ಮದುವೆಗೆ ಸಜ್ಜಾದ್ರಾ ತೆಲುಗು ಹೀರೋ- ಅಪ್‌ಡೇಟ್ ಹಂಚಿಕೊಂಡ ವಿಶ್ವಕ್ ಸೇನ್

Public TV
1 Min Read

ತೆಲುಗಿನ ನಟ (Telugu Hero) ವಿಶ್ವಕ್ ಸೇನ್ (Vishwak Sen) ಸದಾ ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದರು. ಈಗ ಮದುವೆ (Wedding) ಬಗ್ಗೆ ಸುಳಿವುವೊಂದನ್ನ ನೀಡಿದ್ದಾರೆ. ತಮ್ಮ ಬಗ್ಗೆ ಬಿಗ್ ಅಪ್‌ಡೇಟ್ ನೀಡುವುದಾಗಿ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಪೋಸ್ಟ್ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

ಇಷ್ಟು ವರ್ಷಗಳಿಂದ ನನ್ನ ಮೇಲೆ ಪ್ರೀತಿ ತೋರಿದ ನನ್ನ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ನಾನು ಚಿರಋಣಿ. ಈಗ ನಾನು ನಿಮ್ಮ ಜೊತೆ ಒಂದು ವಿಚಾರ ಹಂಚಿಕೊಳ್ಳಲು ಬಯಸುತ್ತೇನೆ. ಶೀಘ್ರದಲ್ಲೇ ನಾನು ನನ್ನ ಜೀವನದಲ್ಲಿ ಮತ್ತೊಂದು ಹಂತವನ್ನು ಪ್ರಾರಂಭಿಸಲಿದ್ದೇನೆ. ನಾನು ಕುಟುಂಬಸ್ಥನಾಗುತ್ತಿದ್ದೇನೆ. ಆಗಸ್ಟ್ 15ರಂದು ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸುತ್ತೇನೆ ಎಂದು ವಿಶ್ವಕ್ ಸೇನ್ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಬಳಿಕ ಇದು ಮದುವೆ ವಿಚಾರ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಕೆಲವೊಮ್ಮೆ ಹೀರೋಗಳು ಸಿನಿಮಾ ಪ್ರಚಾರಕ್ಕೆ ಈ ರೀತಿಯ ತಂತ್ರ ಉಪಯೋಗಿಸುವ ಸಾಧ್ಯತೆ ಇರುತ್ತದೆ. ಇದು ಕೂಡ ಅದೇ ರೀತಿಯ ತಂತ್ರ ಇರಬಹುದು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾನಾ- ಮದುವೆ ಕುರಿತು ಅಪ್‌ಡೇಟ್? ಎಲ್ಲದ್ದಕ್ಕೂ ಆಗಸ್ಟ್ 15ರಂದು ಉತ್ತರ ಸಿಗಲಿದೆ. ಇದನ್ನೂ ಓದಿ:ಫೋನ್ ಸ್ವಿಚ್ ಆಫ್ ಮಾಡಿಕೊಂಡ ನಟ: ಉಪೇಂದ್ರಗಾಗಿ ಪೊಲೀಸರಿಂದ ತೀವ್ರ ಶೋಧ

ವಿಶ್ವಕ್ ಸೇನ್ ಟಾಲಿವುಡ್‌ನ (Tollywood) ಯುವ ಹೀರೋ. ‘ವೆಳ್ಳಿಪೋಮಕೇ’ ಚಿತ್ರದ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದರು. ಈ ಸಿನಿಮಾ 2017ರಲ್ಲಿ ರಿಲೀಸ್ ಆಯಿತು. ಆ ಬಳಿಕ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿದರು. ಇತ್ತೀಚೆಗೆ ರಿಲೀಸ್ ಆದ ‘ದಾಸ್ ಕಾ ಧಮ್ಕಿ’ ಚಿತ್ರದ ಮೂಲಕ ಅವರು ಮೆಚ್ಚುಗೆ ಗಳಿಸಿದರು.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್