆ.

ಆರು ಚಕ್ರಗಳ ರೋಬೋಟಿಕ್ ವಾಹನ ಪ್ರಗ್ಯಾನ್ ರೋವರ್‌ 26 ಕೆಜಿ ತೂಕವಿದೆ. ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಗ್ಯಾನ್‌ ರೋವರ್‌ ಎರಡೂ ಸೇರಿ 1,752 ಕೆಜಿ ತೂಕವಿದೆ. ಪ್ರಗ್ಯಾನ್‌ ರೋವರ್‌ ಒಂದು ಚಂದ್ರನ ದಿನ (ಭೂಮಿಯ 14 ದಿನ) ಚಂದ್ರನ ಮೇಲೆ ವೈಜ್ಞಾನಿಕ ಅಧ್ಯಯನ ನಡೆಸಲಿದೆ. ಇದನ್ನೂ ಓದಿ: ಚಂದ್ರಯಾನ- 3 ಯಶಸ್ಸಿನ ರೂವಾರಿಗಳು ಇವರೇ..

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್