ಇದು ನವಭಾರತದ ಉದಯ: ಇಸ್ರೋದ ಚಂದ್ರಯಾನ-3 ಯಶಸ್ಸಿಗೆ ಪ್ರಧಾನಿ ಮೋದಿ ಶುಭಾಶಯ

By
1 Min Read

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ISRO) ಮಹತ್ವದ ಚಂದ್ರಯಾನ-3 (Chandrayaan-3) ಸಕ್ಸಸ್‌ ಆಗಿದೆ. ಚಂದ್ರನ ದಕ್ಷಿಣ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್‌ ಯಶಸ್ವಿಯಾಗಿ ಕಾಲಿಟ್ಟಿದೆ. ಇಸ್ರೋದ ಐತಿಹಾಸಿದ ಸಾಧನೆಗೆ ಪ್ರಧಾನಿ ಮೋದಿ (Narendra Modi) ಅವರು ದಕ್ಷಿಣ ಆಫ್ರಿಕಾದಿಂದಲೇ ಶುಭಾಶಯ ತಿಳಿಸಿದರು.

ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್‌ ಆಗುತ್ತಿದ್ದಂತೆಯೇ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಪ್ರಧಾನಿ ಮೋದಿ ಸಂಭ್ರಮ ಹಂಚಿಕೊಂಡರು. ಇದನ್ನೂ ಓದಿ: Chandrayaan-3 ಮಿಷನ್‌ ಸಕ್ಸಸ್‌: ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಕಾಲಿಟ್ಟ ವಿಕ್ರಮ್‌ ಲ್ಯಾಂಡರ್‌

ಈ ವೇಳೆ ಮಾತನಾಡಿದ ಪ್ರಧಾನಿ, ನಾನು ದಕ್ಷಿಣ ಆಫ್ರಿಕಾದಲ್ಲಿದ್ದೇನೆ. ಆದರೆ ನನ್ನ ಮನಸ್ಸು ಚಂದ್ರಯಾನ ಮೇಲಿತ್ತು. ಚಂದ್ರಯಾನ ಯಶಸ್ವಿ ಜನರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ನಾನು ನಮ್ಮ ಜನರ ಖುಷಿಯ ಸಮಯದಲ್ಲಿ ಭಾಗಿಯಾಗಿದ್ದೇನೆ. ನಾನು ಇಸ್ರೋ ಮತ್ತು ದೇಶದ ವಿಜ್ಞಾನಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ಚಂದ್ರನ ದಕ್ಷಿಣ ಭಾಗಕ್ಕೆ ಭಾರತ ಮಾತ್ರ ಹೋಗಿದೆ. ಈವರೆಗೂ ಯಾವ ದೇಶವೂ ಆ ಭಾಗಕ್ಕೆ ತೆರಳಿಲ್ಲ. ಇನ್ಮುಂದೆ ಚಂದ್ರನ ಕಥೆಗಳು ಬದಲಾಗಲಿವೆ. ಈ‌ ದಿನವನ್ನು ದೇಶ ಸದಾ ನೆನಪಿನಲ್ಲಿ ಇಡುತ್ತದೆ. ಹೊಸ ಸಂಕಲ್ಪ ಈಡೇರಿಸುವ ಶುಭ ದಿನವಾಗಿದೆ. ಭವಿಷ್ಯದ ಮಿಷನ್‌ಗಾಗಿ ಶುಭ ಹಾರೈಕೆಗಳು ಎಂದರು. ಇದನ್ನೂ ಓದಿ: ಚಂದ್ರನ ಮಣ್ಣಿಗೆ ಹೋಲಿಕೆಯಾಗುತ್ತಂತೆ ತಮಿಳುನಾಡಿನ ಮಣ್ಣು – ಚಂದ್ರಯಾನ-3ಗೂ ಇದೆ ಈ ಮಣ್ಣಿನ ಕೊಡುಗೆ; ಏನಿದರ ವಿಶೇಷತೆ?

ಇಂತಹ ಐತಿಹಾಸಿಕ ಕ್ಷಣಗಳನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಈ ಹಿಂದೆ ಯಾವುದೇ ದೇಶವು ಅಲ್ಲಿಗೆ (ಚಂದ್ರನ ದಕ್ಷಿಣ ಧ್ರುವ) ತಲುಪಿಲ್ಲ. ನಮ್ಮ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ನಾವು ಅಲ್ಲಿಗೆ ತಲುಪಿದ್ದೇವೆ ಎಂದು ಖುಷಿ ಹಂಚಿಕೊಂಡರು.

ಭಾರತದ ಯಶಸ್ವಿ ಚಂದ್ರಯಾನ ಕೇವಲ ಭಾರತಕ್ಕಷ್ಟೇ ಅಲ್ಲ. ಈ ಯಶಸ್ಸು ಎಲ್ಲಾ ಮಾನವೀಯತೆಗೂ ಸೇರಿದೆ ಎಂದು ತಿಳಿಸಿದರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್