4 ವರ್ಷದ ಹಳೆಯ ಕಾಮಗಾರಿಗಳ ಎಸ್‌ಐಟಿ ತನಿಖೆ ಬೇಡ: ಕೆಂಪಣ್ಣ

Public TV
1 Min Read

ಬೆಂಗಳೂರು: ನಾಲ್ಕು ವರ್ಷದ ಹಳೆಯ ಕಾಮಗಾರಿಯ ಬಗ್ಗೆ ಈಗ ಎಸ್‌ಐಟಿ ತನಿಖೆ (SIT Enquiry) ಮಾಡುವುದು ಬೇಡ ಎಂದು ಗುತ್ತಿಗೆದಾರರ ಸಂಘದ (Contractors Association) ಅಧ್ಯಕ್ಷ ಕೆಂಪಣ್ಣ (Kempanna) ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರರು ಟೆಂಡರ್‌ಗಳ ಮೂಲಕ ಗುತ್ತಿಗೆ ಪಡೆದಿದ್ದಾರೆ. ಹೀಗಾಗಿ ಎಸ್‌ಐಟಿ ತನಿಖೆ ನಡೆಸುವ ಅಗತ್ಯ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕಮಿಷನ್ ಬಲೆಯಲ್ಲಿ ಡಿಕೆಶಿ ಏಕಾಂಗಿ- ಸಿಎಂ ಬಳಿಕ ಸಚಿವರೂ ಮೌನ!

 

ರಾಜ್ಯ ಸರ್ಕಾರದಿಂದ 25 ಸಾವಿರ ಕೋಟಿ ರೂ. ಬಾಕಿ (Pending Bills) ಇದ್ದು ಆಗಸ್ಟ್‌ 31ರವರೆಗೆ ಸಮಯ ನೀಡುತ್ತೇವೆ. ಈ ಡೆಡ್‌ಲೈನ್‌ ಒಳಗೆ ಪಾವತಿಸದೇ ಇದ್ದರೆ ಉಗ್ರ ಹೋರಾಟ ನಡೆಸುತ್ತೇವೆ. ಈಗ ನಾವು ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದೇವೆ. ಸರ್ಕಾರ ಕೂಡಲೇ ದುಡ್ಡು ಬಿಡುಗಡೆ ಮಾಡಬೇಕು. ಬಿಜೆಪಿಯ (BJP) ವಿರುದ್ಧ 40% ದಾಖಲೆ ನನ್ನ ಬಳಿ ಇದೆ. ನಾನು ಕೋರ್ಟ್‌ನಲ್ಲಿ ಎಲ್ಲವನ್ನೂ ನೀಡುತ್ತೇನೆ. ಕಾಂಗ್ರೆಸ್ (Congress) ವಿರುದ್ಧದ 15% ಕಮಿಷನ್ ಆರೋಪಕ್ಕೆ ಬಿಬಿಎಂಪಿ ಗುತ್ತಿಗೆದಾರರರು ದಾಖಲೆ ಕೊಡಬೇಕು ಎಂದು ಕೆಂಪಣ್ಣ ಆಗ್ರಹಿಸಿದರು.  ಇದನ್ನೂ ಓದಿ: ಕಮಿಷನ್ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಡಿ.ಕೆ ಶಿವಕುಮಾರ್

ಬಿಬಿಎಂಪಿ ಗುತ್ತಿಗೆದಾರರು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಎಲ್ಲಾ ಕಾಲದಲ್ಲೂ ದೊಡ್ಡ ಶಕ್ತಿಯನ್ನು ಒಡೆಯುವ ಕೆಲಸ ಮಾಡಿದ್ದಾರೆ. ಇದೆಲ್ಲ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದು, ವಿರೋಧ ಪಕ್ಷದ ನಾಯಕ ಇದ್ದರೆ ಹೋಗಿ ಮಾತನಾಡಬಹುದಿತ್ತು. ಆದರೆ ವಿರೋಧ ಪಕ್ಷದ ನಾಯಕನೇ ಇಲ್ಲ. ಹೀಗಾಗಿ ನಾಯಕರನ್ನು ಭೇಟಿಯಾಗುವ ಅನಿವಾರ್ಯತೆ ಏನಿತ್ತು? ಒಡಕು ಮೂಡಿಸಲು ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಿದ್ದಾರೆ ಎಂದು ದೂರಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್