ಕಾಂಗ್ರೆಸ್ಸಿಗರು ವಸೂಲಿ ದಂಧೆಯಲ್ಲಿ 100% ಮುಳುಗಿದ್ದಾರೆ: ವಿಜಯೇಂದ್ರ ಕಿಡಿ

Public TV
1 Min Read

ಬೆಂಗಳೂರು: ಕಾಂಗ್ರೆಸ್ಸಿಗರು (Congress) ಈಗ ವಸೂಲಿ ದಂಧೆಯಲ್ಲಿ 100% ಮುಳುಗಿ ಹೋಗಿದ್ದಾರೆ ಎಂದು ಶಿಕಾರಿಪುರದ ಶಾಸಕ, ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಿಡಿಕಾರಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಕಾಲು ವರ್ಷವೂ ಕಳೆದಿಲ್ಲ ಆಗಲೇ ಕಂಟ್ರಾಕ್ಟ್ ಕಮೀಷನ್, ವರ್ಗಾವಣೆ ವ್ಯಾಪಾರದ ಹೊಲಸು ಮೈಗೆಲ್ಲಾ ಮೆತ್ತಿಸಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರದ ಮೇಲೆ ಪರ್ಸೆಂಟೇಜ್ ಆರೋಪ ಹೊರಿಸುತ್ತಿದ್ದ ಕಾಂಗ್ರೆಸ್ಸಿಗರು ಇದೀಗ ವಸೂಲಿ ದಂಧೆಯಲ್ಲಿ 100% ಮುಳುಗಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕರ್ನಾಟಕ (BJP Karnataka) ಟ್ವೀಟ್‌ ಮಾಡಿ, ಕಲುಷಿತ ನೀರು ಸೇವಿಸಿ ಸಾರ್ವಜನಿಕರು ಸತ್ತರೆ ನಮ್ಮನ್ನು ಕೇಳಬೇಡಿ. ಆತ್ಮಹತ್ಯೆಯಿಂದ ರೈತರು ಸತ್ತರೆ ಚಿಂತಿಸಬೇಡಿ. ಭ್ರಷ್ಟಾಚಾರ ಮಾಡಿ ಕಮಿಷನ್ ಪಡೆಯಲು ನಾವ್ ರೆಡಿ, ನಾವ್ ರೆಡಿ. ಇದು #ATMSarkara ದ ನಿತ್ಯಗೀತೆ ಎಂದು ಬರೆದು ಟೀಕಿಸಿದೆ.  ಇದನ್ನೂ ಓದಿ: ರಿಲಯನ್ಸ್‌ ಹಿಂದಿಕ್ಕಿ ಲಾಭಾಂಶದಲ್ಲಿ ದೇಶದಲ್ಲಿ ನಂ.1 ಕಂಪನಿಯಾಗಿ ಹೊರಹೊಮ್ಮಿದ ಎಸ್‌ಬಿಐ

ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕರು 40% ಕಮಿಷನ್‌ ಆರೋಪ ಮಾಡಿದ್ದರು. ಈಗ ಬಿಜೆಪಿ ನಾಯಕರು ಕಾಂಗ್ರೆಸ್‌ ಸರ್ಕಾರದ ವಿರುದ್ಧ 100% ಕಮಿಷನ್‌ ಆರೋಪ ಮಾಡಲು ಆರಂಭಿಸಿದ್ದಾರೆ.

 

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article