ತಮಿಳಿನ ‘ಜಂಟಲ್‌ಮ್ಯಾನ್ 2’ನಲ್ಲಿ ಸುಧಾರಾಣಿ

By
1 Min Read

ಚಿತ್ರರಂಗದ ಎವರ್‌ಗ್ರೀನ್ ಬ್ಯೂಟಿ ಸುಧಾರಾಣಿ (Sudharani) ಅವರು ತಮಿಳಿನತ್ತ (Kollywood) ಮುಖ ಮಾಡಿದ್ದಾರೆ. ಕಾಲಿವುಡ್ ಪ್ರತಿಭೆ ಚೇತನ್ ಚೀನು ನಟನೆಯ ಹೊಸ ಸಿನಿಮಾದಲ್ಲಿ ಸುಧಾರಾಣಿ ಪ್ರಮುಖ ಪಾತ್ರವೊಂದನ್ನ ಪ್ಲೈ ಮಾಡ್ತಿದ್ದಾರೆ. ತಮಿಳಿನ ‘ಜಂಟಲ್‌ಮ್ಯಾನ್ 2’ ನಟಿಸಲು ಸುಧಾರಾಣಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.

‘ಜಂಟಲ್‌ಮ್ಯಾನ್’ ಅಂದಾಕ್ಷಣ ನೆನಪಾಗೋದು ಅರ್ಜುನ್ ಸರ್ಜಾ ಅವರ ಸಿನಿಮಾ. ಕಾಲಿವುಡ್‌ನಲ್ಲಿ ಜಂಟಲ್‌ಮ್ಯಾನ್ ಸಿನಿಮಾ ಹೊಸ ಅಲೆ ಎಬ್ಬಿಸಿತ್ತು. ಆದರೆ ಈಗ ಇದೇ ಟೈಟಲ್‌ನಲ್ಲಿ 2ನೇ ಪಾರ್ಟ್ ಮಾಡುವ ಬಗ್ಗೆ ಚಿತ್ರತಂಡ ಅನೌನ್ಸ್ ಮಾಡಿದೆ. ಹೊಸ ಕಥೆ, ಹೊಸ ಚಿತ್ರತಂಡದ ಜೊತೆ ಜಂಟಲ್‌ಮ್ಯಾನ್ ಪಾರ್ಟ್ 2 ಬರುತ್ತಿದೆ. ಇದನ್ನೂ ಓದಿ:ನ್ಯೂಯಾರ್ಕ್‌ನ 41ನೇ ಇಂಡಿಯಾ ಡೇ ಪರೇಡ್‌ನಲ್ಲಿ ಭಾಗಿಯಾದ ಸಮಂತಾ

ಚೇತನ್ ಚೀನು ನಾಯಕನಾಗಿ ನಟಿಸಲಿರುವ ಚಿತ್ರಕ್ಕೆ ನಯನತಾರಾ ಚಕ್ರವರ್ತಿ, ಪ್ರಿಯಾ ಲಾಲ್ ಹೀರೋಯಿನ್ ಆಗಿದ್ದಾರೆ. ಕನ್ನಡದ ನಟಿ ಸುಧಾರಾಣಿ (Sudharani) ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ. ನಟಿ ಸಿತಾರಾ (Sitara), ಸುಮನ್ ಹಾಗೂ ಸತ್ಯಪ್ರಿಯಾ ಅವರೂ ಅಭಿನಯಿಸಿದ್ದಾರೆ. ಮೊನ್ನೆ ಚೆನ್ನೈನಲ್ಲಿ ಚಿತ್ರದ ಮುಹೂರ್ತ ಆಗಿದೆ. ನಿರ್ಮಾಪಕ ಕೆ.ಟಿ.ಕುಂಜುಮೋನ್ ಈ ಚಿತ್ರವನ್ನ ದೊಡ್ಡಮಟ್ಟದಲ್ಲಿಯೇ ತಯಾರಿಸುತ್ತಿದ್ದಾರೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜಂಟಲ್‌ಮ್ಯಾನ್-2 (Gentlemen 2) ಚಿತ್ರ ಬರಲಿದೆ. ಬಹು ಭಾಷೆಯಲ್ಲಿ ಬರುತ್ತಿರುವ ಈ ಚಿತ್ರವನ್ನ ಗೋಕುಲ್ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಎಂ.ಎಂ.ಕೀರವಾಣಿ ಅವರ ಸಂಗೀತದಲ್ಲಿ ಸಿನಿಮಾ ಮೂಡಿ ಬರಲಿದೆ. ಅಜಯನ್ ವಿನ್ಸೆಂಟ್ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ತೋಟ ತಾರಿಣಿ ಅವರ ಕಲಾ ನಿರ್ದೇಶನ ಮಾಡುತ್ತಿದ್ದಾರೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್