ಸಾರಿಗೆ ನೌಕರರ ವೇತನ ಕುರಿತು ಬಿಜೆಪಿ ಟ್ವೀಟ್- ಸಚಿವರು ಕಿಡಿ

By
1 Min Read

ಬೆಂಗಳೂರು: ಸಾರಿಗೆ ನೌಕರರಿಗೆ ಸಂಬಳ ಆಗಿದ್ರೂ, ಬಿಜೆಪಿಯಿಂದ (BJP) ವೇತನ ಆಗಿಲ್ಲ ಎಂದು ಟ್ವೀಟ್ ಮಾಡಲಾಗಿದೆ. ಬಿಜೆಪಿಯ ಈ ಟ್ವೀಟ್‍ಗೆ ಕೆಂಡಾಮಂಡಲರಾಗಿರೋ ಸಾರಿಗೆ ಸಚಿವರು, ಬಿಜೆಪಿಗೆ ಮಾನ, ಮರ್ಯಾದೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಸಾರಿಗೆ ನೌಕರರಿಗೆ ವೇತನ ವಿಳಂಬ ಮಾಡಲಾಗ್ತಿದೆ ಎಂದು ಬಿಜೆಪಿ ಸಾರಿಗೆ ಇಲಾಖೆಯನ್ನ ಟಾರ್ಗೆಟ್ ಮಾಡಿ ಟ್ವೀಟ್ ಮಾಡಿದೆ. ಕಳೆದ ಎರಡು ವಾರಗಳಿಂದ ನಡೆಯುತ್ತಿರೋ ಈ ಟ್ವೀಟ್ ವಾರ್ ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಪ್ರತಿಕ್ರಿಯಿಸಿದ್ದು, ಬಿಜೆಪಿಗೆ ಮಾನ ಇಲ್ಲ, ಮರ್ಯಾದೆ ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ರಾತ್ರಿ ವೇಳೆ ವಾಹನ ನಿಲ್ಲಿಸಿದ್ರೆ ಬರ್ತಾರೆ ದರೋಡೆಕೋರರು

ಕಳೆದ ಹತ್ತು ದಿನಗಳ ಹಿಂದೆ ಸಾರಿಗೆ ನೌಕರರಿಗೆ ಅರ್ಧ ಸಂಬಳ ನೀಡಲಾಗಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಮಲಿಂಗಾರೆಡ್ಡಿ, ಸಂಬಳ ವಿಳಂಬ ಮಾಡಿಲ್ಲ ಎಂದು ಗುಡುಗಿದ್ರು. ಮತ್ತೆ ಇಂದು ಬಿಜೆಪಿ ಅಧಿಕೃತ ಪೇಜ್ ನಿಂದ ಟ್ವೀಟ್ (Tweet) ಮಾಡಿರೋದಕ್ಕೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವರು, ಬಿಜೆಪಿಗೆ ಶಕ್ತಿ ಯೋಜನೆಯಿಂದ ಲಕ್ಷಗಟ್ಟಲೇ ಮಹಿಳೆಯರು ಓಡಾಡೋದು ಸಹಿಸಿಕೊಳ್ಳೋಕೆ ಆಗ್ತಿಲ್ಲ. ಅದಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ. ಕೆಎಸ್‍ಆರ್ ಟಿಸಿ ನೌಕರರಿಗೆ ಒಂದನೇ ತಾರೀಖಿಗೆ ಸಂಬಳ ಆಗುತ್ತೆ. ಆಗಸ್ಟ್ 7ರಂದು ಬಿಎಂಟಿಸಿ ನೌಕರರಿಗೆ ಸಂಬಳ ಆಗುತ್ತೆ. ಈಗಾಗಲೇ ಸಂಬಳ ನೀಡಲಾಗಿದೆ. ಆದರೂ ಬಿಜೆಪಿ ಜನರಿಗೆ ತಪ್ಪು ಸಂದೇಶ ನೀಡ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಾರಿಗೆ ನೌಕರರನ್ನೇ ಟಾರ್ಗೆಟ್ ಮಾಡಿ ಬಿಜೆಪಿ ಸರಣಿ ಟ್ವೀಟ್ ದಾಳಿ ಮಾಡ್ತಿದೆ. ಸಂಬಳ ಕೊಟ್ಟರು ಜನರಿಗೆ ತಪ್ಪು ಸಂದೇಶ ಕೊಡುವ ಬಿಜೆಪಿದು ಕೆಟ್ಟಬುದ್ದಿ ಅಂತ ಸಾರಿಗೆ ಸಚಿವರು ಫುಲ್ ಗರಂ ಆಗಿದ್ದಾರೆ. ಅದೇನೆ ಆಗ್ಲಿ ಈ ಟ್ವೀಟ್ ವಾರ್ ಎಲ್ಲಿ ತಲುಪುತ್ತೋ ಕಾದು ನೋಡಬೇಕಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್