ಪಿಂಕ್ ಬಣ್ಣದ ಸೀರೆಯುಟ್ಟು ಮಿಂಚಿದ ಮದುಮಗಳು ಹರ್ಷಿಕಾ

By
1 Min Read

ಸ್ಯಾಂಡಲ್‌ವುಡ್ (Sandalwood) ಚಿಟ್ಟೆ ಹರ್ಷಿಕಾ ಪೂಣಚ್ಚ(Harshika Ponacha)- ಭುವನ್ (Bhuvan) ಆಗಸ್ಟ್‌ 24ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆ ಹಿಂದಿನ ದಿನದ (ಆಗಸ್ಟ್‌ 23) ಊರ್ಕುಡುವ ಶಾಸ್ತ್ರದಲ್ಲಿ ಮದುಮಗಳು ಹರ್ಷಿಕಾ ಮಿಂಚಿದ್ದಾರೆ.

12 ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ಸಜ್ಜಾಗಿದ್ದಾರೆ. ಕೊಡಗಿನ (Coorg) ವಿರಾಜ್‌ಪೇಟೆಯಲ್ಲಿ ಊರ್ಕುಡುವ ಶಾಸ್ತ್ರವಿದೆ. ನವ ಜೋಡಿಯ ಜೊತೆ ಕೊಡವ ಶೈಲಿಯಲ್ಲಿ ಅದ್ದೂರಿ ಡ್ಯಾನ್ಸ್ ಕೂಡ ಇರಲಿದೆ. ಇದೀಗ ಈ ಶಾಸ್ತ್ರಕ್ಕೆ ನಟಿ ಹರ್ಷಿಕಾ ಪಿಂಕ್ ಕಲರ್ ಸೀರೆಯುಟ್ಟು ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಚಂದ್ರಯಾನ-3 ಲ್ಯಾಂಡಿಂಗ್‌ಗೆ ಶುಭಕೋರಿದ ಸ್ಯಾಂಡಲ್‌ವುಡ್ ಸ್ಟಾರ್ಸ್

ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ರಂತೆ. ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.

ಕೊಡವ ಸಂಪ್ರದಾಯದಂತೆ ಹರ್ಷಿಕಾ-ಭುವನ್ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ. ಆಗಸ್ಟ್ 23- 24ರಂದು ಕೊಡಗಿನ ವಿರಾಜ್‌ಪೇಟೆಯಲ್ಲಿ ಹರ್ಷಿಕಾ-ಭುವನ್ ಅದ್ದೂರಿ ಮದುವೆ ನಡೆಯಲಿದೆ. ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ನಡೆಯಲಿದೆ. ರಾಜಕೀಯ- ಚಿತ್ರರಂಗದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್