ಮೊದಲ ಓವರ್‌ನಲ್ಲೇ 2 ವಿಕೆಟ್‌ ಉಡೀಸ್‌ – 11 ತಿಂಗಳ ಬಳಿಕ ಎಂಟ್ರಿ ಕೊಟ್ಟು ​ಭಾರತಕ್ಕೆ ಜಯ ತಂದ ಬುಮ್ರಾ

Public TV
2 Min Read

ಡಬ್ಲಿನ್‌: ಬರೋಬ್ಬರಿ 11 ತಿಂಗಳ ಬಳಿಕ ಟೀಂ ಇಂಡಿಯಾಕ್ಕೆ ಉತ್ತಮ ಕಂಬ್ಯಾಕ್‌ ಮಾಡಿರುವ ಸ್ಟಾರ್‌ ವೇಗಿ ಜಸ್ಪ್ರೀತ್‌ ಬುಮ್ರಾ (Jasprit Bumrah) ಐರ್ಲೆಂಡ್‌ ವಿರುದ್ಧ ನಾಯಕನಾಗಿ ಕಣಕ್ಕಿಳಿದು ಟೀಂ ಇಂಡಿಯಾಕ್ಕೆ (Team India) ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಮೊದಲ ಓವರ್‌ನ 4 ಎಸೆತಗಳಲ್ಲೇ 2 ವಿಕೆಟ್‌ ಪಡೆಯುವ ಮೂಲಕ ಮತ್ತೆ ಫಾರ್ಮ್‌ ಸಾಬೀತುಪಡಿಸಿದ್ದಾರೆ.

ಐರ್ಲೆಂಡ್‌ (Ireland) ವಿರುದ್ಧ ಆರಂಭಗೊಂಡಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯದಲ್ಲೇ 2 ರನ್‌ಗಳ ರೋಚಕ ಜಯ ಸಾಧಿಸಿದೆ. ಮಲಾಹೈಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಐರ್ಲೆಂಡ್‌ 7 ವಿಕೆಟ್‌ ನಷ್ಟಕ್ಕೆ 139 ರನ್‌ ಕಲೆಹಾಕಿತ್ತು. 140 ರನ್‌ಗಳ ಗುರಿ ಪಡೆದ ಟೀಂ ಇಂಡಿಯಾ 6.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 47 ರನ್‌ ಗಳಿಸಿತ್ತು. ಈ ನಡುವೆ ಮಳೆ ಅಡ್ಡಿಯಾಗಿದ್ದರಿಂದ ಡಕ್ವರ್ತ್‌ ಲೂಯಿಸ್‌ ನಿಯಮ ಅನ್ವಯಿಸಲಾಯಿತು. ಇದರಿಂದ ಭಾರತ 2 ರನ್‌ಗಳ ರೋಚಕ ಜಯ ಸಾಧಿಸಿತು.

ಟಾಸ್‌ ಸೋತು ಕ್ರೀಸ್‌ಗಿಳಿದ ಐರ್ಲೆಂಡ್‌, ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿತು. ಪವರ್‌ ಪ್ಲೇ ಮುಗಿಯುವ ವೇಳೆಗೆ 30 ರನ್‌ ಗಳಿಗೆ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ ಕೊನೆಯಲ್ಲಿ ಆಲ್‌ರೌಂಡರ್‌ ಬ್ಯಾರಿ ಜಾನ್ ಮೆಕಾರ್ಥಿ (Barry John McCarthy) 33 ಎಸೆತಗಳಲ್ಲಿ ಅಜೇಯ 51 ರನ್‌ (4 ಬೌಂಡರಿ, 4 ಸಿಕ್ಸರ್‌) ಹಾಗೂ ಕರ್ಟಿಸ್ ಕ್ಯಾಂಫರ್ 33 ಎಸೆತಗಳಲ್ಲಿ 33 ರನ್‌ ಗಳಿಸುವ ಮೂಲಕ ತಂಡದ ಮೊತ್ತವನ್ನು 130ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಪರಿಣಾಮ ಐರ್ಲೆಂಡ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 139 ರನ್‌ ಗಳಿಸಿತ್ತು. ಇದನ್ನೂಓದಿ: ಇಂದಿನಿಂದ IND vs IRE ಟಿ20 ಸರಣಿ ಆರಂಭ – 11 ತಿಂಗಳ ಬಳಿಕ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ ಬುಮ್ರಾ

ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ನಾಯಕ ಬುಮ್ರಾ 4 ಓವರ್‌ಗಳಲ್ಲಿ 24 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಪಡೆದರೆ, ಪ್ರಸಿದ್ಧ್‌ ಕೃಷ್ಣ 4 ಓವರ್‌ಗಳಲ್ಲಿ 2 ವಿಕೆಟ್‌ ಪಡೆದು ಫಾರ್ಮ್‌ ಸಾಬೀತು ಮಾಡಿದರು. ಇದರೊಂದಿಗೆ ರವಿ ಬಿಷ್ಣೋಯಿ 2 ವಿಕೆಟ್‌ ಹಾಗೂ ಅರ್ಷ್‌ದೀಪ್‌ ಸಿಂಗ್‌ 1 ವಿಕೆಟ್‌ ಪಡೆದರು. ಇದನ್ನೂಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ವಿರಾಟ್‌ – ಕಿಂಗ್‌ ಆದ ಕೊಹ್ಲಿಯ ರೋಚಕ ಜರ್ನಿ

140 ರನ್‌ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್‌ (Yashasvi Jaiswal) 23 ಎಸೆತಗಳಲ್ಲಿ 24 ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೇ ತಿಲಕ್‌ ವರ್ಮಾ ಕೋಡ ಸುಲಭ ಕ್ಯಾಚ್‌ಗೆ ತುತ್ತಾದರು. ಆರಂಭಿಕ ಋತುರಾಜ್‌ ಗಾಯಕ್ವಾಡ್‌ 19 ರನ್‌ ಹಾಗೂ ಸಂಜು ಸ್ಯಾಮ್ಸನ್‌ 1 ರನ್‌ ಗಳಿಸಿ ಕ್ರೀಸ್‌ನಲ್ಲಿದರು. ಈ ವೇಳೆ ಮಳೆ ಅಡ್ಡಿಯಾಯಿತು, ಮಳೆ ನಿಲ್ಲದ ಕಾರಣ ಡಕ್ವರ್ತ್‌ ಲೂಯಿಸ್‌ ನಿಯಮದ ಅನ್ವಯ ಜಯದ ತಂಡವನ್ನ ಘೋಷಿಸಲಾಯಿತು. ಭಾರತ 2 ರನ್‌ಗಳ ರೋಚಕ ಜಯ ಸಾಧಿಸಿತು. ಐರ್ಲೆಂಡ್‌ ಪರ ಕ್ರೇಗ್ ಯಂಗ್ 5 ಎಸೆತಗಳಲ್ಲಿ 2 ರನ್‌ ನೀಡಿ 2 ವಿಕೆಟ್‌ ಕಿತ್ತರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್