Bigg Boss OTT 2: ಯಾರ ಪಾಲಾಗಿದೆ ಬಿಗ್ ಬಾಸ್ ವಿನ್ನರ್ ಪಟ್ಟ?

Public TV
1 Min Read

ಲ್ಮಾನ್ ಖಾನ್ (Salman Khan) ನಿರೂಪಣೆಯ ‘ಬಿಗ್ ಬಾಸ್ ಒಟಿಟಿ 2’ (Bigg Boss Ott 2) ಫಿನಾಲೆ ಹಂತ ತಲುಪಿದೆ. ಯಾರಿಗೆ ಗೆಲುವಿನ ಪಟ್ಟ ಯಾರಿಗೆ ಸಿಗಲಿದೆ ಎಂದು ಪ್ರೇಕ್ಷಕರು ಕುತೂಹಲದಿಂದ ಎದುರು ನೋಡ್ತಿದ್ದಾರೆ. ಅದಕ್ಕೆಲ್ಲಾ ಉತ್ತರ ಆಗಸ್ಟ್ 14ರ ಫಿನಾಲೆ ಎಪಿಸೋಡ್‌ನಲ್ಲಿ ಸಿಗಲಿದೆ.

ಬಿಗ್ ಬಾಸ್ ಒಟಿಟಿ ಸೀಸನ್ 2 ಕಾರ್ಯಕ್ರಮ ಈ ಬಾರಿ ಸಾಕಷ್ಟು ವಿವಾದಗಳ ಮೂಲಕ ಸುದ್ದಿಯಾಗಿತ್ತು. ಸ್ಪರ್ಧಿಗಳ ಮಧ್ಯೆ ನಡೆದ ರೊಮ್ಯಾನ್ಸ್, ಮಹಿಳಾ ಸ್ಪರ್ಧಿ ಜೊತೆ ಹಿರಿಯ ನಿರ್ದೇಶಕ ಮಹೇಶ್ ಭಟ್ ನಡೆದುಕೊಂಡ ರೀತಿ ಎಲ್ಲವೂ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿತ್ತು.

ಬಿಗ್ ಬಾಸ್ ಆಟಕ್ಕೆ ತೆರೆ ಬೀಳುವ ಹಂತಕ್ಕೆ ಬಂದು ತಲುಪಿದೆ. ಆಗಸ್ಟ್ 14ರ ರಾತ್ರಿ 9 ರಿಂದ ಬಿಗ್ ಬಾಸ್ ಫಿನಾಲೆ (Bigg Boss Finale) ಸ್ಟ್ರಿಮಿಂಗ್ ಆರಂಭ ಆಗಲಿದೆ. ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಸಂಪೂರ್ಣ ಸಂಚಿಕೆಯನ್ನು ನೋಡಬಹುದು. ಇದನ್ನೂ ಓದಿ:ಚಿತ್ರರಂಗಕ್ಕೆ ಲಂಕೇಶ್ ಮೊಮ್ಮಗ ಸಮರ್ಜಿತ್ ಗ್ರ್ಯಾಂಡ್ ಎಂಟ್ರಿ

ಪೂಜಾ ಭಟ್ (Pooja Bhatt) , ಎಲ್ವಿಶ್ ಯಾದವ್, ಮನಿಶಾ ರಾಣಿ, ಅಭಿಷೇಕ್ ಮಲ್ಹಾನ್, ಬಾಬಿಕಾ ಧುರ್ವೆ ‘ಬಿಗ್ ಬಾಸ್ ಹಿಂದಿ ಒಟಿಟಿ’ ಎರಡನೇ ಸೀಸನ್‌ನ ಫೈನಲ್ ಪ್ರವೇಶಿಸಿದ್ದಾರೆ. ಈ ಐವರಲ್ಲಿ ಒಬ್ಬರು ಟ್ರೋಫಿ ಗೆಲ್ಲುತ್ತಾರೆ. ವಿಜೇತರಿಗೆ 25 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ. ಇದರ ಜೊತೆಗೆ ಬಿಗ್ ಬಾಸ್ ಒಟಿಟಿ ಟ್ರೋಫಿಯೂ ಸಿಗಲಿದೆ.

ಬಿಗ್ ಬಾಸ್ ಫಿನಾಲೆ ಎಪಿಸೋಡ್‌ನಲ್ಲಿ ‘ಜವಾನ್’ (Jawan) ಸಿನಿಮಾದ ಪ್ರಚಾರಕ್ಕಾಗಿ ಶಾರುಖ್ ಖಾನ್- ದೀಪಿಕಾ ಪಡುಕೋಣೆ(Deepika Padukone) ಆಗಮಿಸುತ್ತಾರೆ ಎನ್ನಲಾಗಿದೆ. ಒಂದು ವೇಳೆ ಈ ಸುದ್ದಿ ನಿಜವಾಗಿದಲ್ಲಿ ಶಾರುಖ್- ಸಲ್ಮಾನ್ ಇಬ್ಬರನ್ನ ಒಟ್ಟಿಗೆ ಕಣ್ತುಂಬಿಕೊಳ್ಳಬಹುದು.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್