ಸಿಕ್ಸ್ ಪ್ಯಾಕ್ ಅವತಾರದಲ್ಲಿ ಚಾರ್ಲಿ ಬೆಡಗಿ ಸಂಗೀತಾ

By
1 Min Read

777 ಚಾರ್ಲಿ(777 Charlie), ಲಕ್ಕಿ ಮ್ಯಾನ್ (Luckyman) ಸಿನಿಮಾಗಳಲ್ಲಿ ಮಿಂಚಿದ ಸಂಗೀತಾ ಶೃಂಗೇರಿ (Sangeetha Sringeri) ಈಗ ಬದಲಾಗಿದ್ದಾರೆ. ಸಿಕ್ಸ್ ಪ್ಯಾಕ್ ಅವತಾರವೆತ್ತಿದ್ದಾರೆ. ಜಿಮ್ ವೇರ್ ಧಿರಿಸಿನಲ್ಲಿ ತುಂಬಾ ತೂಕ ಇಳಿಸಿರುವ ಬಾಡಿ ಫಿಟ್ ಆಗಿರುವ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಕನಸಿನ ಲುಕ್ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕನಸುಗಳು ನನಸಾಗುತ್ತವೆ, ನಾನು ಬಯಸಿದ ರೀತಿಯಲ್ಲಿ ನನ್ನ ಪ್ಯಾಕ್‌ಗಳನ್ನು ಪಡೆದುಕೊಂಡಿದ್ದೇನೆ ಎಂದು ನಟಿ ತಿಳಿಸಿದ್ದಾರೆ.‌ ಇದನ್ನೂ ಓದಿ:ಕೇಡಿ ಲೇಡಿಯಾಗಿ ಅಬ್ಬರಿಸಲಿದ್ದಾರೆ ಕಿಯಾರಾ ಅಡ್ವಾಣಿ

ನಾನು ಎರಡನೇ ಬಾರಿಗೆ ಟ್ರಾನ್ಸ್ಫಾರ್ಮ್ ಆಗಿದ್ದೇನೆ. ದೈಹಿಕವಾಗಿ ಮಾತ್ರವಲ್ಲ, ಆರೋಗ್ಯದ ವಿಚಾರದಲ್ಲಿಯೂ ಬದಲಾಗಿದ್ದೇನೆ. ನಟಿ ತಮಗಿದ್ದ ಹಾರ್ಮೋನಲ್ ಇಂಬ್ಯಾಲನ್ಸ್ ಕೂಡಾ ಸರಿ ಆಗಿದೆ ಎಂದು ಹೇಳಿದ್ದಾರೆ.

ತಮ್ಮ ದೇಹ ದಂಡಿಸಲು 9 ವಾರಗಳ ತೀವ್ರ ತರಬೇತಿಯ ಜೊತೆ ಪ್ರತಿದಿನ 26 ಕಿ.ಮೀ ಪ್ರಯಾಣಿಸಿರುವುದಾಗಿ ನಟಿ ತಿಳಿಸಿದ್ದಾರೆ. ತಮಗೆ ನಿರಂತರ ಟ್ರೈನ್ ಮಾಡಿದ ಸವೀನ್- ಸುಚಿತ್ರಾ ಅವರಿಗೆ ನನ್ನ ಧನ್ಯವಾದಗಳು ಎಂದಿದ್ದಾರೆ. ಅಂದಹಾಗೆ ಇದು ಎರಡನೇ ಬಾರಿ ನಟಿ ಸಿಕ್ಸ್ ಪ್ಯಾಕ್ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿಗೆ (Rakshit Shetty) ನಾಯಕಿಯಾಗುವ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದ ಸಂಗೀತಾ ಶೃಂಗೇರಿ. ಹೊಸ ಬಗೆಯ ಕಥೆಗಳನ್ನ ಕೇಳ್ತಿದ್ದಾರೆ. ವಿಭಿನ್ನ ಪಾತ್ರದ ಮೂಲಕ ಶೃಂಗೇರಿ ಬೆಡಗಿ ಮನರಂಜಿಸಲಿದ್ದಾರೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್