ಪುಟಿನ್‌ ವಿರುದ್ಧ ಬಂಡಾಯವೆದ್ದಿದ್ದ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ದುರ್ಮರಣ

Public TV
1 Min Read

ಮಾಸ್ಕೋ: ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಬಂಡಾಯ ಎದ್ದಿದ್ದ ಖಾಸಗಿ ಭದ್ರತಾ ಕಂಪನಿ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ.

ಬ್ಯುಸಿನೆಸ್​ ಜೆಟ್ ವಿಮಾನವು ಮಾಸ್ಕೋದ ವಾಯುವ್ಯಕ್ಕೆ ಪತನಗೊಂಡಿದೆ. ಪರಿಣಾಮ ವಿಮಾನದಲ್ಲಿದ್ದ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ TASS ತಿಳಿಸಿದೆ. ಇದನ್ನೂ ಓದಿ: ಯುವ ಕನಸುಗಾರರ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ- ಚಂದ್ರಯಾನ ಯಶಸ್ಸಿಗೆ ರಾಗಾ ಶ್ಲಾಘನೆ

ಹಿಂದೊಮ್ಮೆ ರಷ್ಯಾದ ಅಧ್ಯಕ್ಷ ವ್ಲಾಡಿಮರ್ ಪುಟಿನ್​ಗೆ ಆಪ್ತರಾಗಿದ್ದ 62 ವರ್ಷದ ಅರೆಸೈನಿಕ ನಾಯಕ ಪ್ರಿಗೊಜಿನ್, ತಮ್ಮ ದೇಶದ ಉನ್ನತ ಅಧಿಕಾರಿಗಳನ್ನು ಟೀಕಿಸುತ್ತಾ ಕೊನೆಗೆ ಜೂನ್ ಅಂತ್ಯದಲ್ಲಿ ರಷ್ಯಾ ಸರ್ಕಾರದ ವಿರುದ್ಧ ಅಲ್ಪಾವಧಿಯ ದಂಗೆ ನಡೆಸಿದ್ದರು. ನಿರ್ದಿಷ್ಟವಾಗಿ ಹಿಂಸಾತ್ಮಕ ಯುದ್ಧಭೂಮಿ ತಂತ್ರಗಳಿಗೆ ಹೆಸರುವಾಸಿಯಾದ ಆತನ ಪಡೆಗಳು ಉಕ್ರೇನಿಯನ್ ಫ್ರಂಟ್​ನಲ್ಲಿ ರಷ್ಯಾಕ್ಕಾಗಿ ಹಲವಾರು ಯುದ್ಧಗಳನ್ನು ಮುನ್ನಡೆಸಿದ್ದವು.

ದಂಗೆ ಸ್ಥಗಿತಗೊಂಡ ಬಳಿಕ ಪ್ರಿಗೋಜಿನ್​ ಮತ್ತು ಪುಟಿನ್ ನಡುವೆ ಸ್ಪಷ್ಟ ಒಪ್ಪಂದ ನಡೆದಿದ್ದು, ಪ್ರಿಗೋಜಿನ್​​ ಮತ್ತು ಅವರ ಪಡೆಗಳು ಬೆಲಾರಸ್‌ಗೆ ಸ್ಥಳಾಂತರಗೊಳ್ಳುವ ಉದ್ದೇಶದಿಂದ ಎನ್ನಲಾಗಿತ್ತು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್