ನ್ಯೂಯಾರ್ಕ್‌ನ 41ನೇ ಇಂಡಿಯಾ ಡೇ ಪರೇಡ್‌ನಲ್ಲಿ ಭಾಗಿಯಾದ ಸಮಂತಾ

Public TV
1 Min Read

ವಿಶ್ವದ ಅತಿ ದೊಡ್ಡ ‘ಇಂಡಿಯಾ ಡೇ ಪರೇಡ್’ (India Day Parade) ಭಾನುವಾರ ಮಧ್ಯಾಹ್ನ (ಆಗಸ್ಟ್ 20) ಸಮಾರಂಭ ನ್ಯೂಯಾರ್ಕ್‌ನಲ್ಲಿ ನಡೆಯಿತು. ಭಾರತೀಯ- ಅಮೆರಿಕನ್ ಸಮುದಾಯದ ಸದಸ್ಯರು ಭಾಗಿಯಾಗಿದ್ದರು. ಇಂಡಿಯಾ ಡೇ ಪರೇಡ್‌ನಲ್ಲಿ ಸೌತ್‌ ನಟಿ ಸಮಂತಾ(Samantha), ಶ್ರೀ ಶ್ರೀ ರವಿಶಂಕರ್ ಗುರೂಜಿ, ಜಾಕ್ವೆಲಿನ್ (Jacqueline) ಕೂಡ ಭಾಗವಹಿಸಿದ್ದರು. ಇದನ್ನೂ ಓದಿ:ಚಂದ್ರಯಾನ ಬಗ್ಗೆ ಪ್ರಕಾಶ್ ರೈ ವ್ಯಂಗ್ಯ: ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ನ್ಯೂಯಾರ್ಕ್‌ 41ನೇ ಇಂಡಿಯಾ ಡೇ ಪರೇಡ್‌ನಲ್ಲಿ ಸಮಂತಾ ಭಾಗಿಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಮೆರವಣಿಗೆಯಲ್ಲಿ ಮಾತನಾಡಿದ ಸಮಂತಾ, ಇಂದು ನಾನು ಇಲ್ಲಿರುವುದು ನಿಜವಾಗಿಯೂ ನನಗೆ ಗೌರವವಿದೆ. ನನ್ನ ಸಂಸ್ಕೃತಿ ಮತ್ತು ಪರಂಪರೆ ಎಷ್ಟು ಶ್ರೀಮಂತವಾಗಿದೆ ಎಂದು ಇಲ್ಲಿ ನಾನು ನೋಡಿರುವುದು ನನ್ನ ಜೀವಿತಾವಧಿಯಲ್ಲಿ ಉಳಿಯುತ್ತದೆ ಎಂದು ಮಾತನಾಡಿದರು.

ಸಮಂತಾ ಪಾಲಿಗೆ ನ್ಯೂಯಾರ್ಕ್ (Newyork) ಎಷ್ಟು ಸ್ಪೆಷಲ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಮೊದಲ ಸಿನಿಮಾ ‘ಯೇ ಮಾಯಾ ಚೇಸಾವೆ’ (Ye Maya Cheysave) ಸಿನಿಮಾಗಾಗಿ ನ್ಯೂಯಾರ್ಕ್‌ಗೆ ಬಂದಿದ್ದರ ಬಗ್ಗೆ ನಟಿ ಮೆಲುಕು ಹಾಕಿದ್ದಾರೆ. ಚಿತ್ರದ ಮೊದಲ ಶಾಟ್‌ ಕೂಡ ಇಲ್ಲಿಯೇ ಚಿತ್ರೀಕರಿಸಿರೋದಾಗಿ ಹಂಚಿಕೊಂಡಿದ್ದಾರೆ. 14 ವರ್ಷಗಳ ನಂತರ ಮತ್ತೆ ನ್ಯೂಯಾರ್ಕ್‌ಗೆ ಬಂದಿರೋದಾಗಿ ಸಮಂತಾ ಹೇಳಿದ್ದಾರೆ.

ಕಲರ್‌ಫುಲ್ ಡ್ರೆಸ್ ಧರಿಸಿ ನ್ಯೂಯಾರ್ಕ್‌ನಲ್ಲಿ ಕಂಗೊಳಿಸಿದ್ದಾರೆ. ಈ ಕುರಿತ ಚೆಂದದ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ. ಸಮಂತಾ ಇಷ್ಟು ಪಾಸಿಟಿವ್ ಆಗಿ ಮುಂದುವರೆಯೋದನ್ನ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್